ನವದೆಹಲಿ: ಫಿನ್ ಅಲೆನ್ ಸ್ಫೋಟಕ ಶತಕದಾಟ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 142 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನತ್ತಿದ್ದ ಕೋಲ್ಕತ್ತಾ ಕೇವಲ 2 ವಿಕೆಟ್ ನಷ್ಟಕ್ಕೆ 14.2 ಓವರ್‌ನಲ್ಲೇ ಗುರಿ ತಲುಪಿ ಗೆದ್ದು ಬೀಗಿತು.
ಬ್ಯಾಟಿಂಗ್ ವೈಫಲ್ಯವು ಡೆಲ್ಲಿ ಮತ್ತೊಂದು ಸೋಲಿನ ಆಘಾತ ನೀಡಿದೆ. ಪಾತುಮ್ ನಿಸ್ಸಂಕ ಅರ್ಧಶತಕ ಗಳಿಸಿದ್ದು ಬಿಟ್ಟರೆ, ಯಾವೊಬ್ಬ ಬ್ಯಾಟರ್ ಕೂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಫಾರ್ಮ್‌ನಲ್ಲಿರುವ ಕೆಎಲ್ ರಾಹುಲ್ (23 ರನ್) ದೊಡ್ಡ ಹೊಡೆತಕ್ಕೆ ಮುಂದಾಗಿ ಕ್ಯಾಚ್ ನೀಡಿ ನಿರ್ಗಮಿಸಿದ್ದು, ತಂಡಕ್ಕೆ ನಿರಾಸೆ ಮೂಡಿಸಿತು. ಉಳಿದಂತೆ ಅಶುತೋಷ್ ಶರ್ಮಾ 39, ಕ್ಯಾಪ್ಟನ್ ಅಕ್ಷರ್ ಪಟೇಲ್ 11 ರನ್ ಅಷ್ಟೇ ಗಳಿಸಿದರು. ಉಳಿದ ಬ್ಯಾಟರ್‌ಗಳು ಒಂದಂಕಿ ರನ್ ದಾಟವಲ್ಲೂ ವಿಫಲರಾದರು. ಕೆಕೆಆರ್ ಪರ ಅನುಕೂಲ್ ರಾಯ್, ಕಾರ್ತಿಕ್ ತ್ಯಾಗಿ ತಲಾ 2, ವೈಭವ್ ಅರೋರಾ, ಸುನೀಲ್ ನರೈನ್, ಕ್ಯಾಮರೂನ್ ಗ್ರೀನ್ ತಲಾ 1 ವಿಕೆಟ್ ಪಡೆದರು.
ನಂತರ ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ 34 ಬಾಲ್ ಬಾಕಿ ಇರುವಾಗಲೇ ಗುರಿ ತಲುಪಿ ಗೆದ್ದು ಬೀಗಿತು. ನಾಯಕ ಅಜಿಂಕ್ಯಾ ರಹಾನೆ 13 ರನ್ ಗಳಿಸಿದರು. ತಂಡದ ಗೆಲುವಿನಲ್ಲಿ ಫಿನ್ ಅಲೆನ್ ಪ್ರಮುಖ ಪಾತ್ರ ವಹಿಸಿದರು. 47 ಬಾಲ್‌ಗೆ ಶತಕ ಸಿಡಿಸಿ ಸಂಭ್ರಮಿಸಿದರು. 10 ಸಿಕ್ಸರ್, 5 ಫೋರ್‌ಗಳ ಮೂಲಕ ಡೆಲ್ಲಿ ಬೌಲರ್‌ಗಳನ್ನು ಚೆಂಡಾಡಿದರು. ಇವರಿಗೆ ಕ್ಯಾಮರೂನ್ ಗ್ರೀನ್ ಸಾಥ್ ನೀಡಿದರು. ಗ್ರೀನ್ 33 ರನ್ ಗಳಿಸಿದರು.

