ಕೋಲಾರ: ಬೆಟ್ಟದ ನೆಲ್ಲಿಕಾಯಿ ಗಂಟಲಲ್ಲಿ ಸಿಲುಕಿ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆ ಮಾಲೂರು ಪಟ್ಟದ ಗಾಂಧಿ ಸರ್ಕಲ್‌ನಲ್ಲಿಂದು ಈ ಘಟನೆ ನಡೆದಿದ್ದು, ರವಿ ಹಾಗೂ ಮಾಲಾ ದಂಪತಿಯ ಎರಡು ವರ್ಷದ ಗಂಡು ಮಗು ವಿಜಯೇಂದ್ರ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಸರ್ಕಾರದ ಸಂಧಾನ ಸಭೆ ವಿಫಲ – ಬಸ್ ಬಂದ್ ಆಗೋದು ಫಿಕ್ಸ್
ಘಟನೆ ನಡೆದ ದಿನ ಆಟವಾಡುವಾಗ ಮಗು ಬೆಟ್ಟದ ನೆಲ್ಲಿಕಾಯಿ ನುಂಗಿದೆ. ಈ ವೇಳೆ ಅದು ಗಂಟಲಲ್ಲಿ ಸಿಲುಕಿಕೊಂಡಿದೆ. ಪರಿಣಾಮ ಉಸಿರಾಟದ ಸಮಸ್ಯೆ ಉಂಟಾಗಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗಂಟಲಲ್ಲಿ ಸಿಲುಕಿದ್ದ ನೆಲ್ಲಿಕಾಯಿ ಹೊರ ತೆಗೆಯಲಾಗದೇ ಮಗು ಸಾವನ್ನಪ್ಪಿದೆ.
ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಮಾಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ:ಮುಜಫ್ಫರ್‌ಪುರ್‌ನಲ್ಲಿ ವಂದೇ ಭಾರತ್ ಸೇರಿ ಮೂರು ರೈಲುಗಳ ಮೇಲೆ ಕಲ್ಲೆಸೆತ

