ಲಕ್ನೋ: ಪಾಕೆಟ್‌ನಲ್ಲಿ 10 ಬುಲೆಟ್‌ಗಳನ್ನು ಇಟ್ಟುಕೊಂಡು ಜೈಲಿನಲ್ಲಿದ್ದ ಪ್ರಿಯಕರನನ್ನು ಭೇಟಿಯಾಗಲು ಹೋಗಿದ್ದ ಅಪ್ರಾಪ್ತೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ತನ್ನ ಪ್ರಿಯಕರನನ್ನು ಭೇಟಿಯಾಗಲು ಉತ್ತರ ಪ್ರದೇಶದ (Uttar Pradesh) ಗೊಂಡಾ ಜೈಲಿಗೆ ಹೋಗಿದ್ದ ಅಪ್ರಾಪ್ತ ಬಾಲಕಿ ಬಳಿ 10 ಜೀವಂತ ಬುಲೆಟ್ ಕಾರ್ಟ್ರಿಡ್ಜ್‌ಗಳು ಪತ್ತೆಯಾಗಿವೆ. ಶಾಲಾ ವಿದ್ಯಾರ್ಥಿನಿಯಿಂದ ನಕಲಿ ಆಧಾರ್ ಕಾರ್ಡ್ ಮತ್ತು ನಗದು ಸಹ ವಶಪಡಿಸಿಕೊಳ್ಳಲಾಗಿದೆ. ಆಕೆಯನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಹತ್ಯೆಗೆ ಉತ್ತರ ಭಾರತದ ವ್ಯಕ್ತಿಯಿಂದ ಸುಪಾರಿ; ಹಂತಕನ ಖಾತೆಗೆ 2 ಲಕ್ಷಕ್ಕೂ ಅಧಿಕ ಹಣ ವರ್ಗ
ಬಾಲಕಿ ಮತ್ತು ಇನ್ನೊಬ್ಬ ವ್ಯಕ್ತಿ ಹರ್ಷು ಕಶ್ಯಪ್ ಎಂಬ ಕೈದಿಯನ್ನು ಭೇಟಿಯಾಗಲು ಗೊಂಡಾದಲ್ಲಿರುವ ವಿಭಾಗೀಯ ಜೈಲಿಗೆ ಬಂದಿದ್ದರು ಎಂದು ಜೈಲರ್ ಅಫ್ತಾಬ್ ಅಲಂ ಅನ್ಸಾರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೈಲಿನೊಳಗೆ ಬಿಡುವ ಮುನ್ನ ನಡೆಸಿದ ತಪಾಸಣೆ ವೇಳೆ ಅಧಿಕಾರಿಗಳು ಆಕೆಯ ಪಾಕೆಟ್‌ನಲ್ಲಿ 10 ಜೀವಂತ ಕಾರ್ಟ್ರಿಡ್ಜ್‌ಗಳನ್ನು ಪತ್ತೆ ಮಾಡಿದ್ದಾರೆ. ನಂತರ ಜೈಲಿನ ಹೊರಠಾಣೆ ಉಸ್ತುವಾರಿಯನ್ನು ಕರೆಸಿ, ವಸ್ತುಗಳ ಜೊತೆಗೆ ಇಬ್ಬರನ್ನೂ ವಶಕ್ಕೆ ಪಡೆಯಲಾಗಿದೆ.
ವಿಚಾರಣೆಯ ವೇಳೆ ಹುಡುಗಿ ತನ್ನ ನಿಜವಾದ ಗುರುತನ್ನು ಬಹಿರಂಗಪಡಿಸಿದ್ದಾಳೆ. ಗುಂಡುಗಳು ತನ್ನ ತಂದೆಯ ಪರವಾನಗಿ ಪಡೆದ ಪಿಸ್ತೂಲಿನವು ಎಂದು ತಿಳಿಸಿದ್ದಾಳೆ. ನನ್ನ ತಂದೆಗೆ ಮುಂಗೋಪ ಜಾಸ್ತಿ. ಒಂದು ವೇಳೆ, ನಾನು ಪ್ರೇಮಿಯನ್ನು ಭೇಟಿಯಾಗಲು ಜೈಲಿಗೆ ಬಂದಿದ್ದೇನೆ ಅಂತ ಗೊತ್ತಾದರೆ, ನನ್ನನ್ನು ಕೊಂದು ಬಿಡುತ್ತಾರೆ. ಅದಕ್ಕಾಗಿ ನಾನು ಅವರ ಪಿಸ್ತೂಲಿನಿಂದ ಬುಲೆಟ್ ಕಾರ್ಟ್ರಿಜ್‌ಗಳನ್ನು ತೆಗೆದುಕೊಂಡು ಬಂದಿದ್ದೇನೆಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದಾಳೆ. ಇದನ್ನೂ ಓದಿ: ಡೇಟಿಂಗ್ ಆಪ್‌ನಲ್ಲಿ ಗಾಳ ಹಾಕಿ ಖಾಸಗಿ ವಿಡಿಯೋ ಸೆರೆ – ಮಾಯಾವಿ ನಂಬಿ ಬಂದವರಿಗೆ ಕೋಟಿ ಕೋಟಿ ನಾಮ!
ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಜೈಲರ್ ತಿಳಿಸಿದ್ದಾರೆ.



