ತುಮಕೂರು: ತೀವ್ರ ಎದೆ ನೋವಿನಿಂದ ಎಎಸ್‌ಐ ಸಾವನ್ನಪ್ಪಿದ ಘಟನೆ ಕೊರಟಗೆರೆಯಲ್ಲಿ (Koratagere) ನಡೆದಿದೆ.
ಎನ್.ಜಿ ಪವಾರ್ (54) ಮೃತ ಎಎಸ್‌ಐ. ಕೆಎಸ್‌ಆರ್‌ಪಿ ಬೆಟಾಲಿಯನ್‌ನ ಸಿಬ್ಬಂದಿ ಬ್ಯಾರಕ್‌ನಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ವಿಶ್ರಾಂತಿಗೆ ತೆರಳಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಸಿಬ್ಬಂದಿ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದರು. ಆದರೆ ಮಾರ್ಗ ಮಧ್ಯದಲ್ಲಿ ಅವರು ಕೊನೆ ಉಸಿರೆಳಿದಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲಿ ತಲ್ವಾರ್‌ನಿಂದ ಬೃಹತ್ ಕೇಕ್ ಕತ್ತರಿಸಿ ಬರ್ತಡೇ ಸೆಲೆಬ್ರೇಷನ್ – ಪುಂಡನ ವಿರುದ್ಧ ಎಫ್‌ಐಆರ್
ಎನ್.ಜಿ ಪವಾರ್ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬೀಳಗಿ ಮೂಲದವರು. ಬಾಗಲಕೋಟೆಯಲ್ಲಿ ಪತ್ನಿ ಹೆಡ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಶಾಂತಿ ಒಪ್ಪಂದದ ಬಳಿಕವೂ ಇಸ್ರೇಲ್ ಆಕ್ರಮಣ – ವಾಯುದಾಳಿಗೆ ಲೆಬನಾನ್‌ನಲ್ಲಿ 16 ಬಲಿ
