ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಉಂಟಾದ ಗಲಭೆ ಹಾಗೂ ಸಚಿವ ರಮಾನಾಥ ರೈ ವೀಡಿಯೋ ವಿವಾದ ದಕ್ಷಿಣ ಕನ್ನಡ ಜಿಲ್ಲೆಯ ಎಸ್‍ಪಿ ಭೂಷಣ್ ಜಿ ಬೊರಸೆ ಅವರ ತಲೆದಂಡ ಪಡೆದಿದೆ.
ಬೆಂಗಳೂರು ಆಡಳಿತ ಡಿಸಿಪಿಯಾಗಿ ಭೂಷಣ್ ಬೊರಸೆ ವರ್ಗಾವಣೆಯಾಗಿದ್ದಾರೆ. ದಕ್ಷಿಣ ಕನ್ನಡದ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮಂಡ್ಯದ ಎಸ್‍ಪಿಯಾಗಿರೋ ಸುಧೀರ್ ಕುಮಾರ್ ರೆಡ್ಡಿಯನ್ನ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Advertisement
ಇನ್ನು ಮಂಡ್ಯದ ಎಸ್‍ಪಿಯಾಗಿ ಜಿ.ರಾಧಿಕಾ, ರಾಯಚೂರು ಎಸ್‍ಪಿಯಾಗಿ ನಿಶಾ ಜೇಮ್ಸ್, ಬೆಳಗಾವಿ ಡಿಸಿಪಿಯಾಗಿ ಸೀಮಾ ಅನಿಲ್ ಲಾಟ್ಕರ್‍ರನ್ನ ಸರ್ಕಾರ ನೇಮಕ ಮಾಡಿದೆ. ಇನ್ನು ಡಿಸಿಪಿ ಲಾಬೂರಾಮ್ ಕೇಂದ್ರ ಸೇವೆಗೆ ನಿಯೋಜನೆಯಾದ ಹಿನ್ನೆಲೆಯಲ್ಲಿ ಬೆಂಗಳೂರು ಉತ್ತರ ವಿಭಾಗದ ಡಿಸಿಪಿಯಾಗಿ ಚೇತನ್‍ಸಿಂಗ್ ರಾಥೋಡ್‍ರನ್ನ ಸರ್ಕಾರ ನೇಮಿಸಿದೆ.
Advertisement
ಇದನ್ನೂ ಓದಿ: Exclusive: ದಕ್ಷಿಣ ಕನ್ನಡ ಜಿಲ್ಲಾ ಎಸ್‍ಪಿಗೆ ಸಚಿವ ರಮಾನಾಥ ರೈ ಕ್ಲಾಸ್- ವಿಡಿಯೋ ನೋಡಿ
Advertisement
ಇದನ್ನೂ ಓದಿ: ಜೀವನದಲ್ಲಿ ಯಾರಿಗೂ ಭಯ ಪಡಲ್ಲ, ನಾನು ಹುಲಿ ವಂಶದಲ್ಲಿ ಹುಟ್ಟಿದವನು: ರಮಾನಾಥ ರೈ
Advertisement