CrimeLatestMain PostNational

ಪತ್ನಿಯನ್ನ ಸರ್ಜಿಕಲ್ ಬ್ಲೇಡ್‍ನಿಂದ ಕೊಯ್ದು ಪತಿ ಆತ್ಮಹತ್ಯೆಗೆ ಶರಣು!

ನವದೆಹಲಿ: ಕುಡಿದ ಮತ್ತಿನಲ್ಲಿ ಪತ್ನಿಯನ್ನು ಸರ್ಜಿಕಲ್ ಬ್ಲೇಡ್‍ನಿಂದ ಕೊಯ್ದ ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಖ್ಯಾಲಾದ ನಿವಾಸಿ 32 ವರ್ಷದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ಸರ್ಜಿಕಲ್ ಬ್ಲೇಡ್‍ನಿಂದ ಹಲ್ಲೆ ಮಾಡಿದ್ದು, ಕುತ್ತಿಗೆ ಮತ್ತು ಮುಖಕ್ಕೆ ತೀವ್ರವಾಗಿ ಗಾಯ ಮಾಡಿದ್ದಾನೆ. ನಂತರ ಭಯಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಸ್ತುತ ಗಾಯಾಳು ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಇನ್ನೂ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದನ್ನೂ ಓದಿ: ನೇತಾಜಿ ಕಾರ್ಯಕ್ರಮದಲ್ಲಿ TMC, BJP ಬೆಂಬಲಿಗರ ನಡುವೆ ಘರ್ಷಣೆ – ಕಲ್ಲು ತೂರಾಟ, 2 ಕಾರು ಧ್ವಂಸ

ಏನಿದು ಘಟನೆ?
ದಂಪತಿ ಇತ್ತೀಚೆಗೆ ಮದುವೆಯಾಗಿದ್ದು, ಮಹಿಳೆಯು ಪತಿ ರಾಮ್‍ಕುಮಾರ್ ಕಿರುಕುಳ ತಡೆಯಲಾಗದೆ ರಘುಬೀರ್ ನಗರ ಪ್ರದೇಶದಲ್ಲಿದ್ದ ತನ್ನ ತಾಯಿಯ ಮನೆಗೆ ತೆರಳಿದ್ದಾಳೆ. ಮಾದಕ ವ್ಯಸನಿಯಾಗಿದ್ದ ರಾಮ್‍ಕುಮಾರ್ ಅಲ್ಲಿಗೂ ಹೋಗಿ ಪತ್ನಿಗೆ ತನ್ನೊಂದಿಗೆ ಮನೆಗೆ ಬರುವಂತೆ ವಿನಂತಿಸಿಕೊಂಡಿದ್ದಾನೆ. ಆದರೆ ಅವಳು ನಿರಾಕರಿಸಿದ್ದು, ಈ ವೇಳೆ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.

ಹಲ್ಲೆಯ ನಂತರ ರಾಮ್‍ಕುಮಾರ್, ತನ್ನ ಹೆಂಡತಿ ಸತ್ತಿದ್ದಾಳೆ ಎಂದು ಭಾವಿಸಿ ಆಕೆಯ ಮೇಲೆ ಹಲ್ಲೆ ನಡೆಸಿ ಮನೆಯಿಂದ ಓಡಿಹೋಗಿದ್ದಾನೆ. ಆದರೆ ನಂತರ ಉತ್ತರ ಪ್ರದೇಶದ ಗಾಜಿಯಾಬಾದ್‍ನ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಇದನ್ನೂ ಓದಿ: ಅವಧಿ ಮೀರಿ ವಾಸಗೃಹದಿಂದ ಕುಟುಂಬ ಹೊರಹಾಕಿದ್ದ ಪ್ರಕರಣ ಸುಖಾಂತ್ಯ – ಮೃತ ನೌಕರನ ಪುತ್ರನಿಗೆ ಗುತ್ತಿಗೆ ನೌಕರಿ

ಗುರುವಾರ ಪಶ್ಚಿಮ ವಿಹಾರ್‌ನ ಆಸ್ಪತ್ರೆಯಿಂದ ಖ್ಯಾಲಾ ಪೊಲೀಸ್ ಠಾಣೆಗೆ ಕರೆ ಬಂದಿದ್ದು, ಮಹಿಳೆಯೊಬ್ಬರು ಪತಿಯಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿರುವುದನ್ನು ತಿಳಿಸಲಾಗಿದೆ. ಪೊಲೀಸರು ತನಿಖೆ ಮಾಡಿದ ಮಾಡಿದ ಬಳಿಕ ಪತಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡುಬಂದಿದೆ.

Leave a Reply

Your email address will not be published.

Back to top button