ಬೆಂಗಳೂರು: ಶವರ್ಮಾ, ಕಬಾಬ್ ಪ್ರಿಯರಿಗೆ ಆಹಾರ ಸುರಕ್ಷತಾ ಇಲಾಖೆ ಶಾಕ್ ನೀಡಿದ್ದು, ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ.
ಬೆಂಗಳೂರಿನ 39 ಕಡೆ ಶವರ್ಮಾ ಸ್ಯಾಂಪಲ್ ಸಂಗ್ರಹಿಸಲಾಗಿತ್ತು. ಅದರಲ್ಲಿ 32 ಸ್ಯಾಂಪಲ್‌ನ್ನ ಲ್ಯಾಬ್‌ಗೆ ರವಾನೆ ಮಾಡಲಾಗಿತ್ತು. ಇದರಲ್ಲಿ 24 ಕಡೆ ಸುರಕ್ಷಿತ, 8 ಕಡೆ ಅಸುರಕ್ಷಿತ ಅಂತಾ ವರದಿ ಮಾಡಿದೆ. ಬಣ್ಣ ಬೆರೆಸಿ ಶವರ್ಮಾ ತಯಾರು ಮಾಡಿರೋದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಉಡುಪಿ| ಕರಾವಳಿ ಪ್ರವಾಸಕ್ಕೆ ಬಂದಿದ್ದ ಬೆಂಗಳೂರು ಯುವಕ ಸಮುದ್ರ ಪಾಲು

ಇನ್ನು, ಬೆಂಗಳೂರಿನ 16 ಕಡೆ ಕಬಾಬ್ ಸ್ಯಾಂಪಲ್ ಕಲೆಕ್ಷನ್ ಮಾಡಿದ್ದು, ಇದರಲ್ಲಿ 14 ಕಡೆ ಸೇಫ್, 2 ಕಡೆ ಅನ್ ಸೇಫ್ ಅಂತಾ ವರದಿ ಬಂದಿದೆ. ಕಬಾಬ್‌ಗೆ ಕಲರ್ ಹಾಕಬಾರದು ಅಂತಾ ಆದೇಶ ಇದ್ರೂ ಕಲರ್ ಬೆರಕೆ ಮಾಡ್ತಾ ಇರೋದು ಪತ್ತೆಯಾಗಿದೆ. ಕೆಲ ತಿಂಗಳ ಹಿಂದೆ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯನ್‌ಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ನಿಷೇಧಿಸಿದ್ದ ಸರ್ಕಾರ, ಕಬಾಬ್ ಹಾಗೂ ಶವರ್ಮಾಗಳ ಮೇಲೆಯೂ ತನ್ನ ನಿಗಾ ಇಟ್ಟಿತ್ತು.

