ಲಕ್ನೋ: ರೀಲ್ಸ್ (Reels) ಹುಚ್ಚಿಗಾಗಿ ವ್ಯಕ್ತಿಯೊಬ್ಬ 30 ಅಡಿ ಎತ್ತರದಿಂದ ಡ್ಯಾಂಗೆ ಜಿಗಿದ ಪರಿಣಾಮ ಎರಡೂ ಕಾಲುಗಳ ಮೂಳೆ ಮುರಿತಕ್ಕೊಳಗಾಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಝಾನ್ಸಿಯಲ್ಲಿ (Jhansi) ನಡೆದಿದೆ.
ಝಾನ್ಸಿಯ ಪಹುಜ್ ಡ್ಯಾಂನಲ್ಲಿ (Pahuj Dam) ಭಾನುವಾರ ಘಟನೆ ನಡೆದಿದೆ. ಪುಷ್ಪೇಂದ್ರ ಎಂಬ 38 ವರ್ಷದ ವ್ಯಕ್ತಿ ತನ್ನ ಸ್ನೇಹಿತರೊಂದಿಗೆ ರೀಲ್ಸ್ ಶೂಟ್ ಮಾಡಲು ಡ್ಯಾಂಗೆ ತೆರಳಿದ್ದ. ವಿಭಿನ್ನ ಹಾಗೂ ಸಾಹಸಮಯ ದೃಶ್ಯ ಸೆರೆಹಿಡಿಯುವ ಉದ್ದೇಶದಿಂದ ಪುಷ್ಪೇಂದ್ರ ಡ್ಯಾಂನ ವೀಕ್ಷಣಾ ಸ್ಥಳದ ರೈಲಿಂಗ್ ದಾಟಿ ಸುಮಾರು 30 ಅಡಿ ಎತ್ತರದಿಂದ ಕೆಳಗೆ ಜಿಗಿದಿದ್ದಾನೆ. ಇದನ್ನೂ ಓದಿ: ಕೃಷ್ಣಾ ಭಾಗ್ಯ ಜಲ ನಿಗಮದ ಪ್ರಗತಿ ಪರಿಶೀಲನೆ – ಕಳಪೆ ಕಾಮಗಾರಿ ಸಹಿಸಲ್ಲ, ಗುಣಮಟ್ಟದಲ್ಲಿ ರಾಜಿ ಇಲ್ಲ: ಚಲುವರಾಯಸ್ವಾಮಿ ಎಚ್ಚರಿಕೆ
ನೀರಿನ ಆಳವನ್ನು ಸರಿಯಾಗಿ ಅಂದಾಜಿಸಲು ವಿಫಲರಾದ ಕಾರಣ ಆಳವಾದ ನೀರಿಗೆ ಬೀಳುವ ಬದಲು ಕೆಳಗಿದ್ದ ಬಂಡೆಗಳ ಮೇಲೆ ಬಿದ್ದ ಪರಿಣಾಮ ಎರಡೂ ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಮೂಳೆಗಳು ಮುರಿದಿವೆ. ಗಾಯದ ತೀವ್ರತೆಯಿಂದಾಗಿ ಪುಷ್ಪೇಂದ್ರಗೆ ನೀರಿನಿಂದ ಹೊರಬರಲು ಸಾಧ್ಯವಾಗಲಿಲ್ಲ. ಎರಡೂ ಕಾಲುಗಳು ಗಾಯಗೊಂಡಿದ್ದರಿಂದ ನೀರಿನಲ್ಲಿ ಮುಳುಗುವ ಅಪಾಯಕ್ಕೆ ಸಿಲುಕಿದ್ದ. ಕೈಗಳ ಸಹಾಯದಿಂದ ಹೇಗೋ ನೀರಿನಲ್ಲಿ ತೇಲುತ್ತಾ ಸುರಕ್ಷಿತ ಸ್ಥಳ ತಲುಪಲು ಪ್ರಯತ್ನಿಸಿದ್ದಾನೆ. ಇದನ್ನೂ ಓದಿ: ಖರ್ಗೆ ಭಾಷಣ ಸ್ಥಳ ಶುದ್ಧೀಕರಣ ವಿವಾದ; SC-ST ಸಂಸದರಿಂದ ದೂರು ದಾಖಲು
ಈ ವೇಳೆ ಸ್ಥಳದಲ್ಲಿದ್ದ ಕೆಲವರು ಆತನ ಪರಿಸ್ಥಿತಿಯನ್ನು ಗಮನಿಸಿ ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ಪುಷ್ಪೇಂದ್ರನನ್ನು ನೀರಿನಿಂದ ಹೊರಗೆಳೆದು ರಕ್ಷಿಸಿದ್ದಾರೆ. ಮಾಹಿತಿ ತಿಳಿದ ಬಳಿಕ ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ನಂತರ ಗಾಯಾಳುವನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಎರಡೂ ಕಾಲುಗಳ ಮೂಳೆ ಮುರಿದಿರುವುದು ದೃಢಪಟ್ಟಿದೆ. ಇದನ್ನೂ ಓದಿ: ಇಸ್ರೋ ಸಾಧನೆ ದೇಶದ ಹೆಮ್ಮೆ, ರಾಜ್ಯದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಅಭಿವೃದ್ಧಿಗೆ ಕರ್ನಾಟಕದಿಂದ ಸಂಪೂರ್ಣ ಸಹಕಾರ: ಡಾ. ಅಜಯ್ ಸಿಂಗ್
ಒಂದು ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಿ ಮೆಟಲ್ ರಾಡ್ ಅಳವಡಿಸಲಾಗಿದೆ. ಮತ್ತೊಂದು ಕಾಲಿನ ಶಸ್ತ್ರಚಿಕಿತ್ಸೆ ಇನ್ನಷ್ಟೇ ನಡೆಯಬೇಕಿದೆ ಎಂದು ತಿಳಿದುಬಂದಿದೆ. ಪುಷ್ಪೇಂದ್ರ ಡ್ಯಾಂಗೆ ಜಿಗಿಯುವ ಅಪಾಯಕಾರಿ ಸಾಹಸವನ್ನು ಸ್ನೇಹಿತರು ಕ್ಯಾಮೆರಾದಲ್ಲಿ ಚಿತ್ರೀಕರಿಸುತ್ತಿದ್ದರು. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ವಿಜಯಪುರದಲ್ಲಿ ಹಾಡಹಗಲೇ ರೌಡಿಶೀಟರ್ ಬರ್ಬರ ಹತ್ಯೆ
ವೀಡಿಯೋದಲ್ಲಿ ಪುಷ್ಪೇಂದ್ರ ಜಿಗಿಯುವ ಕೆಲವೇ ಕ್ಷಣಗಳ ಮೊದಲು ಸ್ನೇಹಿತರೊಬ್ಬರು ತಮಾಷೆಯಾಗಿ `ದೇವರು ನಿಮ್ಮ ಆತ್ಮಕ್ಕೆ ಶಾಂತಿ ನೀಡಲಿ’ ಎಂದು ಹೇಳುವುದು ಕೂಡ ಕೇಳಿಬರುತ್ತದೆ. ಬಳಿಕ ಪುಷ್ಪೇಂದ್ರ ಡ್ಯಾಂಗೆ ಜಿಗಿದಿದ್ದಾನೆ. ಇದನ್ನೂ ಓದಿ: ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆ ಪ್ರಶ್ನಿಸಿ ದರ್ಶನ್ ಸಲ್ಲಿಸಿದ್ದ ಅರ್ಜಿ ಭಾಗಶಃ ಅಂಗೀಕಾರ
