ವಿಜಯಪುರ: ಸದಾ ಮಹಿಳಾ ಸಂಘಟನೆ ಕೆಲಸದಲ್ಲಿ ನಿರತಳಾಗಿ ಮನೆ ಹಾಗೂ ಮಕ್ಕಳನ್ನು ನಿರ್ಲಕ್ಷಿಸಿದ್ದ ಪತ್ನಿ ಹಾಗೂ ಅತ್ತೆಯನ್ನು ವ್ಯಕ್ತಿಯೋರ್ವ ಕೊಲೆಗೈದ (Murder) ಪ್ರಕರಣ ನಗರದ (Vijayapura) ನವಭಾಗ್ ಪ್ರದೇಶದಲ್ಲಿ ನಡೆದಿದೆ.
ರೂಪಾ ಮೇತ್ರಿ (32) ಹಾಗೂ ಆಕೆಯ ತಾಯಿ ಕಲ್ಲವ್ವ (55) ಕೊಲೆಯಾದ ಮಹಿಳೆಯರು. ಕೊಲೆಗೈದ ಆರೋಪಿಯನ್ನು ಮಲ್ಲಿಕಾರ್ಜುನ ಮೇತ್ರಿ ಎಂದು ಗುರುತಿಸಲಾಗಿದೆ. ಆರೋಪಿ ಪತ್ನಿ, ಮೂವರು ಮಕ್ಕಳು ಹಾಗೂ ಅತ್ತೆಯೊಂದಿಗೆ ನವಭಾಗ್‍ನ ಭಗವಾನ್ ಎಂಬವರಿಗೆ ಸೇರಿದ ಮನೆಯಲ್ಲಿ ಆರು ತಿಂಗಳಿಂದ ಬಾಡಿಗೆಗೆ ಇದ್ದರು. ಹತ್ಯೆಯಾದ ರೂಪಾ ಹೆಚ್ಚಿನ ಸಮಯ ಮಹಿಳಾ ಸಂಘಟನೆ ಒಂದರ ಕೆಲಸದ ಮೇಲೆ ಮನೆಯಿಂದ ಹೊರಗೆ ಇರುತ್ತಿದ್ದಳು. ಇದೇ ಕಾರಣಕ್ಕೆ ಅವರಿಬ್ಬರ ನಡುವೆ ಆಗಾಗ ಜಗಳ ಸಹ ನಡೆಯುತ್ತಿತ್ತು ಎನ್ನಲಾಗಿದೆ. ಇದನ್ನೂ ಓದಿ: ನಿರ್ಮಾಣ ಹಂತದ ಕಟ್ಟಡದಿಂದ ಕಬ್ಬಿಣದ ಸರಳುಗಳ ಮೇಲೆ ಬಿದ್ದ ಯುವಕ!
ಅಲ್ಲದೇ ಪತ್ನಿ, ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ, ಮನೆಯಲ್ಲಿ ಕೆಲಸ ಮಾಡುತ್ತಿರಲಿಲ್ಲ ಎಂದು ಆರೋಪಿ ಮಲ್ಲಿಕಾರ್ಜುನ ಹೇಳಿಕೊಂಡಿದ್ದಾನೆ. ಇದೇ ವಿಚಾರಕ್ಕೆ ಇಬ್ಬರು ಮಲಗಿದ್ದ ವೇಳೆ ಕಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆಗೈದಿದ್ದಾನೆ. ಬಳಿಕ ಗಾಂಧಿಚೌಕ್ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಈ ಸಂಬಂಧ ಗಾಂಧಿಚೌಕ್ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ವಂಚನೆ ಕೇಸಲ್ಲಿ ಚೈತ್ರಾ ಲಾಕ್; ಹರಕೆ ಈಡೇರಿತು ಅಂತ 101 ಈಡುಗಾಯಿ ಹೊಡೆದ ಮಲೆನಾಡಿಗರು
Web Stories