Connect with us

Dharwad

ಮಾಜಿ ಸಚಿವ ಶಾಮನೂರು ವಿರುದ್ಧ ಎಂ.ಬಿ ಪಾಟೀಲ್ ಕಿಡಿ

Published

on

ಹುಬ್ಬಳ್ಳಿ: ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರು ನನ್ನ ತಂದೆಗೆ ಸಮಾನ. ನಾನು ಯಾರಿಗೂ ಹೆದರುವ ಮಾತಿಲ್ಲ. ನನ್ನ ಮೈಯಲ್ಲಿ ಹರಿಯುವುದು ನನ್ನ ತಂದೆಯ ರಕ್ತ. ನನಗೆ ಯಾರದ್ದು ಅಂಜಿಕೆ ಇಲ್ಲ. ಈ ವಿವಾದವನ್ನು ಇಲ್ಲಿಗೆ ನಿಲ್ಲಿಸಿದ್ರೆ ಉತ್ತಮ. ನನಗೆ ಎಲ್ಲವೂ ಗೊತ್ತಿದೆ. ಅವರ ಬಗ್ಗೆ ಎಲ್ಲವನ್ನೂ ಮಾತನಾಡಬೇಕಾದಿತು. ಇಲ್ಲವಾದರೆ ನಾನು ಮುಂದುವರಿಯುವೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಎಚ್ಚರಿಸಿದ್ದಾರೆ.

ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮ ನಮ್ಮ ಅಸ್ಮಿತೆ. ಲಿಂಗಾಯತ ಧರ್ಮ ಒಂದು ಮೇಲು ಕೀಳು ಎಂದು ವಿಭಿನ್ನವಾಗಿದೆ. ಲಿಂಗಾಯತ ಧರ್ಮದ ಮೇಲೆ ನನ್ನ ಅಧಿಕಾರದ ಪ್ರಭಾವ ಬೀರುವುದಿಲ್ಲ ಹೇಳಿದರು.

ಲಿಂಗಾಯತ ಧರ್ಮಕ್ಕೆ ಹೋರಾಟ ಮಾಡುವವರು ಇದ್ದಾರೆ. ಅವರು ಹೋರಾಟವನ್ನ ಮುಂದುವರಿಸುತ್ತಾರೆ. ಮಾಜಿ ಸಚಿವ ಶಾಮನೂರು ಶಿವಶಂಕರಪ್ಪನವರಿಗೆ ವೀರಶೈವ ರತ್ನ ಪ್ರಶಸ್ತಿ ಕೊಟ್ಟಿದ್ದಾರೆ. ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೆನೆ. ಶಿವಶಂಕರಪ್ಪನವರು ನಮ್ಮ ತಂದೆಯ ಸಮನಾದವರು. ಅವರು ಸ್ವಾರ್ಥಿಗಳು, ಕೀಳು ಮಟ್ಟದ ಹೇಳಿಕೆ ಕೊಡುತ್ತಿದ್ದಾರೆ. ಅವರಿಗೆ ತಮ್ಮ ಕುಟುಂಬದ ಏಳಿಗೆ ಬಗ್ಗೆ ಯೋಚನೆ ಮಾಡುತ್ತಾರೆ. ಮತ್ತೊಬ್ಬರ ಬಗ್ಗೆ ಅಸಹ್ಯವಾಗಿ ಮಾತನಾಡುತ್ತಾರೆ. ಅವರು ಸ್ವಾರ್ಥ ಜೀವನ ನಡೆಸಿದವರು. ಅವರು ಇಲ್ಲಿಯವರೆಗೆ ಯಾರಿಗೆ ಏನು ಮಾಡಿದ್ದಾರೆ ಎಂದು ತೋರಿಸಲಿ ಎಂದು ಸವಾಲು ಹಾಕಿದರು.

ಲಂಚದ ಹಣದಿಂದ ಲಿಂಗಾಯತ ಸಮಾವೇಶ ನಡೆಸಿದ್ದಾರೆ ಎಂಬ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬೀದರ್ ಮತ್ತು ಬೆಳಗಾವಿಯಲ್ಲಿ ಲಿಂಗಾಯತ ಹೋರಾಟ ಪ್ರಾರಂಭವಾದಾಗ ನಾನು ಇರಲೇ ಇಲ್ಲ. ಶಿವಶಂಕರಪ್ಪ ಮೊದಲು ಏನಾಗಿದ್ದರು ಎಂಬುದು ಅರ್ಥ ಮಾಡಿಕೊಳ್ಳಬೇಕು. ಮೊದಲು ಕಿರಾಣಿ ಅಂಗಡಿ ಮತ್ತು ದಲ್ಲಾಳಿ ಮಾಡಿದವರು. ಬೇರೊಬ್ಬರ ಬಿ ಫಾರ್ಮ್ ಹರಿದು ಚುನಾವಣೆ ಗೆದ್ದವರಾಗಿದ್ದಾರೆ. ಮತ್ತೊಬ್ಬರನ್ನ ತುಳಿದು ಬಾಪೂಜಿ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಇವರು ಬೇರೆಯವರು ಸೋತ ಬಗ್ಗೆ ಮಾತನಾಡುತ್ತಾರೆ. ಅವರ ಮಗ ಸೋತಾಗ ಇವರ ವೀರಶೈವ ಹೋರಾಟ ಎಲ್ಲಿ ಹೋಗಿತ್ತು. ಅವರು ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯ ಹೆಚ್ಚಿದೆ. ಈ ಬಾರಿ ಮುಸ್ಲಿಂ ಸಮುದಾಯದ ಅತಿ ಹೆಚ್ಚು ಮತ ಕಾಂಗ್ರೆಸ್‍ಗೆ ಬಂದಿರುವುದರಿಂದ ಗೆದ್ದಿದ್ದಾರೆ. ಕೀಳು ಮಟ್ಟದ ರಾಜಕಾರಣ ಮಾಡಬಾರದು. ಇವರ ಜನ್ಮ ದಾಖಲೆಗಳನ್ನ ತೆಗೆದು ನೋಡಿದ್ರೆ ಹಿಂದೂ ಲಿಂಗಾಯತ ಅಂತಾ ಇದೆ. ನೀವು ಮಾತಾನಾಡಿದ್ರೆ ಪರವಾಗಿಲ್ಲ, ನಾನು ಮಾತಾನಾಡಿದರೆ ನಿಮ್ಮ ಮರ್ಯಾದೆ ಹೋಗುತ್ತದೆ ಅಂತ ವಾಗ್ದಾಳಿ ನಡೆಸಿದ್ರು.

ಲಿಂಗಾಯತ ಧರ್ಮದ ಬಗ್ಗೆ ಹೋರಾಟದ ಹಾದಿ ಅಲ್ಲ. ನಮ್ಮ ಮುಂದೆ ಇರುವುದು ಕಾನೂನು ಹೋರಾಟ. ಎಲ್ಲಾ ನಿರ್ಣಯಗಳನ್ನ ನಮ್ಮ ಲಿಂಗಾಯತ ಜಾಗತಿಕ ಸಮಾವೇಶ ತೆಗೆದುಕೊಳ್ಳುತ್ತದೆ. ಕೆಲವೊಂದು ಶಕ್ತಿಗಳು ಇದನ್ನ ವಿರೋಧಿಸುತ್ತವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ನಮಗೆ ಬೆಂಬಲ ನೀಡುತ್ತದೆ. ಪ್ರಧಾನಮಂತ್ರಿಗಳು ಈ ಘಟಬಂಧನ್ ಮುರಿದು ಬೀಳಬೇಕು ಎಂದು ಕಾಯ್ತಾ ಇದ್ದಾರೆ ಎಂದು ಅವರು ಹೇಳಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv