ಬಳ್ಳಾರಿ: ರಾಮನಗರದ ಈಗಲ್ ಟನ್ ರೆಸಾರ್ಟ್‍ನಲ್ಲಿ ಕಂಪ್ಲಿ ಶಾಸಕ ಜೆಎನ್ ಗಣೇಶ್ ಹಲ್ಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರು ಇಂದು ಕುಟುಂಬ ಸಮೇತವಾಗಿ ಹಂಪಿ ವಿರೂಪಾಕ್ಷೇಶ್ವರನ ದರ್ಶನ ಪಡೆದಿದ್ದಾರೆ.
ಹಲ್ಲೆ ನಂತರ 15 ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ಆನಂದ್ ಸಿಂಗ್ ಅವರನ್ನು ಭೇಟಿಯಾಗಲು ಕ್ಷೇತ್ರದ ಜನರು ನಿರಂತರವಾಗಿ ಬೆಂಗಳೂರಿಗೆ ಭೇಟಿ ಮಾಡಲು ಆಗಮಿಸುತ್ತಿದ್ದರು. ಹಾಗಾಗಿ ಸ್ವತಃ ಆನಂದ್ ಸಿಂಗ್ ಅವರೇ ಇಂದು ಕ್ಷೇತ್ರಕ್ಕೆ ತೆರಳಿ ಜನರನ್ನು ಭೇಟಿ ಮಾಡಿದ್ದಾರೆ. ಇದನ್ನೂ ಓದಿ: ಸದನಕ್ಕೆ ಹಾಜರಾದ ಬಳಿಕ ಆನಂದ್ ಸಿಂಗ್ ಆರೋಗ್ಯದಲ್ಲಿ ಮತ್ತೆ ಏರುಪೇರು, ಆಸ್ಪತ್ರೆಗೆ ದಾಖಲು
Advertisement
Advertisement
ಇಂದು ಬೆಳ್ಳಂಬೆಳ್ಳಗ್ಗೆ ಆನಂದ್ ಸಿಂಗ್ ಅವರು ಪತ್ನಿ ಲಕ್ಷಿ ಸಿಂಗ್ ಹಾಗೂ ಕುಟುಂಬ ಸಮೇತವಾಗಿ ವಿರೂಪಾಕ್ಷೇಶ್ವರ ಹಾಗೂ ಭುವನೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ನಂತರ ಕ್ಷೇತ್ರದ ಜನರನ್ನು ಭೇಟಿ ಮಾಡಿದ್ದಾರೆ. ಇದನ್ನೂ ಓದಿ: ಸದನಕ್ಕೆ ಹಾಜರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಆನಂದ್ ಸಿಂಗ್ ಡಿಸ್ಚಾರ್ಜ್
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv