– ನಾನೂ ಸಚಿವ ಸ್ಥಾನದ ಆಕಾಂಕ್ಷಿ ಎಂದ ಎಸ್‌ಆರ್ ಶ್ರೀನಿವಾಸ್
ತುಮಕೂರು: ಸೋಮಣ್ಣ ದೊರೆತಿರೋದು ತುಮಕೂರು (Tumakuru) ಜಿಲ್ಲೆಯ ಭಾಗ್ಯ ಎಂದು ಗುಬ್ಬಿ ಕಾಂಗ್ರೆಸ್ (Congress) ಶಾಸಕ ಎಸ್‌ಆರ್ ಶ್ರೀನಿವಾಸ್ (SR Srinivas) ಕೇಂದ್ರ ಸಚಿವ ವಿ.ಸೋಮಣ್ಣರನ್ನು (V Somanna) ಹಾಡಿ ಹೊಗಳಿದ್ದಾರೆ.
ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ರೈಲ್ವೆಯ ಇನ್ನಾವುದೇ ಕಾಮಗಾರಿಗಳು ಬಾಕಿ ಉಳಿದಿಲ್ಲ. ಇದೆಲ್ಲಾ ಕ್ರೆಡಿಟ್ ರೈಲ್ವೆ ಸಚಿವ ಸೋಮಣ್ಣ ಅವರಿಗೆ ಸೇರಬೇಕು. ಬಹುಶಃ ಒಬ್ಬ ಲೋಕಸಭಾ ಪ್ರತಿನಿಧಿ ಇಷ್ಟೆಲ್ಲ ಕೆಲಸ ಮಾಡಬಹುದಾ ಅನ್ನೋದನ್ನ ವಿ ಸೋಮಣ್ಣ ತೋರಿಸಿಕೊಟ್ಟಿದ್ದಾರೆ. ತಮ್ಮ ಅತ್ಯಂತ ಕ್ರಿಯಾಶೀಲ ಮುಖೇನ ಸಾರ್ವಜನಿಕರ ಕೆಲಸವನ್ನ ಮಾಡಿಕೊಟ್ಟಿದ್ದಾರೆ. ನಾವು ಸುಮಾರು ಜನ ರಾಜಕಾರಣಿಗಳನ್ನ ನೋಡಿದ್ದೇವೆ.ಲೋಕಸಭಾ ಸದಸ್ಯರನ್ನ ನೋಡಿದ್ದೇವೆ. ಒಬ್ಬ ಲೋಕಸಭಾ ಸದಸ್ಯ ಈ ಪರಿ ಕೆಲಸ ಮಾಡಬಹದು ಅನ್ನೋದು ಸೋಮಣ್ಣ ಅವರನ್ನ ನೋಡಿ ಮನವರಿಕೆ ಆಗಿದ್ದು ಎಂದು ಗುಣಗಾನ ಮಾಡಿದರು. ಇದನ್ನೂ ಓದಿ: ಕರ್ನಾಟಕದ 4 ರಾಜ್ಯಸಭೆ, 7 ಪರಿಷತ್ ಸ್ಥಾನಗಳ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ
ಗುಬ್ಬಿ ಕ್ಷೇತ್ರದ ಎಲ್ಲಾ ರೈಲ್ವೆ ಅಂಡರ್ ಪಾಸ್‌ಗಳ ಕಾಮಗಾರಿ ಮಾಡಿ, ಹೈವೇ ಕ್ಲಿಯರ್ ಮಾಡಿದ ಕೀರ್ತಿ ಸೋಮಣ್ಣ ಅವರಿಗೆ ಸಲ್ಲುತ್ತದೆ. ಮುಂದಿನ ದಿನಗಳಲ್ಲಿ ಗುಬ್ಬಿ ಕ್ಷೇತ್ರದ ಜನ ಸೋಮಣ್ಣ ಅವರ ಋಣ ತಿರಿಸುವ ಕೆಲಸ ಮಾಡಬೇಕಾಗುತ್ತದೆ. ಚುನಾವಣಾ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡಬೇಕು. ಚುನಾವಣೆ ಆದ ನಂತರ ಅಭಿವೃದ್ಧಿ ಕೆಲಸದಲ್ಲಿ ತಾರತಮ್ಯ ಮಾಡಬಾರದು ಅನ್ನೋದು ಸೋಮಣ್ಣ ಅವರ ಧ್ಯೇಯ. ಅದರಂತೆ ಸೋಮಣ್ಣ ನಡೆದುಕೊಳ್ಳುತ್ತಿದ್ದಾರೆ. ನಮ್ಮ ತಾಲೂಕಿಗೆ 80 ರಿಂದ 90 ಕೋಟಿ ಹಣವನ್ನ ಬರೀ ರಸ್ತೆ ಅಭಿವೃದ್ಧಿಗೆ ಕೊಟ್ಟಿದ್ದಾರೆ. ಅತ್ಯಂತ ಕ್ರಿಯಾಶೀಲ ಎಂಪಿಯನ್ನು ನಾವು ಪಡೆದುಕೊಂಡಿದ್ದು ತುಮಕೂರು ಜಿಲ್ಲೆಯ, ನಮ್ಮ ಭಾಗ್ಯ. ಸೋಮಣ್ಣ ಇಷ್ಟೊಂದು ಕೆಲಸ ಮಾಡುತ್ತಾರೆ ಎಂದು ನಾವು ಅಂದುಕೊAಡಿರಲಿಲ್ಲ. ಇಷ್ಟೊಂದು ಅದ್ಭುತ ಕೆಲಸ ಮಾಡುವ ಶಕ್ತಿ ದೇವರು ಕೊಟ್ಟಿದ್ದಾರೆ. ಇನ್ನಷ್ಟು ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ. ಅವರಿಗೆ ಮುಂದೆ ಒಳ್ಳೆ ಹುದ್ದೆ ಸಿಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದನ್ನೂ ಓದಿ: ಹೊಸ ಪಕ್ಷ ಸ್ಥಾಪಿಸುತ್ತಾರಾ ಅಣ್ಣಾಮಲೈ?
ನಾನೂ ಸಚಿವ ಸ್ಥಾನದ ಆಕಾಂಕ್ಷಿ. ನಾನು ಈಗಾಗಲೇ ಸಚಿವ ಸ್ಥಾನ ಕೊಡುವಂತೆ ಕೇಳಿಕೊಂಡಿದ್ದೇನೆ. ಹೈಕಮಾಂಡ್ ನಾಯಕರಲ್ಲಿ ಹೇಳಿಕೊಂಡಿದ್ದೇನೆ. ಇವತ್ತು ಮತ್ತೆ ದೆಹಲಿಗೆ ಹೋಗುತ್ತಿದ್ದೇನೆ. ಇಂದು ರಾತ್ರಿ ಫ್ಲೈಟ್ ಹತ್ತುತ್ತೇನೆ. ನಾವು ನಾಲ್ಕು ಜನ ಶಾಸಕರು ದೆಹಲಿಗೆ ಹೋಗುತ್ತಿದ್ದೇವೆ. ನನಗೆ ಯಾವ ಖಾತೆ ಕೊಟ್ಟರೂ ಪರವಾಗಿಲ್ಲ, ನಿಭಾಯಿಸುತ್ತೇನೆ. ಆದರೆ ಒಕ್ಕಲಿಗರೇ ಮುಖ್ಯಮಂತ್ರಿ ಆಗುವುದರಿಂದ ಒಕ್ಕಲಿಗರಿಗೆ ಎಷ್ಟು ಮಂತ್ರಿ ಸ್ಥಾನ ಸಿಗುತ್ತದೆ ಅನ್ನೋದು ನೋಡಬೇಕು. ಒಕ್ಕಲಿಗರ ಶಾಸಕರಿಗೆ ಕಡಿಮೆ ಸಚಿವ ಸ್ಥಾನ ಎಂದು ಹೈಕಮಾಂಡ್ ನಿರ್ಧಾರ ಮಾಡಿದರೆ ಕಷ್ಟ ಆಗುತ್ತದೆ ಎಂದರು. ಇದನ್ನೂ ಓದಿ: 3,000 ರೂ.ಗೆ ಮನೆಗೆಲಸ ಮಾಡುತ್ತಿದ್ದ ಕಲಿತಾ ಮಾಝಿ ಈಗ ಸಚಿವೆ
