ಮಂಡ್ಯ: ಇಲ್ಲಿನ (Mandya) ಜಿ.ಪಂ ಸಿಇಓ (ZP CEO) ಅವರು ಪ್ರಯಾಣಿಸುತ್ತಿದ್ದ ಕಾರು (Car) ಮತ್ತೊಂದು ಕಾರಿಗೆ ಡಿಕ್ಕಿಯಾದ ಘಟನೆ ಮಂಡ್ಯ ನಗರದಲ್ಲಿ ನಡೆದಿದೆ.
ಸಿಇಓ ಕೆ.ಆರ್.ನಂದಿನಿ ಅವರ ಸರ್ಕಾರಿ ನಿವಾಸದ ಮುಂಭಾಗ ಈ ಅಪಘಾತ ಸಂಭವಿಸಿದೆ. ಅವರು ಮಧ್ಯಾಹ್ನ ಊಟ ಮುಗಿಸಿ ಕಚೇರಿಗೆ ತೆರಳುತ್ತಿದ್ದರು. ಈ ವೇಳೆ ಮತ್ತೊಂದು ಕಾರಿಗೆ ಸಿಇಓ ಕಾರು ಡಿಕ್ಕಿಯಾಗಿದೆ. ಇದನ್ನೂ ಓದಿ: ಪೊಲೀಸ್ ಇನ್‌ಸ್ಪೆಕ್ಟರ್‌ನಿಂದಲೇ 20 ಲಕ್ಷ ರಾಬರಿ ಆರೋಪ – ಹೋಟೆಲ್‌ಗೆ ನುಗ್ಗಿ ಹಣ ಕಸಿದು ಜೀಪ್ ಸಮೇತ ಎಸ್ಕೇಪ್
ಅಪಘಾತದ ರಭಸಕ್ಕೆ ಟೈರ್ ಸ್ಫೋಟಗೊಂಡು ಕಾರಿನ ಮುಂಭಾಗ ಜಖಂಗೊಂಡಿದೆ. ಘಟನೆ ಬಳಿಕ ಸುಧಾರಿಸಿಕೊಂಡು ಮತ್ತೊಂದು ಕಾರಿನಲ್ಲಿ ಸಿಇಓ ಕಚೇರಿಗೆ ತೆರಳಿದ್ದಾರೆ. ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಅಕ್ರಮ ಭೂಮಿ ಮಂಜೂರಾತಿ ಪ್ರಕರಣ – ಜೆಡಿಎಸ್ ಮಾಜಿ ಶಾಸಕ ಕೆ.ಎಸ್ ಲಿಂಗೇಶ್ ಸಿಐಡಿ ವಶಕ್ಕೆ
