Connect with us

Districts

ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಮದ್ವೆಯಾದ ಒಂದು ತಿಂಗಳಲ್ಲೇ ವಿವಾಹಿತೆ ಆತ್ಮಹತ್ಯೆ

Published

on

ಮೈಸೂರು: ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಪತ್ನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಆನಂದ ನಗರದಲ್ಲಿ ನಡೆದಿದೆ.

ಭಾವನಾ (24) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಮೃತ ಭಾವನಾ ಒಂದು ತಿಂಗಳ ಹಿಂದೆ ಸಾಫ್ಟ್ ವೇರ್ ಎಂಜಿನಿಯರ್ ಅಜಯ್ ಎಂಬಾತನನ್ನ ವಿವಾಹವಾಗಿದ್ದಳು. ಆದರೆ ಪತಿ ಅಜಯ್‍ ಮತ್ತೊಂದು ಯುವತಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದನು. ಆ ಫೋಟೋಗಳು ಪತಿ ಅಜಯ್ ಮೊಬೈಲ್‍ನಲ್ಲಿದ್ದವು. ಆಕೆಯ ಜೊತೆ ಅಶ್ಲೀಲವಾಗಿ ಇದ್ದಂತಹ ಫೋಟೋವನ್ನು ಭಾವನಾ  ನೋಡಿದ್ದಳು.

ಪತಿಯ ಅಕ್ರಮ ಸಂಬಂಧದ ಬಗ್ಗೆ ಎರಡು ಕುಟುಂಬದವರಿಗೂ ಗೊತ್ತಾಗಿದೆ. ನಂತರ ಎಲ್ಲರೂ ಮಾತನಾಡಿ ಮತ್ತೆ ರಾಜೀ ಮಾಡಿಸಿದ್ದರು. ಆದರೂ ಪತಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಭಾವನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಅಜಯ್ ತಂದೆ ರಾಮಪ್ರಸಾದ್ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.