ಮುಂಬೈ: ಖ್ಯಾತ ನಿರ್ದೇಶಕ ಅಟ್ಲೀ(Atlee) ಹಾಗೂ ಅವರ ಪತ್ನಿ ಪ್ರಿಯಾ ಅಟ್ಲೀ(Priya Atlee) ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಎರಡನೇ ಮಗುವಿನ ಹೆಸರನ್ನು ರಿವೀಲ್ ಮಾಡಿದ್ದಾರೆ. ಅಟ್ಲೀ ತಮ್ಮ ಮಗಳಿಗೆ ಮಿಯೂ(Miyou) ಎಂಬ ವಿಶೇಷ ಹೆಸರಿನಿಂದ ನಾಮಕರಣ ಮಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಮಗುವಿನ ಪುಟ್ಟ ಕೈ ಚಿತ್ರವನ್ನು ಹಂಚಿಕೊಂಡಿರುವ ದಂಪತಿ, “ನಮ್ಮ ಹೃದಯದಲ್ಲಿ ದೊಡ್ಡ ಸ್ಥಾನ ಪಡೆದಿರುವ ಪುಟ್ಟ ವ್ಯಕ್ತಿ” ಎಂದು ಬರೆದುಕೊಂಡಿದ್ದಾರೆ. ನಮ್ಮ ಪ್ರೀತಿಯ ಕಲೆಗೆ ಈಗ ಒಂದು ಹೆಸರಿದೆ. ಅದುವೇ ‘ಮಿಯೂ’ ಎಂದು ಅಟ್ಲೀ ಹಾಗೂ ಪ್ರಿಯಾ ಜಂಟಿಯಾಗಿ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ ಪೋಸ್ಟ್‌ನಲ್ಲಿ ಅವರ ಮೊದಲ ಮಗ ಮೀರ್ ಹೆಸರನ್ನ ಸಹ ಬರೆದುಕೊಂಡಿದ್ದಾರೆ.
ಮಿಯೂ ಹೆಸರಿನ ಅರ್ಥ
ಜಪಾನೀಸ್ ಭಾಷೆಯಲ್ಲಿ ‘ಮೀ’ ಎಂದರೆ ಪ್ರೀತಿ ಹಾಗೂ ‘ಯೂ’ ಎಂದರೆ ಸೌಮ್ಯತೆ ಎಂಬ ಅರ್ಥವಿದೆ. ಈ ಎರಡು ಪದಗಳು ಸೇರಿ ‘ಮಿಯೂ’ ಎಂದರೆ ಪ್ರೀತಿ ಮತ್ತು ಸೌಮ್ಯತೆಯ ಸಂಕೇತ ಎಂದು ಅರ್ಥೈಸಲಾಗುತ್ತದೆ.
View this post on Instagram
ಏಪ್ರಿಲ್ 20ರಂದು ದಂಪತಿಗಳು ತಮ್ಮ ಎರಡನೇ ಮಗುವಿನ ಆಗಮನವನ್ನು ಸೋಷಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. “ಹೇ! ನನಗೆ ಒಂದು ತಂಗಿ ಸಿಕ್ಕಿದ್ದಾಳೆ” ಎಂದು ಬರೆದಿದ್ದ ವಿಶೇಷ ಪೋಸ್ಟ್ ಅನ್ನು ಅವರು ಹಂಚಿಕೊಂಡಿದ್ದರು. ಇದನ್ನೂ ಓದಿ: ತುಳುನಾಡಿನ ಕೊರಗಜ್ಜ ದೈವಕ್ಕೆ ಹರಕೆ ಕೋಲ ನೀಡಿದ ನಟಿ ರಚಿತ ರಾಮ್
ಅಟ್ಲೀ ಮತ್ತು ಪ್ರಿಯಾ ಹಲವು ವರ್ಷಗಳ ಡೇಟಿಂಗ್ ಬಳಿಕ 2014ರಲ್ಲಿ ಕುಟುಂಬದವರ ಸಮ್ಮುಖದಲ್ಲಿ ವಿವಾಹವಾಗಿದ್ದರು. ದಂಪತಿಗೆ 2023ರ ಜನವರಿ 31ರಂದು ಮೊದಲ ಮಗ ಮೀರ್ ಜನಿಸಿದ್ದ.
ಸಧ್ಯಕ್ಕೆ ಅಟ್ಲೀ ತಮ್ಮ ಮುಂದಿನ ಬಹು ನಿರೀಕ್ಷಿತ ‘ರಾಕಾ’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಹಾಗೂ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ.ನಾನು ಸಹಾಯ ಮಾಡುತ್ತೇನೆ.

