ಬೆಂಗಳೂರು: ಮಗ ಗುಟ್ಕಾ ತಿಂದ ಎಂದು ತಾಯಿಯೊಬ್ಬಳು ಖಾರ ಮಸಾಲೆ ರುಬ್ಬಿ ಮುಖಕ್ಕೆ ಹಚ್ಚಿದ ಘಟನೆಯೊಂದು ಬೆಂಗಳೂರಿನ ಸೋಮಸುಂದರ ನಗರದಲ್ಲಿ ನಡೆದಿದೆ.
Advertisement
ಮಗ ಗುಟ್ಕಾ ತಿಂದ ಅಂದ ಮಾತ್ರಕ್ಕೆ ಖಾರ ಮಸಾಲೆ ಹಚ್ಚಿದಾಕೆಯನ್ನು ತಮ್ರೀನ್ ಎಂದು ಗುರುತಿಸಲಾಗಿದೆ. ತಮ್ರೀನ್, ಮಗ ಗುಟ್ಕಾ ತಿಂದ ಎಂದು ಮನೆಯಲ್ಲಿ ಖಾರ ಮಸಾಲೆ ಮಿಕ್ಸಿಯಲ್ಲಿ ರುಬ್ಬಿ ಹಚ್ಚಿದ್ದಾಳೆ. ನೋವು ತಾಳಲಾರದೆ ಬಾಲಕ ಕಣ್ಣೀರು ಹಾಕಿದರೂ ಬಿಡದೆ ಚಿತ್ರಹಿಂಸೆ ನೀಡಿರುವ ವೀಡಿಯೋ ಇದೀಗ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸುರಂಗದಲ್ಲಿ ಸಿಲುಕಿದ ಕಾರ್ಮಿಕರು – 7 ಮಂದಿಯ ರಕ್ಷಣೆ
Advertisement
Advertisement
ತಮ್ರೀನ್, ಮಗನ ಕಣ್ಣಿಗೆ ಮತ್ತು ಮುಖಕ್ಕೆ ಮಸಾಲೆ ಹಚ್ಚುತ್ತಿದ್ದಂತೆ ತಪ್ಪಾಯ್ತು ಎಂದು ಮಗ ಪರಿಪರಿಯಾಗಿ ಬೇಡಿಕೊಂಡರು ತಮ್ರೀನ್ ಬಿಡದೆ ಮಸಾಲೆ ಹಚ್ಚಿದ್ದಾಳೆ. ಈ ಘಟನೆಯ ವೀಡಿಯೋವನ್ನು ಸ್ವತಃ ತಂದೆಯೇ ಸೆರೆ ಹಿಡಿದಿರುವುದಾಗಿ ವರದಿಯಾಗಿದೆ. ಅಲ್ಲದೆ ವೀಡಿಯೋದಲ್ಲಿ ತಮ್ರೀನ್ ಜೊತೆ ಪತಿ ಬೇಡ ಎಂದರು ಕೂಡ ಮಗನಿಗೆ ಚಿತ್ರಹಿಂಸೆ ನೀಡಿದ್ದು, ಪತಿಗೆ ಬೈಯುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ನಿರುದ್ಯೋಗ ಹೆಚ್ಚಾಗಲು ಕಾರಣ ಕೇಂದ್ರ ಸರ್ಕಾರ: ರಾಹುಲ್ ಗಾಂಧಿ
Advertisement