ನವದೆಹಲಿ: ಭಾರತದಲ್ಲಿ ಕೇವಲ ಒಂದು ದಿನದಲ್ಲಿ ಕೋವಿಡ್-19 ಪ್ರಕರಣಗಳು 50 ಸಾವಿರದ ಗಡಿ ದಾಟಿದೆ. ಅತ್ಯಂತ ಹೆಚ್ಚು ಕೋವಿಡ್ ಕೇಸ್‌ಗಳನ್ನು ವರದಿ ಮಾಡಿರುವ ರಾಜ್ಯಗಳಲ್ಲಿ ಕರ್ನಾಟಕವೂ ಸೇರಿದೆ.
ಮಹರಾಷ್ಟ್ರ, ದೆಹಲಿ, ಪಶ್ಚಿಮ ಬಂಗಾಳ, ತಮಿಳುನಾಡು ಹಾಗೂ ಕರ್ನಾಟಕ ಹೀಗೆ ಹಲವು ರಾಜ್ಯಗಳು ಅತೀ ಹೆಚ್ಚು ಕೋವಿಡ್ ಕೇಸ್‌ಗಳನ್ನು ವರದಿ ಮಾಡಿದೆ. ಮಂಗಳವಾರದ ಕೋವಿಡ್ ವರದಿಯ ಪ್ರಕಾರ ದೇಶದಲ್ಲಿ ಒಂದೇ ದಿನ 50,000 ಕ್ಕೂ ಹೆಚ್ಚಿನ ಕೋವಿಡ್ ಕೇಸ್‌ಗಳು ಪತ್ತೆಯಾಗಿವೆ. ಇದನ್ನೂ ಓದಿ: ಮಿಕ್ಸಿಂಗ್ ಡೋಸ್ 4 ಪಟ್ಟು ಪ್ರಭಾವಿ- ಸಂಶೋಧಕರು
Advertisement
Advertisement
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಬೆಳಗ್ಗೆ ಬಿಡುಗಡೆ ಮಾಡಿರುವ ವರದಿ ಹೀಗಿದೆ: ಮಹಾರಾಷ್ಟ್ರ – 18,466, ಪಶ್ಚಿಮ ಬಂಗಾಳ – 9,073, ದೆಹಲಿ – 5,481, ಕೇರಳ – 3,640, ತಮಿಳುನಾಡು – 2,731, ಕರ್ನಾಟಕ – 2,479, ಗುಜರಾತ್ – 2,265, ರಾಜಸ್ಥಾನ – 1,137, ತೆಲಂಗಾಣ – 1,052, ಪಂಜಾಬ್ – 1,027, ಬಿಹಾರ – 893, ಒಡಿಶಾ – 680, ಗೋವಾ – 592, ಆಂಧ್ರಪ್ರದೇಶ – 334, ಹಿಮಾಚಲ ಪ್ರದೇಶ – 260. ಇದನ್ನೂ ಓದಿ: ವಿಶ್ವಕ್ಕೆ ಮತ್ತೆ ಕೊರೊನಾ ಕಿರಿಕಿರಿ – ಅಮೆರಿಕಾದಲ್ಲಿ ಪ್ರತಿ ಆರು ಮಂದಿಯಲ್ಲಿ ಒಬ್ಬರಿಗೆ ಸೋಂಕು
Advertisement
ಮಂಗಳವಾರದವರೆಗೆ ದೇಶದಲ್ಲಿ 147.62 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಹಾಗೂ ಸೋಮವಾರ 87,66,164 ಜನರು ಲಸಿಕೆಗಳನ್ನು ಪಡೆದುಕೊಂಡಿದ್ದಾರೆ.