- ಹಣ ಕೊಡದಿದ್ರೆ ರೇಪ್ ಕೇಸ್ ಬೆದರಿಕೆ – ಐವರನ್ನು ಅರೆಸ್ಟ್ ಕೂಡ ಮಾಡಿಸಿದ್ದ ಡೇಂಜರ್ ಲೇಡಿ
ಲಕ್ನೋ: ಉತ್ತರ ಪ್ರದೇಶದ (Uttar Pradesh) ಪ್ರಯಾಗ್‌ರಾಜ್‌ನಲ್ಲಿ ಮಹಿಳೆಯೊಬ್ಬಳು (Woman) ಡೇಟಿಂಗ್ ಆಪ್‌ಗಳನ್ನು (Dating Apps) ಬಳಸಿ ಹಲವಾರು ಪುರುಷರ ಜೊತೆ ಸ್ನೇಹ ಬೆಳೆಸಿ, ಅವರ ಖಾಸಗಿ ಫೋಟೋ ಹಾಗೂ ವಿಡಿಯೋ ಸೆರೆಹಿಡಿದು ಕೋಟಿ ಕೋಟಿ ಹಣ ಪೀಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಹೈಕೋರ್ಟ್ ವಕೀಲರೊಬ್ಬರು ದೂರು ದಾಖಲಿಸಿದ್ದು, ಈ ವಂಚನೆಯ ಜಾಲದ (Fraud Case) ಬಗ್ಗೆ ಗಮನ ಸೆಳೆದಿದ್ದಾರೆ.
ಪಲ್ಲವಿ ಸಿಂಗ್ ರಜಪೂತ್ ಎಂಬಾಕೆ ಡೇಟಿಂಗ್ ಅಪ್ಲಿಕೇಶನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಪುರುಷರೊಂದಿಗೆ ಸ್ನೇಹ ಬೆಳೆಸುತ್ತಿದ್ದಳು. ಅವರ ಜೊತೆ ಸಲುಗೆಯಿಂದ ಇದ್ದು, ಭೇಟಿಯಾಗುತ್ತಿದ್ದಳು. ಈ ವೇಳೆ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಮಾಡಿಕೊಳ್ಳುತ್ತಿದ್ದಳು. ಬಳಿಕ ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಳು. ಹಣ ಕೊಡದಿದ್ದರೆ ಅತ್ಯಾಚಾರ, ಕೊಲೆ ಯತ್ನ ಪ್ರಕರಣ ದಾಖಲಿಸುವುದಾಗಿ ಹೆದರಿಸುತ್ತಿದ್ದಳು. ಇದೇ ರೀತಿ ಹಲವರ ಬಳಿ ಸುಮಾರು 6 ಕೋಟಿ ರೂ. ವಂಚಿಸಿ ವಸೂಲಿ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ವರ್ಕ್ ಫ್ರಂ ಹೋಮ್ ಹೆಸರಲ್ಲಿ ಜನರಿಗೆ ಕೋಟಿ ಕೋಟಿ ವಂಚನೆ – ದಂಪತಿ ಅರೆಸ್ಟ್
ಸುಳ್ಳು ದೂರು ನೀಡಿ ಐವರ ಬಂಧನಕ್ಕೆ ಮಹಿಳೆ ಕಾರಣಳಾಗಿದ್ದಾಳೆ ಎಂದು ದೂರುದಾರರು ಆರೋಪಿಸಿದ್ದಾರೆ. ಇದೇ ರೀತಿ ಸಂತ್ರಸ್ತರ ಕುಟುಂಬಸ್ಥರನ್ನು ಮುಜುಗರಕ್ಕೀಡು ಮಾಡಿ ಹಣ ನೀಡುವಂತೆ ಒತ್ತಡ ಹೇರಲಾಗಿದೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಒಂದು ಫೋಟೋದಲ್ಲಿ ನೋಟಿನ ಬಂಡಲ್‌ಗಳನ್ನು ಬೆಡ್ ಮೇಲೆ ಹರಡಿ ಮಹಿಳೆ ಅದರ ಮೇಲೆ ಮಲಗಿರುವುದನ್ನು ನೋಡಬಹುದಾಗಿದೆ. ಇನ್ನೊಂದರಲ್ಲಿ ಗನ್ ಹಿಡಿದು ಪೋಸ್ ಕೊಟ್ಟಿದ್ದಾಳೆ.
ಮತ್ತೊಂದು ದೂರಿನ ಪ್ರಕಾರ, ಮಹಿಳೆ ಹೊಸ ಜನರೊಂದಿಗೆ ಸಂಪರ್ಕಿಸಲು ಬೇರೆ ಬೇರೆ ಹೆಸರುಗಳಲ್ಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನಿರ್ವಹಿಸುತ್ತಿದ್ದಳು. ಅದರಲ್ಲಿ ʻಸ್ವೀಟಿ ತಿವಾರಿʼ ಎಂಬ ಹೆಸರಲ್ಲಿ ಮಹಿಳೆ ಖಾತೆಯೊಂದನ್ನು ನಿರ್ವಹಿಸುತ್ತಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಹಿಳೆಗೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ವೈದ್ಯಕೀಯ ಸೀಟು ಕೊಡಿಸುವುದಾಗಿ ವಂಚನೆ; ಮಾಜಿ ಸಚಿವ ಜಾಲಪ್ಪ ಸೊಸೆಗೆ 5 ವರ್ಷ ಜೈಲು ಶಿಕ್ಷೆ



