ಉಡುಪಿ: ಸ್ನೇಹಿತರೊಂದಿಗೆ ಕರಾವಳಿ ಪ್ರವಾಸಕ್ಕೆ(Trip) ಬಂದಿದ್ದ ಬೆಂಗಳೂರಿನ ಯುವಕ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಉಡುಪಿ ಜಿಲ್ಲೆಯ(Udupi) ಬ್ರಹ್ಮಾವರ ತಾಲೂಕಿನ ಕೋಡಿ ಬೀಚ್‌ನಲ್ಲಿ (Cody Beach) ನಡೆದಿದೆ.
ಬೆಂಗಳೂರಿನ ರಾಜಾಜಿನಗರ ನಿವಾಸಿ ನಿಖಿಲ್ ಕುಮಾರ್ (32) ಮೃತ ಯುವಕ. ನಿಖಿಲ್ ತಮ್ಮ 9 ಮಂದಿ ಸ್ನೇಹಿತರ ತಂಡದೊಂದಿಗೆ ಕರಾವಳಿ ಪ್ರವಾಸಕ್ಕೆ ಬಂದಿದ್ದರು. ಬೀಚ್‌ನಲ್ಲಿ ಸಮಯ ಕಳೆಯುತ್ತಿದ್ದ ವೇಳೆ ನಿಖಿಲ್ ಸಮುದ್ರದಲ್ಲಿ ಈಜಲು ಇಳಿದಿದ್ದರು. ಈ ವೇಳೆ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರದೊಳಗೆ ಕೊಚ್ಚಿಹೋಗಿದ್ದಾರೆ.ಇದನ್ನೂ ಓದಿ: ಕೊರಟಗೆರೆ | ತೀವ್ರ ಎದೆನೋವಿನಿಂದ ASI ಸಾವು
ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ದೋಣಿಯ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಸಿಕ್ಕ ನಿಖಿಲ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ನಿಖಿಲ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.ಇದನ್ನೂ ಓದಿ: ಪೊಲೀಸ್ ಇನ್‌ಸ್ಪೆಕ್ಟರ್‌ನಿಂದಲೇ 20 ಲಕ್ಷ ರಾಬರಿ ಆರೋಪ – ಹೋಟೆಲ್‌ಗೆ ನುಗ್ಗಿ ಹಣ ಕಸಿದು ಜೀಪ್ ಸಮೇತ ಎಸ್ಕೇಪ್
