ಬಾಲಿವುಡ್‌ನಲ್ಲಿ ಕಪೂರ್ ಫ್ಯಾಮಿಲಿಯ ಕುಡಿಗಳು ಸಿನಿಮಾ ಲೋಕದಲ್ಲಿ ಮಿಂಚಿದವರೇ ಹೆಚ್ಚು. ಹಾಗೆಯೇ ಅನಿಲ್ ಕಪೂರ್ (Anil Kapoor) ಪುತ್ರ ಹರ್ಷ್‌ವರ್ಧನ್ (Harshvardhan Kapoor) ಕೂಡ ಬಣ್ಣ ಹಚ್ಚಿ ತೆರೆ ಮುಂದೆ ಬಂದಿದ್ದರು. 2022ರಲ್ಲಿ ಅವರ `ಥಾರ್’ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ರಿಲೀಸ್ ಆಗಿತ್ತು. ಬಳಿಕ ಸುಳಿವೇ ಇರಲಿಲ್ಲ. ಈ ನಡುವೆ ಹರ್ಷ್‌ವರ್ಧನ್ ಸಿನಿಮಾ ತೊರೆದರು ಎಂದೇ ಭಾವಿಸಲಾಗಿತ್ತು. ತೆರೆ ಮುಂದೆ ಹೆಚ್ಚಾಗಿ ಕಾಣಿಸಿಕೊಳ್ಳದ ಹರ್ಷ್‌ವರ್ಧನ್ , ಸೋಶಿಯಲ್ ಮೀಡಿಯಾದಲ್ಲೂ ಹೆಚ್ಚು ಆ್ಯಕ್ಟೀವ್ ಆಗಿ ಇರುವವರಲ್ಲ. ಹೀಗಾಗಿ ಹರ್ಷ್ ಬಣ್ಣದ ಲೋಕಕ್ಕೆ ಗುಡ್‌ಬೈ ಹೇಳಿರಬಹುದೆಂದೇ ಭಾವಿಸಲಾಗಿತ್ತು. ಆದರೀಗ ಹರ್ಷ್ ತಾವು ಸಿನಿಮಾ ತೊರೆದಿಲ್ಲ ಎಂದು ಅಧಿಕೃತವಾಗಿ ಘೋಷಿಸಿದ್ದಾರೆ.

`ಥಾರ್’ ಚಿತ್ರದ ರಿಲೀಸ್ ಬಳಿಕ ಸುದೀರ್ಘ ಗ್ಯಾಪ್ ತೆಗೆದುಕೊಂಡ ಹರ್ಷ್ ಇನ್ಮೇಲೆ ಬಣ್ಣ ಹಚ್ಚಲ್ಲ ಎಂದೇ ಭಾವಿಸಿದ್ದ ಅಭಿಮಾನಿಯೊಬ್ಬ `ಭವೇಶ್ ಜೋಶಿ’ ಸಿನಿಮಾದ ಪೋಸ್ಟರ್ ಹಂಚಿಕೊಂಡು “ಹರ್ಷ್‌ವರ್ಧನ್ ಆ್ಯಕ್ಟರ್ ನೀವು ಸಿನಿಮಾ ಲೋಕ ತೊರೆಯಬಾರದಾಗಿತ್ತು” ಎಂದು ಅಳಲು ತೋಡಿಕೊಂಡಿದ್ದರು. ಬಳಿಕ ಅಭಿಮಾನಿಯ ಈ ಪೋಸ್ಟರ್ ಅನ್ನು ಶೇರ್ ಮಾಡಿರುವ ಹರ್ಷ್‌ವರ್ಧನ್ ಕಪೂರ್ ಉತ್ತರ ಕೊಟ್ಟಿದ್ದಾರೆ. `ಉತ್ತಮ ಸಿನಿಮಾಗಳನ್ನು ಮಾಡಲು ಸಮಯ ಹಿಡಿಯುತ್ತದೆ. ನಾನು ಯಾವತ್ತೂ ಸಿನಿಮಾ ಇಂಡಸ್ಟ್ರಿ ತೊರೆದಿಲ್ಲ. ಥಾರ್ ಮಾಡಲು ಐದು ವರ್ಷ ಬೇಕಾಯಿತು. ಮುಂದಿನ ಪ್ರಾಜೆಕ್ಟ್ ಸಮಯ ತೆಗೆದುಕೊಳ್ಳುತ್ತದೆʼ ಎಂದಿದ್ದಾರೆ. ಅಲ್ಲಿಗೆ ಹರ್ಷ್‌ವರ್ಧನ್ ಸಿನಿಮಾ ತೊರೆದರು ಎಂಬ ವದಂತಿಗೆ ತೆರೆ ಬಿದ್ದಂತೆ. ಇದನ್ನೂ ಓದಿ: ಪೆದ್ದಿಗೆ ಮತ್ತೊಂದು ಸಂಕಷ್ಟ – ಬಚಾವಾದ್ರು ರಾಮ್‌ಚರಣ್

ಥಾರ್ ಬಳಿಕ ʻಶೂಟರ್ ಅಭಿನವ್ ಬಿಂದ್ರಾʼ ಜೀವನ ಚರಿತ್ರೆಯ ಸಿನಿಮಾ ಘೋಷಣೆಯಾಗಿತ್ತು. ಆದರೆ ಅದು ಡ್ರಾಪ್ ಆಗಿದೆ. ಹೀಗಾಗಿ ಅನಿಲ್ ಕಪೂರ್ ಪುತ್ರ ಹರ್ಷ್‌ವರ್ಧನ್ ಮುಂದಿನ ಪ್ರಾಜೆಕ್ಟ್ ಯಾವುದಿರಬಹುದು ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಇಷ್ಟು ದಿನ ಸೈಲೆಂಟಾಗೇ ಇದ್ದ ಹರ್ಷ್‌ವರ್ಧನ್ ಈಗ ಉತ್ತರ ನೀಡಿದ್ದಾರೆ. ಅಂದ್ರೆ ಹೊಸ ಪ್ರಾಜೆಕ್ಟ್ ಮಾಡ್ತಿರಬಹುದು ಎಂದು ಊಹಿಸಲಾಗುತ್ತಿದೆ.
