Dakshina KannadaDistrictsKarnatakaLatestLeading NewsMain PostMysuru

ವಾಟ್ಸಪ್‌ ಡಿಪಿಯಲ್ಲಿ ಈಶ್ವರನ ಫೋಟೋ ಹಾಕಿದ್ದ ಉಗ್ರ ಶಾರೀಕ್‌

ಮೈಸೂರು: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ(Mangalore Cooker Bomb Blast) ಮಾಡಿ ಸಿಕ್ಕಿ ಬಿದ್ದ ಉಗ್ರ ಶಾರೀಕ್ (Shariq) ವಾಟ್ಸಪ್‌ ಡಿಪಿಯಲ್ಲಿ(Whatsapp DP) ಇಶಾ ಫೌಂಡೇಶನ್‌ನವರ ಈಶ್ವರ ದೇವರ(Lord Shiva) ಪ್ರತಿಮೆಯ ಚಿತ್ರವನ್ನು ಹಾಕಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

ನಕಲಿ ಆಧಾರ್‌(Fake Aadhar) ವಿಳಾಸವನ್ನು ನೀಡಿದ್ದ ಶಾರೀಕ್ ತನ್ನ ಬಗ್ಗೆ ಯಾರಿಗೂ ಅನುಮಾನ ಬಾರದೇ ಇರಲು ವಾಟ್ಸಪ್‌ನಲ್ಲಿ ಹಿಂದೂ ದೇವರ ಚಿತ್ರವನ್ನು ಹಾಕಿದ್ದ. ತಮ್ಮ ಕೇಂದ್ರಕ್ಕೆ ತರಬೇತಿಗೆ ಬಂದವನು ಉಗ್ರ ಎಂಬ ವಿಚಾರ ತಿಳಿದು ಮುಖ್ಯಸ್ಥರು ಶಾಕ್‌ ಆಗಿದ್ದಾರೆ.

ಮೈಸೂರಿನ(Mysuru) ಕೆ.ಆರ್.‌‌ ಮೊಹಲ್ಲಾದಲ್ಲಿರುವ ಎಸ್‌ಎಂಎಂ ಮೊಬೈಲ್ ರಿಪೇರಿ ತರಬೇತಿ ಕೇಂದ್ರದಲ್ಲಿ ಶಾರೀಕ್‌ ಮೊಬೈಲ್ ರಿಪೇರಿ ತರಬೇತಿ ಪಡೆಯುತ್ತಿದ್ದ. ನಾನು ಧಾರವಾಡ ಮೂಲದ ಪ್ರೇಮ್ ರಾಜ್ ಎಂದು ದಾಖಲೆ ನೀಡಿ ಪ್ರವೇಶ ಪಡೆದಿದ್ದ. ನನಗೆ ಮೈಸೂರಿನ ಕಾಲ್‌ ಸೆಂಟರ್‌ನಲ್ಲಿ ಉದ್ಯೋಗ ಸಿಕ್ಕಿದೆ. ಅಲ್ಲಿ ಸೇರಲು 20 ದಿನ ಸಮಯವಿದೆ. ಈ ಸಮಯದಲ್ಲಿ ಮೊಬೈಲ್‌ ತರಬೇತಿಗೆ ಸೇರಿದ್ದೇನೆ ಎಂದು ಹೇಳಿ ನಂಬಿಸಿದ್ದ.‌ ಇದನ್ನೂ ಓದಿ: ಸಹೋದರಿಯರ ಅಕೌಂಟ್‍ಗೆ ಲಕ್ಷ ಲಕ್ಷ ಟ್ರಾನ್ಸ್‌ಫರ್- ವಿದೇಶದಿಂದಲೇ ಶಾರಿಕ್‍ಗೆ ಸಂದಾಯವಾಗ್ತಿತ್ತಾ ಹಣ?

ಈ ಸಂಸ್ಥೆಯ ಮುಖ್ಯಸ್ಥ ಪ್ರಸಾದ್ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಶಾರೀಕ್‌ ತನ್ನ ವಾಟ್ಸಪ್‌ ಡಿಪಿಯಲ್ಲಿ ಈಶ್ವರನ ಫೋಟೋ ಹಾಕಿದ್ದ. ಧಾರವಾಡ ಶೈಲಿಯ ಕನ್ನಡವನ್ನೇ ಮಾತಾಡುತ್ತಿದ್ದ. ವೇಷ ಭೂಷಣವಾಗಲಿ, ಬಟ್ಟೆಯಾಗಲಿ ಯಾವುದರಲ್ಲೂ ಅವನು ಮುಸ್ಲಿಂ ವ್ಯಕ್ತಿ ಎಂಬ ಅನುಮಾನವೇ ಬಂದಿರಲಿಲ್ಲ ಎಂದು ಹೇಳಿದರು.

ತರಗತಿಗೆ ಆತ ಸರಿಯಾಗಿ ಬರುತ್ತಿರಲಿಲ್ಲ. ತರಗತಿಗೆ ಬಂದರೂ ಆಗಾಗ ಬಾಗಿಲು ಕಡೆಯೆ ಹೆಚ್ಚು ನೋಡುತ್ತಿದ್ದ. ಮೊಬೈಲ್ ರಿಪೇರಿ ಮಡಲೆಂದೇ 10 ಮೊಬೈಲ್‌ ಖರೀದಿಸಿದ್ದ. ಒಂದು ಬಾರಿ ವಾಟ್ಸಪ್‌ ಸ್ಟೇಟಸ್‌ನಲ್ಲಿ ಕೇರಳ ನೋಂದಣಿಯ ಬೈಕ್‌ ಫೋಟೋ ಹಾಕಿದ್ದ. ಆಗ ನಾನು ಪ್ರಶ್ನೆ ಮಾಡಿದ್ದೆ. ಅದಕ್ಕೆ ನನ್ನ ಸ್ನೇಹಿತ ಕೇರಳದಲ್ಲಿ ಇದ್ದಾನೆ. ಹೊಸ ಬೈಕ್‌ ತೆಗೆದುಕೊಂಡಿದ್ದು ಅದಕ್ಕೆ ವಿಶ್‌ ಮಾಡಿದ್ದೆ ಎಂದು ಹೇಳಿದ್ದ. ಹಲವು ಬಾರಿ ಕರೆ ಬಂದಾಗ ತಮಿಳಿನಲ್ಲಿ ಆತ ಮಾತನಾಡುತ್ತಿದ್ದ. ನೀನು ಧಾರವಾಡದವನು ತಮಿಳು ಭಾಷೆ ಹೇಗೆ ಬರುತ್ತೆ ಎಂದಿದ್ದಕ್ಕೆ ಆತ ನಾನು ಸ್ವಲ್ಪ ಸಮಯ ತಮಿಳುನಾಡಿನಲ್ಲಿದ್ದೆ. ಅಲ್ಲಿ ತಮಿಳು ಕಲಿತಿದ್ದೇನೆ ಎಂದು ಉತ್ತರಿಸಿದ್ದ ಎಂದು ಹೇಳಿದರು.

 

ಶುಕ್ರವಾರ ನಮಾಜ್‌ ಮಾಡಲು ತೆರಳುತ್ತಿದ್ನಾ ಎಂಬ ಪ್ರಶ್ನೆಗೆ, ಆತ ಮುಸ್ಲಿಮ್‌ ವ್ಯಕ್ತಿಯಂತೆ ಎಲ್ಲಿಯೂ ಅನುಮಾನ ಬಂದಿರಲಿಲ್ಲ. ಅವನಿಗೆ ಇಲ್ಲಿ ಯಾರೂ ಸ್ನೇಹಿತರಲಿಲ್ಲ. ನಮಾಜ್‌ ಮಾಡಲು ತೆರಳುತ್ತಿರಲಿಲ್ಲ. ರೂಮಿನಿಂದ ಒಬ್ಬನೇ ಬರುತ್ತಿದ್ದ. ದೀಪಾವಳಿ ಸಮಯದಲ್ಲಿ ಹಬ್ಬ ಆಚರಿಸಲು ಊರಿಗೆ ಹೋಗಲ್ವಾ ಎಂದು ಕೇಳಿದ್ದಕ್ಕೆ, ನಾನು ಊರಿಗೆ ಹೋಗುವುದಿಲ್ಲ. ಇಲ್ಲಿ ನನ್ನ ಸ್ನೇಹಿತರಿದ್ದಾರೆ. ಇಲ್ಲಿಯೇ ಆಚರಿಸುತ್ತೇನೆ. ಶನಿವಾರ ರಾತ್ರಿ ಪೊಲೀಸರು ಕರೆ ಮಾಡಿದಾಗ ನನಗೆ ಶಾಕ್‌ ಆಯ್ತು. ನಾನು ಪೊಲೀಸರಿಗೆ ಆತನ ಬಗ್ಗೆ ಸಂಪೂರ್ಣವಾದ ವಿವಾರ ನೀಡಿದ್ದೇನೆ ಎಂದು ತಿಳಿಸಿದರು.

Live Tv

Leave a Reply

Your email address will not be published. Required fields are marked *

Back to top button