ವಾಷಿಂಗ್ಟನ್: ಮಾಡೆಲ್ ಒಬ್ಬಳು ಹಾಲಿವುಡ್ ಫೇಮಸ್ ತಾರೆ, ಖ್ಯಾತ ರೂಪದರ್ಶಿ ಕಿಮ್ ಕಾರ್ಡಶಿಯನ್ ಹೋಲುವಂತೆ ಸರ್ಜರಿ ಮಾಡಿಕೊಂಡು ಎಡವಟ್ಟು ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
Advertisement
ರಿಯಾಲಿಟಿ ಸೂಪರ್‍ಸ್ಟಾರ್ ಜೆನ್ನಿಫರ್ ಪ್ಯಾಂಪ್ಲೋನಾ(29) ಎಡವಟ್ಟು ಮಾಡಿಕೊಂಡಿರುವ ಮಾಡೆಲ್. ಈಕೆ ಸುಮಾರು 12 ವರ್ಷಗಳ ಅವಧಿಯಲ್ಲಿ 40ಕ್ಕೂ ಹೆಚ್ಚು ಬಾರಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾಳೆ. ಆದರೆ ಇದೀಗ ತೃಪ್ತಿಯಾಗದೇ ಮತ್ತೆ ಮೊದಲಿನಂತೆ ಕಾಣುವಂತೆ ಸರ್ಜರಿಗೊಳಗಾಗಿದ್ದಾಳೆ. ಕಿಮ್ ನಂತೆ ಕಾಣಲು 4.7 ಕೋಟಿ ರೂ. ಖರ್ಚು ಮಾಡಿದ್ದಳು. ಇದೀಗ ಮತ್ತೆ ಅಸಲಿ ರೂಪ ಪಡೆದುಕೊಳ್ಳಲು ಮತ್ತೆ 95,49,660.00 ರೂ. ಖರ್ಚು ಭರಿಸಿದ್ದಾಳೆ. ಈ ಮೂಲಕ ಎಲ್ಲರ ಅಚ್ಚರಿಗೆ ಕಾರಣಳಾಗಿದ್ದಾಳೆ. ಇದನ್ನೂ ಓದಿ: ಜನರೇಟರ್ ಆಫ್ ಆಗಿದ್ದಕ್ಕೆ ಮದುವೆನೇ ಕ್ಯಾನ್ಸಲ್ ಮಾಡಿದ್ಲು
Advertisement
Advertisement
ನಾನು ಸ್ವಲ್ಪ ಕಾರ್ಡಶಿಯನ್ ಅವರನ್ನೇ ಹೋಲುತ್ತಿದ್ದೆ. ಹೀಗಾಗಿ ಜನ ನನ್ನನ್ನು ಕಾರ್ಡಶಿಯನ್ ಅಂತಾನೇ ಕರೆಯುತ್ತಿದ್ದರು. ಆರಂಭದಲ್ಲಿ ಇದು ನನಗೆ ಖುಷಿ ನೀಡುತ್ತಿತ್ತು. ಆದರೆ ಕ್ರಮೇಣ ನನಗೆ ಕಿರಿಕಿರಿಯುಂಟು ಮಾಡಲು ಪ್ರಾರಂಭಿಸಿತು. ಹೀಗಾಗಿ ನನ್ನ ಮೊದಲಿನ ರೂಪ ತಾಳಲು ಮತ್ತೆ ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಬೇಕಾಯಿತು ಎಂದು ಜೆನ್ನಿಫರ್ ತಿಳಿಸಿದ್ದಾಳೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಕಾರ್ ಶೋರೂಮ್‍ಗೆ ನುಗ್ಗಿ ಯುವತಿಗೆ ಚಾಕು ಇರಿದ
Advertisement
ನಾನು ತುಂಬಾ ಓದಿದ್ದೇನೆ, ಉದ್ಯಮಿ ಕೂಡ ಹೌದು. ವೈಯಕ್ತಿಕ ಜೀವನದಲ್ಲಿ ಹಲವು ಸಾಧನೆಗಳನ್ನು ಮಾಡಿದ್ದೇನೆ. ಇಷ್ಟೆಲ್ಲಾ ಸಾಧನೆ ಮಾಡಿದ್ರೂ ಜನ ನನ್ನ ಅಸಲಿ ಹೆಸರಿನಿಂದ ಕರೆಯುವುದು ಬಿಟ್ಟು ಕಾರ್ಡಶಿಯನ್ ಅಂತೆಯೇ ಕರೆಯುತ್ತಿದ್ದರು. ಇದೀಗ ನನಗೆ ಖುಷಿ ನೀಡದ ಕಾರಣ ನಾನು ಮತ್ತೆ ಮೂಲ ರೂಪ ಹೊಂದಲು ಪ್ಲಾಸ್ಟಿಕ್ ಸರ್ಜರಿ ಮೊರೆ ಹೋಗಬೇಕಾಯಿತು ಎಂದು ಹೇಳಿದ್ದಾಳೆ.
ಜೆನ್ನಿಫರ್ ತಾವು 17ನೇ ವಯಸ್ಸಿನಲ್ಲಿ ಇದ್ದಾಗಲೇ ಈ ರೀತಿಯ ಸರ್ಜರಿ ಮಾಡಿಸಿಕೊಳ್ಳುವ ಖಯಾಲಿ ಮಾಡಿಕೊಂಡಿದ್ದರಂತೆ. ಇದೀಗ ತಮ್ಮ ಬಗ್ಗೆ ತಾವೇ ಬೇಸರ ಹೊರ ಹಾಕಿಕೊಂಡಿರುವ ಅವರು ಈ ಮಾರ್ಗವನ್ನು ಅನುಸರಿಸದಂತೆ ಮನವಿ ಮಾಡಿಕೊಂಡಿದ್ದಾಳೆ. ಸದ್ಯ ಜೆನ್ನಿಫರ್ ಅಂತಿಮ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈಕೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.