ಬೆಂಗಳೂರು: ದೆಹಲಿ ಚುನಾವಣೆ ಹಾಗೂ ಮಾಜಿ ಸಚಿವ ಎಂಟಿಬಿ ನಾಗರಾಜ್ ಹಾಗೂ ಎಚ್.ವಿಶ್ವನಾಥ್ ಅವರ ಎರಡು ಸ್ಥಾನಗಳ ಗೊಂದಲದಿಂದ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಕಾಲಾವಕಾಶ ಪಡೆದುಕೊಂಡಿದ್ದು, ಅವರೊಂದಿಗೆ ಮುಕ್ತವಾಗಿ ಚರ್ಚೆ ನಡೆಸಿ ಶೀಘ್ರ ಸಂಪುಟ ವಿಸ್ತರಣೆ ನಡೆಯಲಿದೆ ಎಂದು ಬಿಜೆಪಿ ಸಂಸದರಾದ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ನಗರದ ಹೊರವಲಯ ಆನೇಕಲ್ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 17 ಶಾಸಕರಲ್ಲಿ ಯಾವುದೇ ಅಸಮಾಧಾನವಿಲ್ಲ. ಅವರು ಸಿಎಂ ಯಡಿಯೂರಪ್ಪ ಅವರ ಆಡಳಿತವನ್ನು ಮೆಚ್ಚಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಮಾನ ಸಿಗುತ್ತದೆ ಎಂದರು.
Advertisement
Advertisement
17 ಶಾಸಕರು ಬಿಜೆಪಿಗೆ ಬರುವ ಮುಂಚೆ ಬಿಎಸ್‍ವೈ ಅವರು ಸಾಕಷ್ಟು ಬಾರಿ ಹೇಳಿದ್ದರು. ಜೆಡಿಎಸ್ ಹಾಗೂ ಕಾಂಗ್ರೆಸ್ ಶಾಸಕರು ಬರುತ್ತಾರೆ ಎಚ್ಚರಿಕೆಯಿಂದಿರಿ ಎಂದರು ಅವರು ಕೇಳಲಿಲ್ಲ. ಇದೀಗ ಮತ್ತೊಮ್ಮೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಹಲವು ಶಾಸಕರು ಬರುತ್ತಾರೆಂದು ಬಿಎಸ್‍ವೈ ಹೇಳುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಎಚ್ಚೆತ್ತುಕೊಳ್ಳದಿದ್ದರೆ ಎರಡು ಪಕ್ಷಗಳು ಕರ್ನಾಟಕ ರಾಜ್ಯದಲ್ಲಿ ನಿರ್ನಾಮವಾಗುತ್ತದೆ ಎಂದರು ಎಚ್ಚರಿಸಿದರು.
Advertisement
ದೇಶದಲ್ಲಿ ಭಯೋತ್ಪಾದನೆಯ ಕುರುಹುಗಳು ಪತ್ತೆಯಾಗುತ್ತಿದ್ದು ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದಿಂದ ಯಾರು ಭಾರತದ ಒಳಕ್ಕೆ ನುಸುಳಿಸುತ್ತಿದ್ದಾರೆ ಎಂಬುವುದು ಇಂದು ವಿಶ್ವದಲ್ಲಿಯೇ ಜಾಹೀರಾಗಿದೆ. ಆದ್ದರಿಂದಲೇ ಸಿಎಎ ಹಾಗೂ ಎನ್.ಆರ್.ಸಿಗಳನ್ನು ದೇಶದಲ್ಲಿ ತರಬೇಕೆಂದು ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆಯಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ. ಕರ್ನಾಟಕದ ಬೆಂಗಳೂರು, ಕೋಲಾರ ಸೇರಿದಂತೆ ಎಲ್ಲಿ ನೋಡಿದರು ಶಂಕಿತ ಭಯೋತ್ಪಾದಕರಿದ್ದಾರೆ. ನಾನು ಕಾಂಗ್ರೆಸ್ ಪಕ್ಷದ ನಾಯಕರನ್ನು ಪ್ರಶ್ನೆ ಮಾಡುತ್ತೇನೆ. ದೇಶದಲ್ಲಿ ಭಯೋತ್ಪಾದಕರ ಹಾವಳಿ ಹೆಚ್ಚಾಗುತ್ತಿದೆ. ಇದರಲ್ಲಿ ಬಹುತೇಕವಾಗಿರು ಅಲ್ಪಸಂಖ್ಯಾತರ ಅಲ್ಲ, ಪಾಕ್, ಬಾಂಗ್ಲಾದಿಂದ ಬಂದವರಲ್ಲ ಎಂದು ವೇದಿಕೆಯ ಮೇಲೆ ಹೇಳಲಿ ಎಂದು ಸವಾಲ್ ಎಸೆದರು.