ಅಮೆರಿಕನ್ ಸಿಂಗರ್ ಮತ್ತು ಡ್ಯಾನ್ಸರ್ ಮೈಕಲ್ ಜಾಕ್ಸನ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಮೈಕಲ್ ಜಾಕ್ಸನ್ ಅವರು ಡ್ರಗ್ಸ್ ವ್ಯಸನಿಯಾಗಿದ್ದರು. ಇದೀಗ ಈ ಕುರಿತು ಅಚ್ಚರಿಯ ವಿಚಾರವೊಂದು ಹೊರ ಬಿದ್ದಿದೆ. ಡ್ರಗ್ಸ್ ಖರೀದಿಸಲು 19 ಫೇಕ್ ಐಡಿಗಳನ್ನ ಮೈಕಲ್ ಜಾಕ್ಸನ್ ಬಳಸುತ್ತಿದ್ದರಂತೆ. ಟಿಎಂಝಡ್ ಟ್ಯಾಬ್ಲಾಯ್ಡ್ ವೆಬ್‌ಸೈಟ್ ಈ ಕುರಿತು ಮಾಹಿತಿ ಬಹಿರಂಗಪಡಿಸಿದೆ.
Advertisement
ಪಾಪ್ ಸಿಂಗರ್ ಮತ್ತು ಡ್ಯಾನ್ಸರ್ ಆಗಿ ಗುರುತಿಸಿಕೊಂಡಿದ್ದ ಮೈಕಲ್ ಜಾಕ್ಸನ್ 2009ರಲ್ಲಿ ಹೃದಯ ಸ್ತಂಭನದಿಂದ ನಿಧನರಾಗಿದ್ದರು. ಮೈಕಲ್ ಜಾಕ್ಸನ್ ಕುರಿತು ಇದೀಗ ಕುತೂಹಲಕಾರಿ ವಿಚಾರವೊಂದು ಹೊರಬಿದ್ದಿದೆ. ಮೈಕಲ್ ಜಾಕ್ಸನ್ ನಿಧನರಾಗಿದ್ದರು ಕೂಡ ಅವರ ಮೇಲಿರುವ ಕ್ರೇಜ್ ಕಡಿಮೆಯಾಗಿಲ್ಲ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಸೀರಿಯಲ್ ಗೆ ನಟ ಹರೀಶ್ ರಾಜ್ ಅಧಿಕೃತ ಎಂಟ್ರಿ: ಪ್ರೊಮೋ ರಿಲೀಸ್
Advertisement
Advertisement
ಮೈಕಲ್ ಜಾಕ್ಸನ್ ಅವರು ಡ್ರಗ್ಸ್‌ಗೆ ಭಾರೀ ಅಡಿಕ್ಟ್ ಆಗಿದ್ದರಂತೆ. ಇನ್ನು ಡ್ರಗ್ಸ್ ಖರೀದಿಸಲು 19 ಫೇಕ್ ಐಡಿಗಳನ್ನ ಬಳಸುತ್ತಿದ್ದರಂತೆ. ಈ ಕುರಿತು ಹೊಸ ಸಾಕ್ಷ್ಯ ಚಿತ್ರದಲ್ಲಿ ರಿವೀಲ್ ಮಾಡಿದ್ದಾರೆ. ಸದ್ಯ ನೆಚ್ಚಿನ ನಟನ ಬಗ್ಗೆ ಈ ಸುದ್ದಿ ಕೇಳಿ, ಫ್ಯಾನ್ಸ್ ಶಾಕ್ ಆಗಿದ್ದಾರೆ.