Bengaluru CityDistrictsKarnatakaLatestMain Post

ಜನತೆ ಕಷ್ಟದಲ್ಲಿರುವಾಗ ನನ್ನ ಹುಟ್ಟು ಹಬ್ಬ ಆಚರಣೆ ಬೇಡ: ಶ್ರೀರಾಮುಲು

ಬೆಂಗಳೂರು: ರಾಜ್ಯದಲ್ಲಿ ಅತಿವೃಷ್ಟಿ ಹಿನ್ನೆಲೆಯಲ್ಲಿ ನಾಳೆ ಜನ್ಮದಿನ ಆಚರಿಸಿಕೊಳ್ಳದಿರಲು ಸಾರಿಗೆ ಸಚಿವ ಶ್ರೀರಾಮುಲು ನಿರ್ಧಾರ ಮಾಡಿದ್ದಾರೆ.

ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅನೇಕ ಜನ ಪ್ರಾಣ ಕಳೆದುಕೊಂಡು ಆಸ್ತಿ ಪಾಸ್ತಿ ನಾಶವಾಗಿ ಸಂಕಷ್ಟದಲ್ಲಿದ್ದಾರೆ. ಜನತೆ ಕಷ್ಟದಲ್ಲಿರುವಾಗ ನನ್ನ ಹುಟ್ಡು ಹಬ್ಬ ಆಚರಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ ಎಂದು ಆಪ್ತರಿಗೆ ತಿಳಿಸಿದ್ದಾರೆ.

ಟ್ವೀಟ್‌ನಲ್ಲಿ ಏನಿದೆ?
ಆತ್ಮೀಯ ನನ್ನ ಹಿತೈಷಿಗಳೇ, ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಅನೇಕ ಜನ ಪ್ರಾಣ ಕಳೆದುಕೊಂಡು ಆಸ್ತಿ ಪಾಸ್ತಿ ನಾಶವಾಗಿ ಸಂಕಷ್ಟದಲ್ಲಿದ್ದಾರೆ. ಜನತೆ ಕಷ್ಟದಲ್ಲಿರುವಾಗ ನನ್ನ ಹುಟ್ಡು ಹಬ್ಬ ಆಚರಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಇದು ಒಪ್ಪುವ ವಿಚಾರವಲ್ಲ. ಇದನ್ನೂ ಓದಿ: ಕೆಲ್ಸ ಮಾಡಿ, ಇಲ್ದೇ ಇದ್ರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ : ಅಶ್ವಿನಿ ವೈಷ್ಣವ್‌ ಲಾಸ್ಟ್‌ ವಾರ್ನಿಂಗ್‌

ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಹಾರ ತುರಾಯಿ ಹಾಕಿ, ಕೇಕ್‌ ಕತ್ತರಿಸಿ ವಿಜೃಂಭಣೆ ಮಾಡುವುದು ಬೇಡ. ಅಭಿಮಾನಿಗಳು, ಕಾರ್ಯಕರ್ತರು ಹಣ ಖರ್ಚು ಮಾಡಿಕೊಂಡು ನನ್ನಲ್ಲಿಗೆ ಬರುವುದು ಬೇಡ. ನೀವಿದ್ದಲ್ಲಿಯೇ ಬಡವರಿಗೆ, ದೀನ ದಲಿತರಿಗೆ, ಮಳೆ-ನೆರೆಯಿಂದ ತತ್ತರಿಸಿದ ಜನರಿಗೆ ನೆರವಾಗಿ.

ನನ್ನ ಮೇಲೆ ಅಭಿಮಾನ ಇರುವ ಹಾಗೂ ನನಗೆ ಪ್ರೀತಿ ತೋರುವ ಎಲ್ಲರೂ ನನ್ನ ಈ ಮನವಿಗೆ ಸ್ಪಂದಿಸುವಿರಿ ಎಂದು ನಂಬಿದ್ದೇನೆ, ನಿಮ್ಮ‌ಅಭಿಮಾನಕ್ಕೆ ಸದಾ ಚಿರ ಋಣಿ.

Live Tv

Leave a Reply

Your email address will not be published. Required fields are marked *

Back to top button