– 32 ಎಕರೆ ಜಮೀನು ತಗೊಳ್ಳೋಕೆ ದುಡ್ಡು ಎಲ್ಲಿಂದ ಬಂತು ಕುಮಾರಣ್ಣ?
– ತಾಕತ್ತಿದ್ದರೆ ಚಿಕ್ಕಬಳ್ಳಾಪುರದಲ್ಲಿ ಬಂದು ನಿಲ್ಲಿ; ಸವಾಲ್
ಚಿಕ್ಕಬಳ್ಳಾಪುರ: ನಗರದಲ್ಲಿ ನಡೆದ ನಾಡಪ್ರಭು ಕೆಂಪೇಗೌಡ ಜಯಂತಿ (Kempegowda Jayanti) ವೇಳೆ ಗದ್ದಲ ಗಲಾಟೆ ಜೋರಾಗಿದೆ. ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ನಡೆದ ಕೆಂಪೇಗೌಡ ಜಯಂತಿ ಆಚರಣೆ ವೇಳೆ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಅವರನ್ನು ವೇದಿಕೆಯಿಂದ ಆಚೆ ಕಳುಹಿಸುವಂತೆ ಕುಮಾರಸ್ವಾಮಿ, ಸಂಸದ ಡಾ.ಕೆ ಸುಧಾಕರ್ ಬೆಂಬಲಿಗರು ಗಲಾಟೆ ಮಾಡಿದ್ದಾರೆ.
ಕಾರ್ಯಕ್ರಮದ ಬಳಿಕ ಮಾತನಾಡಿದ ಪ್ರದೀಪ್ ಈಶ್ವರ್ ಆಕ್ರೋಶ ಹೊರಹಾಕಿದ್ದಾರೆ. ನಾನು ಜಿಲ್ಲೆಯ ಶೋಷಿತ ಸಮುದಾಯದ ಶಾಸಕ. ಕಾರ್ಯಕ್ರಮಕ್ಕೆ ಕರೆದು ಅವಮಾನ ಮಾಡೋದು ಸರಿನಾ? ಜಿಲ್ಲೆಯಲ್ಲಿ ಶೋಷಿತರು, ಅಲ್ಪಸಂಖ್ಯಾತರು ಬದುಕುಬಾರದ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಕೆಂಪೇಗೌಡ ಜಯಂತಿ ಆಚರಣೆ ವೇಳೆ ಹೈಡ್ರಾಮಾ – ಪ್ರದೀಪ್ ಈಶ್ವರ್ ವಿರುದ್ಧ ಆಕ್ರೋಶ ಸ್ಫೋಟ
ಕುಮಾರಣ್ಣ (HD Kumaraswamy), ನೀನು ಡಿಕೆ ಅವರನ್ನೂ ಸಹಿಸಲ್ಲ, ಚೆಲುವಣ್ಣನನ್ನೂ ಸಹಿಸಲ್ಲ. ಓಬಿಸಿ ನನ್ನೂ ಸಹಿಸಲ್ಲ. ಶೋಷಿತ ವರ್ಗದ ಶಾಸಕ… ನನ್ನನು ನನ್ನ ಕುಟುಂಬವನ್ನು ಅವಮಾನ ಮಾಡಿದ್ದೀರಿ. ನಮ್ಮ ಸಮುದಾಯದ ಜಯಂತಿಗಳಲ್ಲಿ ನಿಮ್ಮನು ಅವಮಾನ ಮಾಡಿದ್ದೀವಾ? ನಾನು ತುಂಬಾ ತಾಳ್ಮೆಯಿಂದ ಇದ್ದೇನೆ. ನಾವು ನಿಮ್ಮ ಮನೆ ಕೊಲಿ ಕಾರ್ಮಿಕರು, ವಾಚ್ ಮ್ಯಾನ ಕೆಲಸಕ್ಕೆ ಲಾಯಕ್ಕು, ನಿಮ್ಮನೆ ಕೂಲಿಗೆ ಬರ್ತೀವಿ, ನೀವು ಬಿಸಾಕೋ ಭಿಕ್ಷೆ ಅನ್ನ ತಿಂತೀವಿ. ನಿಮ್ಮನೆ ವಾಚ್‌ಮ್ಯಾನ್ ಕೆಲಸ ಮಾಡ್ತೀವಿ. ಅದಕ್ಕೆ ಲಾಯಕ್ ಅಂದುಕೊಂಡಿದ್ದೀರಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ನಾನು ಇವತ್ತು ತಾಳ್ಮೆಯಿಂದ ಇದ್ದೇನೆ. ಕುಮಾರಣ್ಣ ನೀವು ಓಬಿಸಿ ಹುಡುಗಗನ್ನ ಟಾರ್ಗೆಟ್ ಮಾಡಿದ್ದೀರಾ? ನಾನು ಒಬ್ಬನೇ ಒಕ್ಕಲಿಗ ನಾಯಕ ಡಿಕೆಶಿ ಪರವಾಗಿ ನಿಂತಿರೋದು. ನಿಮಗೆ ಕ್ಷೇತ್ರದಲ್ಲಿ ಒಕ್ಕಲಿಗರೂ ಬೆಳೀಬಾರದೂ, ಬೇರೆಯವರೂ ಬೆಳೆಯಬಾರದು? ಖಬರ್‌ದಾರ್ ಕುಮಾರಣ್ಣ ನಿಮ್ಮ ಚೇಲಾಗಳಿಗೆ ಹೆದರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಭೈರಮಂಗಲಕ್ಕೆ ಹೆಚ್‌ಡಿಕೆ ಆಗಮನ; ಯೋಜನೆ ಪರ ಇರುವ ರೈತರಿಂದ ಕೇಂದ್ರ ಸಚಿವರಿಗೆ ಕೆಂಪು ಬಾವುಟ ಪ್ರದರ್ಶನ
ಇದಕ್ಕೂ ಮುನ್ನ ಏರ್‌ಪೋರ್ಟ್‌ನಲ್ಲಿ ಮಾತನಾಡಿ, ನಾನು ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗಲೇ 65 ಲಕ್ಷದ ವಾಚ್ ಧರಿಸುತ್ತಿದ್ದರು ಎಂದು ಹೇಳಿದ್ದೇನೆ. ಈಗ ಸಾಮಾನ್ಯ ವಾಚ್ ಕಟ್ಟಿಕೊಂಡು ಬಂದು ತೋರಿಸಿದರೆ ಹೇಗೆ? ಅವರು ಧರಿಸಿದ್ದ 65 ಲಕ್ಷದ ವಾಚ್‌ಗಳ ಫೋಟೋ ಹಾಗೂ ವಿಡಿಯೋಗಳನ್ನ ಬಿಡುಗಡೆ ಮಾಡಿದ್ದೇನೆ ಎಂದರು.
ಇದೇ ವೇಳೆ ತಮ್ಮ CA ಸೈಟ್ ವಿಚಾರವನ್ನು ಪ್ರಸ್ತಾಪಿಸಿದ ಅವರು, ನಾನು ಒಂದು ಎಕರೆ CA ಸೈಟ್ ಹೇಗೆ ಪಡೆದಿದ್ದೇನೆ ಎಂಬುದನ್ನು ಈಗಾಗಲೇ ವಿವರಿಸಿದ್ದೇನೆ. ಅದೇ ರೀತಿ ಕುಮಾರಸ್ವಾಮಿ ಅವರು 32 ಎಕರೆ ಜಮೀನು ಹೇಗೆ ಬಂತು ಎಂಬುದನ್ನು ರಾಜ್ಯದ ಜನರಿಗೆ ತಿಳಿಸಬೇಕು. ನಾನು ದುಬಾರಿ ಬದನೆಕಾಯಿ ಅಥವಾ ಕೆಜಿಗೆ 5 ಸಾವಿರ ರೂ. ಬೆಲೆಯ ಟೊಮೆಟೊ ಬೆಳೆದು ಖರೀದಿಸಿದ್ದೇನೆ ಎಂದು ಹೇಳಿದರೂ ಹೇಳಬಹುದು. ಆದರೆ 32 ಎಕರೆ ಜಮೀನು ಖರೀದಿಸಲು ಹಣ ಎಲ್ಲಿಂದ ಬಂತು? ಎಂಬ ಪ್ರಶ್ನೆಗೆ ಉತ್ತರ ಕೊಡಬೇಕು ಎಂದು ಸವಾಲು ಹಾಕಿದ್ರು.
ಶಿಡ್ಲಘಟ್ಟ ಶಾಸಕ ಬಿ.ಎನ್ ರವಿಕುಮಾರ್ ಅವರ ಸವಾಲಿಗೂ ಪ್ರತಿಕ್ರಿಯಿಸಿದ ಪ್ರದೀಪ್ ಈಶ್ವರ್, ನಾನು ಕುಮಾರಸ್ವಾಮಿ ಅವರ ಮನೆ ಮುಂದೆ ವಾಚ್‌ಮ್ಯಾನ್ ಕೆಲಸ ಮಾಡಲು ಸಿದ್ಧ. ನನ್ನ CA ಸೈಟ್‌ಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡುತ್ತೇನೆ. ಆದರೆ ಅವರು 32 ಎಕರೆ ಜಮೀನಿನ ದಾಖಲೆಗಳನ್ನ ಜನರ ಮುಂದೆ ಇಡಲಿ. ಆಗ ʻಎಲ್ಲಿದ್ಯಪ್ಪ ಪ್ರದೀಪ್ʼ ಎಂದು ಕೇಳಬಹುದು ಎಂದು ಟಾಂಗ್ ನೀಡಿದ್ರು.
