ಚೆನ್ನೈ: ಪಟ್ಟು ಬಿಡದ ನಟ-ರಾಜಕಾರಣಿ ವಿಜಯ್ (Vijyay) ಅವರ ತಮಿಳಗ ವೆಟ್ರಿ ಕಳಗಂ (TVK) ಮತ್ತು ರಾಜ್ಯಪಾಲರ ನಡುವಿನ ಜಿದ್ದಾಜಿದ್ದಿನಿಂದಾಗಿ ತಮಿಳುನಾಡು ರಾಜಕೀಯ ಈಗ ಮತ್ತಷ್ಟು ರೋಚಕ ತಿರುವು ಪಡೆದುಕೊಂಡಿದೆ. ಇಂದು ಮೂರನೇ ಬಾರಿಗೆ ರಾಜ್ಯಪಾಲರನ್ನು ಭೇಟಿ ಮಾಡಿದ ವಿಜಯ್, ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದರೂ ಬಹುಮತದ ಮ್ಯಾಜಿಕ್ ನಂಬರ್ ಸುತ್ತಲಿನ ಅನಿಶ್ಚಿತತೆ ಮಾತ್ರ ಮುಂದುವರಿದಿದೆ.
ಟಿವಿಕೆ ಅಧ್ಯಕ್ಷ ವಿಜಯ್ ಅವರು ಇಂದು ರಾಜಭವನದಲ್ಲಿ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ಭೇಟಿಯಾಗಿ, ತಮ್ಮ ಬಳಿ 116 ಶಾಸಕರ ಬೆಂಬಲವಿದೆ ಎಂದು ಪತ್ರ ಸಲ್ಲಿಸಿದ್ದಾರೆ. ಆದರೆ ತಮಿಳುನಾಡು ವಿಧಾನಸಭೆಯ ಒಟ್ಟು 234 ಸ್ಥಾನಗಳಲ್ಲಿ ಬಹುಮತ ಸಾಬೀತುಪಡಿಸಲು 118 ಶಾಸಕರ ಅಗತ್ಯವಿದೆ.
Tamil Nadu political development | “The support letter from Viduthalai Chiruthaigal Katchi (VCK) has been sent to TVK via email,” tweets VCK. pic.twitter.com/TtLHK3Yd17
— ANI (@ANI) May 8, 2026
ಟಿವಿಕೆಗೆ ಈ ಹಿಂದೆ ಬೆಂಬಲ ನೀಡಬಹುದು ಎನ್ನಲಾಗಿದ್ದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಈಗ ಅಧಿಕೃತವಾಗಿ ಹಿಂದೆ ಸರಿದಿದೆ. “ನಮ್ಮದು ಸಿದ್ಧಾಂತದ ಮೈತ್ರಿ, ಡಿಎಂಕೆಯನ್ನು ಬಿಟ್ಟು ಬೇರೆ ಯಾರನ್ನೂ ಬೆಂಬಲಿಸುವುದಿಲ್ಲ” ಎಂದು ಪಕ್ಷ ಘೋಷಿಸಿದೆ. ಇದು ವಿಜಯ್ ಅವರ ಲೆಕ್ಕಾಚಾರಕ್ಕೆ ಹಿನ್ನಡೆ ಉಂಟುಮಾಡಿದೆ.
ಇಬ್ಬರು ಶಾಸಕರನ್ನು ಹೊಂದಿರುವ ವಿಸಿಕೆ (VCK) ಪಕ್ಷವು ಟಿವಿಕೆ ಕೊನೆಗೂ ಬೆಂಬಲ ನೀಡಿದೆ. ಹೀಗಾಗಿ ಬಹುಮತಕ್ಕೆ ಬೇಕಾಗಿರುವ 118 ಮ್ಯಾಜಿಕ್ ಸಂಖ್ಯೆಯನ್ನು ಟಿವಿಕೆ ಈಗ ಪಡೆದುಕೊಂಡಿದೆ.
ಇದನ್ನೂ ಓದಿ: ಡಿಎಂಕೆ ‘ಬೆನ್ನಿಗೆ ಚೂರಿ’ ಆರೋಪಕ್ಕೆ ತಿರುಗೇಟು – ‘ಇತಿಹಾಸ ಮರೆಯಬೇಡಿ’ ಎಂದು ಕನ್ನಡಿ ತೋರಿಸಿದ ಕಾಂಗ್ರೆಸ್
#BreakingNews | தவெக ஆதரவு இல்லை.
திமுக தலைமையிலான மதச்சார்பற்ற முற்போக்கு கூட்டணியில் இந்திய யூனியன் முஸ்லிம் லீக் தொடர்கிறது.
பேராசிரியர் கே எம் காதர் மொகிதீன்
தேசியத் தலைவர்
இந்திய யூனியன் முஸ்லிம் லீக்#IUML #tvk #JustIn pic.twitter.com/ITFvO3os6z— IUML Tamil Nadu (@IUMLTNOfficial) May 8, 2026
ಯಾರು ಎಷ್ಟು ಸ್ಥಾನ ಗೆದ್ದಿದ್ದಾರೆ?
ಟಿವಿಕೆ – 108
ಡಿಎಂಕೆ – 59
ಎಐಎಡಿಎಂಕೆ -47
ಕಾಂಗ್ರೆಸ್ – 05
ಪಿಎಂಕೆ -04
ವಿಸಿಕೆ – 02
ಸಿಪಿಐ – 02
ಸಿಪಿಎಂ – 02
ಐಯುಎಂಎಲ್ -02
ಶನಿವಾರ ಬೆಳಿಗ್ಗೆ 11 ಗಂಟೆಗೆ ವಿಜಯ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ವದಂತಿಗಳಿದ್ದವು. ಆದರೆ ರಾಜ್ಯಪಾಲರ ಕಚೇರಿಯ ಮೂಲಗಳ ಪ್ರಕಾರ, ಪೂರ್ಣ ಪ್ರಮಾಣದ ಬಹುಮತದ (118) ದಾಖಲೆಗಳನ್ನು ಸಲ್ಲಿಸದ ಹೊರತು ಸರ್ಕಾರ ರಚನೆಗೆ ಆಹ್ವಾನ ನೀಡಲು ಸಾಧ್ಯವಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಡಿಎಂಕೆ ‘ಬೆನ್ನಿಗೆ ಚೂರಿ’ ಆರೋಪಕ್ಕೆ ತಿರುಗೇಟು – ‘ಇತಿಹಾಸ ಮರೆಯಬೇಡಿ’ ಎಂದು ಕನ್ನಡಿ ತೋರಿಸಿದ ಕಾಂಗ್ರೆಸ್
ಒಂದು ವೇಳೆ ವಿಸಿಕೆ ಬೆಂಬಲ ನೀಡದಿದ್ದರೆ, ವಿಜಯ್ ಅವರು ಬೇರೆ ಪಕ್ಷಗಳ ಶಾಸಕರ ಮೊರೆ ಹೋಗಬೇಕಾಗುತ್ತದೆ. ಇಲ್ಲವಾದಲ್ಲಿ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಅಥವಾ ಮೈತ್ರಿ ಸರ್ಕಾರಗಳ ಹೊಸ ಕಸರತ್ತು ಆರಂಭವಾಗುವ ಸಾಧ್ಯತೆಯಿದೆ.

