Connect with us

International

ಬಿಸಿಲಿನ ತಾಪ ಹೆಚ್ಚಾಗಿದ್ದಕ್ಕೆ ವಿಮಾನ ಹಾರಾಟವೇ ರದ್ದಾಯ್ತು!

Published

on

ವಾಷಿಂಗ್ಟನ್: ನಿಲ್ದಾಣಗಳಲ್ಲಿ ಮಂಜು ಹೆಚ್ಚಿದ್ದರೆ ವಿಮಾನಗಳು ಲ್ಯಾಂಡ್ ಆಗದೇ ಇರುವುದನ್ನು ನೀವು ಈ ಹಿಂದೆ ಓದಿರಬಹುದು. ಆದರೆ ಈಗ ಬಿಸಿಲು ಜಾಸ್ತಿಯಾದ ಹಿನ್ನೆಲೆಯಲ್ಲಿ ವಿಮಾನಗಳ ಹಾರಾಟವನ್ನು ಅಮೆರಿಕದಲ್ಲಿ ರದ್ದುಮಾಡಲಾಗಿದೆ.

ಹೌದು, ಅಮೆರಿಕ ದೇಶದ ರಾಜ್ಯವಾದ ಅರಿಜೋನಾದ ರಾಜಧಾನಿ ಫೀನಿಕ್ಸ್ ನಲ್ಲಿ ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಫಿನಿಕ್ಸ್ ನಲ್ಲಿ ಮಂಗಳವಾರ 49 ಡಿಗ್ರಿ ಸೆಲ್ಸಿಯಸ್ ದಾಖಲಾದ ಹಿನ್ನೆಲೆಯಲ್ಲಿ ವಿಮಾನಯಾನ ಕಂಪೆನಿಗಳು ಹಾರಾಟವನ್ನು ಸ್ಥಗಿತಗೊಳಿಸಿದೆ. ಬಂಬಾರ್ಡಿಯರ್ ಸಿಆರ್‍ಜಿ ವಿಮಾನಗಳು ಗರಿಷ್ಠ 48 ಡಿಗ್ರಿ ಸೆಲ್ಸಿಯಸ್ ನಲ್ಲಿ ಹಾರಾಟ ಮಾಡುವ ಸಾಮರ್ಥ್ಯವನ್ನು ಹೊಂದಿದ್ದು, ಈ ಸಂಸ್ಥೆಯ 40 ವಿಮಾನಗಳ ಹಾರಾಟ ರದ್ದಾಗಿದೆ.

ದೊಡ್ಡ ವಿಮಾನಗಳಾದ ಬೋಯಿಂಗ್ 747 ಮತ್ತು ಏರ್‍ಬಸ್ ಎ320 ಗಳು ಗರಿಷ್ಠ 52 ಡಿಗ್ರಿ ಸೆಲ್ಸಿಯಸ್ ನಲ್ಲಿ ಹಾರಾಟ ಮಾಡುವ ಸಾಮರ್ಥ್ಯ ಇರುವ ಕಾರಣ ಈ ವಿಮಾನಗಳು ಈ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿವೆ.

ಯಾಕೆ ವಿಮಾನ ಹಾರಲ್ಲ:
ವಾತಾವರಣದ ಉಷ್ಣಾಂಶ ಸಾಧಾರಣವಾಗಿದ್ದರೆ ವಿಮಾನಗಳಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಎತ್ತರದಲ್ಲಿ ಹಾರಾಟ ನಡೆಸುವುದರಿಂದ ಬಿಸಿಲಿನ ತಾಪ ಮತ್ತು ಎಂಜಿನ್ ನಿಂದ ಉತ್ಪಾದನೆಯಾಗುವ ಶಾಖವನ್ನು ವಿಮಾನ ತಡೆದುಕೊಳ್ಳಬೇಕಾಗುತ್ತದೆ. ಉಷ್ಣಾಂಶ ತಡೆದುಕೊಳ್ಳುವ ಸಾಮರ್ಥ್ಯಕ್ಕಿಂತ ಹೆಚ್ಚಿನ ಸೆಲ್ಸಿಯಸ್ ಇದ್ದರೆ ಎಂಜಿನ್ ಮತ್ತು ವಾತಾವರಣದ ಉಷ್ಣತೆ ಎರಡನ್ನೂ ನಿಯಂತ್ರಿಸುವುದು ಕಷ್ಟವಾಗುತ್ತದೆ. ಅದರಲ್ಲೂ ಫುಲ್ ಟ್ಯಾಂಕ್ ಇಂಧನ ತುಂಬಿದ್ದರೆ ವಿಮಾನಕ್ಕೆ ಹಾನಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ.

Click to comment

Leave a Reply

Your email address will not be published. Required fields are marked *