– ಹೈಕಮಾಂಡ್ ಅಂಗಳದಲ್ಲಿ ‘ಕೈ’ ನಾಯಕರ ಭವಿಷ್ಯ
ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ (Kerala Election) ಭರ್ಜರಿ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬಂದಿರುವ ಯುಡಿಎಫ್ (UDF) ಮೈತ್ರಿಕೂಟಕ್ಕೆ ಈಗ ಮುಖ್ಯಮಂತ್ರಿ ಆಯ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ನಾಲ್ವರು ಘಟಾನುಘಟಿ ನಾಯಕರ ನಡುವೆ ಪೈಪೋಟಿ ಏರ್ಪಟ್ಟಿದ್ದು, ಅಂತಿಮ ನಿರ್ಧಾರಕ್ಕಾಗಿ ಇಡೀ ಕೇರಳ ಕಾಂಗ್ರೆಸ್ ಈಗ ದೆಹಲಿಯ ಹೈಕಮಾಂಡ್‌ನತ್ತ ಮುಖ ಮಾಡಿದೆ.
ಸಿಎಂ ರೇಸ್‌ನಲ್ಲಿ ಯಾರಿದ್ದಾರೆ?
ಕೆ.ಸಿ. ವೇಣುಗೋಪಾಲ್: ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಹೈಕಮಾಂಡ್‌ನ ಅತ್ಯಂತ ಪರಮಾಪ್ತ
ವಿ.ಡಿ. ಸತೀಶನ್: ನಿರ್ಗಮಿತ ವಿಧಾನಸಭೆಯ ವಿರೋಧ ಪಕ್ಷದ ನಾಯಕರು.
ರಮೇಶ್ ಚೆನ್ನಿತ್ತಲ: ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರು ಹಾಗೂ ಹಿರಿಯ ನಾಯಕರು.
ಸನ್ನಿ ಜೋಸೆಫ್: ಪ್ರಭಾವಿ ಶಾಸಕರು.
Good morning! This is today’s #ExpressFrontPage from #Kerala
For more news, click on the link – https://t.co/A3aYy9oNcu@santwana99 @MSKiranPrakash @PaulCithara @NewIndianXpress pic.twitter.com/ilwsvQhk4Z
— TNIE Kerala (@xpresskerala) May 8, 2026
ಮತದಾನದ ಮಾಹಿತಿ ಲೀಕ್
ಸಿಎಂ ಆಯ್ಕೆ ಪ್ರಕ್ರಿಯೆಯ ಭಾಗವಾಗಿ ನಿನ್ನೆ ಕೇಂದ್ರ ವೀಕ್ಷಕ ಮುಕುಲ್ ವಾಸ್ನಿಕ್ ಅವರು ನೂತನ ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದರು. ಆದರೆ ಈ ರಹಸ್ಯ ಪ್ರಕ್ರಿಯೆಯ ಮಾಹಿತಿ ಈಗ ಬಹಿರಂಗವಾಗಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಶಾಸಕರು ತಮ್ಮ ಅಭಿಪ್ರಾಯ ದಾಖಲಿಸಿದ್ದ ಪಟ್ಟಿಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅದರಲ್ಲಿ ಹೆಚ್ಚಿನ ಶಾಸಕರು ಹೆಸರಿನ ಮುಂದೆ ‘KC’ (ಕೆ.ಸಿ. ವೇಣುಗೋಪಾಲ್) ಎಂದು ಬರೆದು ಬೆಂಬಲ ಸೂಚಿಸಿರುವುದು ಬೆಳಕಿಗೆ ಬಂದಿದೆ.
ರಹಸ್ಯವಾಗಿರಬೇಕಿದ್ದ ಶಾಸಕರ ಅಭಿಪ್ರಾಯದ ಮಾಹಿತಿ ಮತ್ತು ಪಟ್ಟಿಯ ಫೋಟೋ ಸೋರಿಕೆಯಾಗಿರುವುದಕ್ಕೆ ಕೇರಳ ರಾಜ್ಯ ಕಾಂಗ್ರೆಸ್ ತೀವ್ರ ಅಸಮಾಧಾನ ಹೊರಹಾಕಿದೆ. ಇದು ಪಕ್ಷದ ಶಿಸ್ತಿನ ಉಲ್ಲಂಘನೆ ಎಂದು ಕೆಲವು ನಾಯಕರು ದೂರಿದ್ದಾರೆ. ಇದನ್ನೂ ಓದಿ: ಡಿಎಂಕೆ ‘ಬೆನ್ನಿಗೆ ಚೂರಿ’ ಆರೋಪಕ್ಕೆ ತಿರುಗೇಟು – ‘ಇತಿಹಾಸ ಮರೆಯಬೇಡಿ’ ಎಂದು ಕನ್ನಡಿ ತೋರಿಸಿದ ಕಾಂಗ್ರೆಸ್
ಹೈಕಮಾಂಡ್‌ನಿಂದ ನೂತನ ಮುಖ್ಯಮಂತ್ರಿಯ ಹೆಸರು ಶನಿವಾರ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ. ಸೋಮವಾರ ತಿರುವನಂತಪುರಂನಲ್ಲಿ ಅದ್ಧೂರಿ ಪ್ರಮಾಣ ವಚನ ಸಮಾರಂಭ ನಡೆಯಲಿದೆ.

