ನವದೆಹಲಿ: ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ (TVK) ಪಕ್ಷಕ್ಕೆ ಬೆಂಬಲ ನೀಡಿದ ವಿಚಾರವಾಗಿ ಕಾಂಗ್ರೆಸ್ (Congress) ಮತ್ತು ಡಿಎಂಕೆ (DMK) ನಡುವಿನ ವಾಕ್ಸಮರ ಈಗ ತಾರಕಕ್ಕೇರಿದೆ.
“ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದೆ” ಎಂಬ ಡಿಎಂಕೆಯ ಗಂಭೀರ ಆರೋಪಕ್ಕೆ, ರಾಹುಲ್ ಗಾಂಧಿ ಆಪ್ತ ಹಾಗೂ ಕಾಂಗ್ರೆಸ್ ನಾಯಕ ಶ್ರೀವತ್ಸ(Srivatsa) ಅವರು ಅಂಕಿ-ಅಂಶ ಹಾಗೂ ಇತಿಹಾಸದ ದಾಖಲೆಗಳೊಂದಿಗೆ ತಿರುಗೇಟು ನೀಡಿದ್ದಾರೆ.
ಈ ಹಿಂದೆ ಕರ್ನಾಟಕ ಕಾಂಗ್ರೆಸ್ ಜಾಲತಾಣ ಮುಖ್ಯಸ್ಥರಾಗಿದ್ದ ಶ್ರೀವತ್ಸ ಅವರು ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ ಡಿಎಂಕೆಯ ಹಳೆಯ ಮೈತ್ರಿ ರಾಜಕೀಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
LOP Rahul Gandhi supported TVK to keep NDA away and to respect the mandate. RG’s strategy worked. Thalapathy Vijay will be CM.
MK Stalin supported AIADMK to form NDA govt disrespecting the mandate. Stalin’s plan failed. Left has exposed DMK’s communal turn towards NDA.
Let this… https://t.co/ICCmBgC00C pic.twitter.com/l9MlDBTuko
— Srivatsa (@srivatsayb) May 8, 2026
ಶ್ರೀವತ್ಸ ಪೋಸ್ಟ್‌ನಲ್ಲಿ ಏನಿದೆ?
ರಾಹುಲ್ ಗಾಂಧಿ ಅವರು ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರದಿಂದ ದೂರವಿಡಲು ಮತ್ತು ತಮಿಳುನಾಡಿನ ಜನರ ಜನಾದೇಶವನ್ನು ಗೌರವಿಸಲು ಟಿವಿಕೆಯನ್ನು ಬೆಂಬಲಿಸಿದ್ದಾರೆ. ಈ ಮಾಸ್ಟರ್ ಪ್ಲಾನ್ ಯಶಸ್ವಿಯಾಗಿದ್ದು, ದಳಪತಿ ವಿಜಯ್ ಮುಖ್ಯಮಂತ್ರಿಯಾಗುವುದು ಖಚಿತ. ಇದನ್ನೂ ಓದಿ: ಸರ್ಕಾರ ರಚನೆಗೆ ಹೆಣಗಾಡುತ್ತಿದ್ದ ವಿಜಯ್ ಹಾದಿ ಸಲೀಸು- ನಾಳೆ ಚೆನ್ನೈನಲ್ಲಿ ದಳಪತಿಯ ಪಟ್ಟಾಭಿಷೇಕ
In 1999, DMK ditched secular alliances and aligned with BJP. Enjoyed power at the centre for five years.
In 2014, DMK ditched UPA and Congress and went alone.
Everyone knows how a third front option was explored by KCR, Jagan, Stalin, Mamata etc in 2019 as well.
If you there…
— Srivatsa (@srivatsayb) May 8, 2026
1999ರಲ್ಲಿ ಜಾತ್ಯತೀತ ಮೈತ್ರಿಯನ್ನು ತೊರೆದು ಬಿಜೆಪಿಯೊಂದಿಗೆ ಕೈಜೋಡಿಸಿ 5 ವರ್ಷ ಅಧಿಕಾರ ಅನುಭವಿಸಿದೆ. 2014 ರಲ್ಲಿ ಯುಪಿಎ ಮೈತ್ರಿಕೂಟ ಮತ್ತು ಕಾಂಗ್ರೆಸ್ ಅನ್ನು ತೊರೆದು ಏಕಾಂಗಿಯಾಗಿ ಸ್ಪರ್ಧೆ ಮಾಡಿತ್ತು. 2019 ರಲ್ಲಿ ಕೆಸಿಆರ್, ಜಗನ್ ಮತ್ತು ಮಮತಾ ಬ್ಯಾನರ್ಜಿ ಅವರೊಂದಿಗೆ ಸೇರಿ ‘ತೃತೀಯ ರಂಗ’ ರಚಿಸಲು ಡಿಎಂಕೆ ಕಸರತ್ತು ನಡೆಸಿತ್ತು.
ಇತಿಹಾಸದಲ್ಲಿ ಡಿಎಂಕೆ ಜನತಾ ಪಕ್ಷ ಹಾಗೂ ಜನತಾ ದಳದ ಜೊತೆ ಮೈತ್ರಿ ಮಾಡಿಕೊಂಡಿದ್ದಲ್ಲದೆ, ‘ತಮಿಳು ಮನಿಲಾ ಕಾಂಗ್ರೆಸ್’ ಅಂತಹ ಪಕ್ಷಗಳನ್ನು ಬಳಸಿಕೊಂಡು ಕಾಂಗ್ರೆಸ್ ಅನ್ನು ಒಡೆಯಲು ಯತ್ನಿಸಿತ್ತು ಎಂದು ಅವರು ನೆನಪಿಸಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ ನಾವು ಕಾಂಗ್ರೆಸ್ ಜೊತೆ ಕೂರಲ್ಲ, ಪ್ರತ್ಯೇಕ ಆಸನ ನೀಡಿ: ಸ್ಪೀಕರ್‌ಗೆ ಡಿಎಂಕೆ ಮನವಿ
The day of the result LOP Rahul Gandhi spoke to Stalin and Mamata.
The next day morning LOP Rahul Gandhi supported Mamata and said 100 seats were stolen in Bengal by BJP.
Congress supported TVK to respect the mandate Vijay has got and to form a stable government to keep NDA out…
— Srivatsa (@srivatsayb) May 8, 2026
ತಮಿಳುನಾಡಿನಲ್ಲಿ ಎನ್‌ಡಿಎ ಅಶ್ವಮೇಧಕ್ಕೆ ಬ್ರೇಕ್ ಹಾಕುತ್ತಿರುವ ರಾಹುಲ್ ಗಾಂಧಿ ಅವರ ನಿಲುವನ್ನು ಟೀಕಿಸುವ ಮೊದಲು, ಡಿಎಂಕೆ ನಾಯಕರು ತಮ್ಮ ಇತಿಹಾಸವನ್ನು ಒಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳಲಿ ಎಂದು ಶ್ರೀವತ್ಸ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

