LatestMain PostNational

ಪಕ್ಷದ ಗೆಲುವಿಗೆ ಸಹಕರಿಸಿದ ಕಾರ್ಯಕರ್ತರಿಗೆ ಧನ್ಯವಾದ: ಮೋದಿ

ನವದೆಹಲಿ: ಪಕ್ಷದ ಗೆಲುವಿಗೆ ಸಹಕರಿಸಿದ ಎಲ್ಲಾ ಕಾರ್ಯಕರ್ತರಿಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ಹೇಳಿದ್ದಾರೆ.

ಟ್ವೀಟ್ ಮೂಲಕ ಧನ್ಯವಾದ ತಿಳಿಸಿದ ಮೋದಿ, ಐತಿಹಾಸಿಕ ಜಯಕ್ಕಾಗಿ ಎಲ್ಲರಿಗೂ ಕೃತಜ್ಞತೆ. ಪಕ್ಷದ ಗೆಲುವಿಗಾಗಿ ತಳಮಟ್ಟದಲ್ಲಿ ಬಹಳಷ್ಟು ಶ್ರಮವಹಿಸಿ ಕೆಲಸ ಮಾಡಿದ ಬಿಜೆಪಿ ಕಾರ್ಯಕರ್ತರ ನನ್ನ ಅಭಿನಂದನೆ ಅಂತಾ ಮೋದಿ ಹೇಳಿದ್ದಾರೆ.

ಮಾತ್ರವಲ್ಲದೇ ಈ ಗೆಲುವಿನಲ್ಲಿ ಯುವ ಕಾರ್ಯಕರ್ತರ ಸಹಕಾರವೂ ಇದ್ದು ಅವರ ಅಭೂತಪೂರ್ವ ಬೆಂಬಲಕ್ಕೆ ಧನ್ಯವಾದ. ಈ ಮೂಲಕ ಪಂಜಾಬ್‍ನಲ್ಲಿ 10 ವರ್ಷಗಳ ಕಾಲ ಅಕಾಲಿದಳ ಮತ್ತು ಬಿಜೆಪಿ ಮೈತ್ರಿಕೂಟಕ್ಕೆ ಅಧಿಕಾರ ನಡೆಸಲು ಅವಕಾಶ ಮಾಡಿಕೊಟ್ಟಿದ್ರಿ. ಅಂತೆಯೇ ಪಂಜಾಬ್ ಮತದಾರರಿಗೂ ಅಭಿನಂದನೆ ಅಂತಾ ಮೋದಿ ಟ್ವಿಟ್ಟರ್‍ನಲ್ಲಿ ತಿಳಿಸಿದ್ದಾರೆ.

4 ರಾಜ್ಯದಲ್ಲಿ ಅಧಿಕಾರ: ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ, ಗೋವಾದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಪಂಜಾಬ್‍ನಲ್ಲಿ ಬಿಜೆಪಿ ಶೇಖಡಾವಾರು ಹೆಚ್ಚು ಮತಗಳನ್ನು ಗಳಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Back to top button