ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) ಒಂದು ವರ್ಷ ಚಿನ್ನ ಖರೀದಿಸಬೇಡಿ ಅಂತ ಕರೆ ಕೊಟ್ಟ ಬೆನ್ನಲ್ಲೇ ಜನ ಇದೀಗ ಚಿನ್ನ ಖರೀದಿಯಿಂದ ವಿಮುಖರಾಗಿದ್ದು, ಚಿನ್ನದಂಗಡಿಗಳು ಖಾಲಿ ಖಾಲಿ ಹೊಡೆಯುತ್ತಿವೆ.
ಬೆಂಗಳೂರಲ್ಲಿ ಚಿನ್ನ-ಬೆಳ್ಳಿ ವ್ಯಾಪಾರದಲ್ಲಿ 30-40% ಕುಸಿತವಾಗಿದೆ. ಗ್ರಾಹಕರಿಲ್ಲದೇ ಬೆಂಗಳೂರಿನ ಚಿನ್ನದ ಅಂಗಡಿಗಳೆಲ್ಲಾ ಬಿಕೋ ಎನ್ನುತ್ತಿವೆ. ಬಹುತೇಕ ನಗರಗಳಲ್ಲಿ ಇದೇ ಪರಿಸ್ಥಿತಿ. ಗ್ರಾಹಕರಿಲ್ಲದೆ ಪ್ರತಿಷ್ಠಿತ ಬ್ರ‍್ಯಾಂಡ್‌ಗಳ ಜುವೆಲ್ಲರಿ ಶಾಪ್‌ಗಳು ಬಿಕೋ ಎನ್ನುತ್ತಿವೆ. ಇದನ್ನೂ ಓದಿ:ಸ ರ್ಕಾರದ ಸಂಧಾನ ಸಭೆ ವಿಫಲ – ಬಸ್ ಬಂದ್ ಆಗೋದು ಫಿಕ್ಸ್
ಮೋದಿ ಕರೆ ಕೊಟ್ಟ ಬಳಿಕ ಮರುದಿನವೇ ಚಿನ್ನದ ಮೇಲಿನ ಆಮದು ತೆರಿಗೆ ಹೆಚ್ಚಳವಾಗಿದೆ. ಮದುವೆ ಮೊದಲಾದ ಶುಭಕಾರ್ಯಗಳಿಗೆ ಎಷ್ಟೇ ದರ ಏರಿಕೆಯಾದ್ರೂ ಜನ ಚಿನ್ನ ಕೊಳ್ಳುತ್ತಿದ್ರು. ಆದ್ರೆ ಕೆಲವೇ ದಿನಗಳಲ್ಲಿ ಮದುವೆ ಸೀಜನ್ ಮುಕ್ತಾಯವಾಗ್ತಿದೆ.
ಮೇ 17ರಿಂದ ಜೂ.15ರವರೆಗೆ ಅಧಿಕ ಮಾಸ ಇದೆ. ಅಲ್ಲದೇ ಜು.14ರಿಂದ ಆ.12ರವರೆಗೆ ಆಷಾಢ ಮಾಸ ಬೇರೆ ಬರ್ತಿದೆ. ಅಧಿಕ ಮಾಸ ಹಾಗೂ ಆಷಾಢ ಮಾಸ ಈ ವರ್ಷ ಎರಡು ಒಟ್ಟೊಟ್ಟಿಗೆ ಬರ್ತಿರೋ ಕಾರಣ ಆಗಸ್ಟ್ ಕೊನೆ ಅಥವಾ ಸೆಪ್ಟೆಂಬರ್‌ವರೆಗೆ ಯಾವುದೇ ಶುಭ ಕಾರ್ಯಕ್ರಮಗಳನ್ನು ನಡೆಸಲು ಮುಹೂರ್ತಗಳಿಲ್ಲ. ಹೀಗಾಗಿ ಜನ ಇನ್ನೆರಡು ತಿಂಗಳು ಆಭರಣಕೊಳ್ಳಲು ಮುಂದೂಡುತ್ತಿದ್ದಾರೆ.ಇದನ್ನೂ ಓದಿ: ಆನೆಗಳ ಸ್ನಾನ 100 ಅಡಿ ದೂರದಲ್ಲಿ ನಿಂತು ನೋಡಲಷ್ಟೇ ಅವಕಾಶ: ಈಶ್ವರ ಖಂಡ್ರೆ

