– ಫ್ರೀ ಬಸ್‌ಗಾಗಿ ಇನ್ನೂ ಒಂದು ತಿಂಗಳು ಕಾಯಬೇಕಾದ ಪರಿಸ್ಥಿತಿ
ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ (DK Shivakumar) ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡೋದಾಗಿ ಘೋಷಣೆ ಮಾಡಿದ್ದರು. ಸದ್ಯ ಪಾಸ್ ವಿತರಣೆಯಾಗುವುದು ಮತ್ತಷ್ಟು ವಿಳಂಬವಾಗಲಿದ್ದು, ಈ ತಿಂಗಳು ಸಿಗೋದು ಡೌಟ್ ಎನ್ನಲಾಗುತ್ತಿದೆ.
ಡಿಕೆ ಶಿವಕುಮಾರ್ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ ದಿನ ಸಚಿವ ಸಂಪುಟ ಸಭೆ ಮಾಡಿ, ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ (Free Bus Pass) ನೀಡೋದಾಗಿ ಘೋಷಣೆ ಮಾಡಿದ್ದರು. ಸದ್ಯ ಪಾಸ್ ವಿತರಣೆಯ ಸಿದ್ಧತೆ ನಡೆಯುತ್ತಿದೆ. ಇದನ್ನೂ ಓದಿ: ಬಿಟ್‌ಕಾಯಿನ್ ಹಗರಣ: ಹ್ಯಾಕರ್ ಶ್ರೀಕಿಯಿಂದ ನಲಪಾಡ್‌ಗೆ ಪಾಲು
ಸಾರಿಗೆ ಸಚಿವ ಬೈರತಿ ಸುರೇಶ್ (Byrathi Suresh) ಸಭೆ ಮಾಡಿ, ಬಸ್ ಪಾಸ್ ವಿತರಣೆ ಸಂಬಂಧ ಮಾಹಿತಿ ಪಡೆದಿದ್ದಾರೆ. ಖರ್ಚು ವೆಚ್ಚ ಮತ್ತು ಎಷ್ಟು ವಿದ್ಯಾರ್ಥಿಗಳಿಗೆ ನೀಡಬೇಕಾಗುತ್ತೆ ಅಂತಾ ಮಾಹಿತಿ ಪಡೆದಿದ್ದಾರೆ. ಬಳಿಕ ಮಾತನಾಡಿ, ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ ಉಚಿತ ಬಸ್ ಪಾಸ್ ಕೊಟ್ಟೆ ಕೊಡ್ತೇವೆ. ಕ್ಯಾಬಿನೆಟ್ ಮುಂದೆ ಇಡುತ್ತೇವೆ. ಅಷ್ಟು ಬಸ್ ಪಾಸ್ ಪ್ರಿಂಟ್ ಆಗಬೇಕು ಸಮಯ ತೆಗೆದುಕೊಳ್ಳುತ್ತೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಹೀಗಾಗಿ ಪಾಸ್ ವಿತರಣೆ ಇನ್ನೂ ಒಂದು ತಿಂಗಳು ತಡ ಆಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.
ಇನ್ನೂ ಉಚಿತ ಬಸ್ ಪಾಸ್ ವ್ಯಾಪ್ತಿಗೆ ಸುಮಾರು 10 ಲಕ್ಷ ವಿದ್ಯಾರ್ಥಿಗಳು ಬರುತ್ತಾರೆ ಎಂದು ಅಂದಾಜಿಸಲಾಗಿದೆ. ಸರ್ಕಾರಕ್ಕೆ 1,500 ರಿಂದ 1,800 ಕೋಟಿ ರೂ ವೆಚ್ಚ ಆಗುವ ಸಾಧ್ಯತೆಯಿದೆ. ಹೀಗಾಗಿ ಯಾವಾಗ ಬಸ್ ಪಾಸ್ ವಿತರಣೆ ಮಾಡ್ತಾರೆ ಕಾದು ನೋಡಬೇಕಿದೆ.ಇದನ್ನೂ ಓದಿ: ಹಾರ್ಮುಜ್ ಜಲಸಂಧಿ ಬಳಿ ಅಮೆರಿಕದ ಅಪಾಚೆ ಹೆಲಿಕಾಪ್ಟರ್ ಪತನ – ಇಬ್ಬರು ಪೈಲಟ್‌ಗಳು ಸೇಫ್
