CrimeLatestMain Post

ಮಹಿಳೆ ಮೇಲೆ ಅತ್ಯಾಚಾರ, ಕಿರುಕುಳ – ಕಾಂಗ್ರೆಸ್ MLA ವಿರುದ್ಧ ಕೇಸ್

ಭೋಪಾಲ್: ಜಬಲ್‍ಪುರದ ಮಹಿಳೆ ಮೇಲೆ ಅತ್ಯಾಚಾರವೆಸಗಿ, ಮಾನಸಿಕ ಕಿರುಕುಳ ನೀಡಿದ ಆರೋಪದಡಿ ಮಧ್ಯಪ್ರದೇಶದ (MadhyaPradesh) ಧಾರ್ (Dhar) ಜಿಲ್ಲೆಯ ಕುಕ್ಷಿಯ ಕಾಂಗ್ರೆಸ್ ಶಾಸಕ (Congress MLA) ಉಮಂಗ್ ಸಿಂಘಾರ್ (Umang Singhar) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಹೌದು, ಮಹಿಳೆಯೊಬ್ಬರ ಮೇಲೆ ಅತ್ಯಾಚಾರವೆಸಗಿ, ಮಾನಸಿಕ ಕಿರುಕುಳ ನೀಡಿದ ಆರೋಪದಡಿ ಉಮಂಗ್ ಸಿಂಘಾರ್ ವಿರುದ್ಧ ಧಾರ್‌ನ ನೌಗಾಂವ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ), 377 (ಅಸ್ವಾಭಾವಿಕ ಅಪರಾಧಗಳು) ಮತ್ತು 498 (ವಿವಾಹಿತ ಸ್ತ್ರೀಯನ್ನು ಆಪರಾಧಿಕ ಉದ್ದೇಶದಿಂದ ಪುಸಲಾಯಿಸುವುದು ಅಥವಾ ಕರೆದುಕೊಂಡುಹೋಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಮದುವೆಯಾದ್ಮೇಲೂ ಅಕ್ರಮ ಸಂಬಂಧ – ಮಾಜಿ ಪ್ರೇಯಸಿಯನ್ನ ಕತ್ತರಿಸಿ, ಅರೆಬೆತ್ತಲಾಗಿ ಬಿಸಾಡಿ ವಿಕೃತಿ

ರಾಷ್ಟ್ರೀಯ ಕಾಂಗ್ರೆಸ್ ಅನ್ನು ಮಧ್ಯಪ್ರದೇಶ ವಿಧಾನಸಭೆಯಲ್ಲಿ ಉಮಂಗ್ ಸಿಂಘಾರ್ ಅವರು ಗಂಧ್ವಾನಿ ಕ್ಷೇತ್ರದಿಂದ ಪ್ರತಿನಿಧಿಸುತ್ತಾರೆ. 2019-2020 ರವರೆಗೆ ಉಮಂಗ್ ಸಿಂಘಾರ್ ರಾಜ್ಯದ ಮಾಜಿ ಅರಣ್ಯ ಸಚಿವರಾಗಿದ್ದರು. ಇದನ್ನೂ ಓದಿ: ಮಂಗಳೂರು ಬಾಂಬ್ ಬ್ಲಾಸ್ಟ್‌ಗೆ ನಿಷೇಧಿತ PFI ಲಿಂಕ್ – ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳಲು ಸ್ಕೆಚ್

Live Tv

Leave a Reply

Your email address will not be published. Required fields are marked *

Back to top button