LatestLeading NewsMain PostNational

ನೇತಾಜಿ ಕಾರ್ಯಕ್ರಮದಲ್ಲಿ TMC, BJP ಬೆಂಬಲಿಗರ ನಡುವೆ ಘರ್ಷಣೆ – ಕಲ್ಲು ತೂರಾಟ, 2 ಕಾರು ಧ್ವಂಸ

ಕೋಲ್ಕತ್ತಾ: ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನವಾದ ಕಾರಣ ಎಲ್ಲೆಡೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಕೋಲ್ಕತ್ತಾ ಬಳಿಯ ಪಶ್ಚಿಮ ಬಂಗಾಳದ ಭಟ್ಪರಾ ಪಟ್ಟಣದಲ್ಲಿ ನೇತಾಜಿ ಕಾರ್ಯಕ್ರಮದಲ್ಲಿ ನಡೆಯುತ್ತಿ ವೇಳೆ ಟಿಎಂಸಿ (ತೃಣಮೂಲ ಕಾಂಗ್ರೆಸ್) ಮತ್ತು ಬಿಜೆಪಿ ಬೆಂಬಲಿಗರ ನಡುವೆ ಘರ್ಷಣೆ ಸಂಭವಿಸಿದೆ.

ಭಾಟ್ಪಾರಾದಲ್ಲಿ ನೇತಾಜಿಗೆ ಪುಷ್ಪ ನಮನ ಸಲ್ಲಿಸುತ್ತಿದ್ದಾಗ ಟಿಎಂಸಿ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಮೇಲೆ ಕಲ್ಲು ತೂರಿದರು. ಪರಿಣಾಮ ಈ ಘರ್ಷಣೆಯನ್ನು ತಡೆಯಲು ಅರ್ಜುನ್ ಸಿಂಗ್ ಅವರ ಭದ್ರತಾ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಎಂದು ಬ್ಯಾರಕ್‍ಪುರ ಸಂಸದ ಅರ್ಜುನ್ ಸಿಂಗ್ ಆರೋಪಿಸಿದ್ದಾರೆ. ಇದನ್ನೂ ಓದಿ: ಸಲ್ಮಾನ್ ಫಾರ್ಮ್‍ಹೌಸ್‍ನಲ್ಲಿ ಸೆಲೆಬ್ರಿಟಿಗಳ ಶವ, ಮಕ್ಕಳ ಕಳ್ಳ ಸಾಗಾಣಿಕೆ ನಡೆಯುತ್ತೆ ಎಂದ ನೆರೆಮನೆಯವ!

ಈ ಗಲಾಟೆಯ ವೇಳೆ ಪೊಲೀಸ್ ವಾಹನ ಸೇರಿದಂತೆ ಎರಡು ಕಾರುಗಳನ್ನು ಧ್ವಂಸಗೊಳಿಸಲಾಗಿದೆ. ಬಿಜೆಪಿ ಸಂಸದರನ್ನು ರಕ್ಷಿಸಿ ಸುರಕ್ಷಿತವಾಗಿ ಅವರ ನಿವಾಸಕ್ಕೆ ಕಳುಹಿಸಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಧ್ರುಬಾ ಜ್ಯೋತಿ ಡೇ ತಿಳಿಸಿದ್ದಾರೆ. ಘಟನಾ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಜೊತೆಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದರು.

ಏನಿದು ಘಟನೆ?
ಈ ಕುರಿತು ಅರ್ಜುನ್ ಸಿಂಗ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇಂದು ಬೆಳಗ್ಗೆ 10:30ಕ್ಕೆ, ನಮ್ಮ ಶಾಸಕ ಪವನ್ ಸಿಂಗ್ ನೇತಾಜಿಗೆ ಶ್ರದ್ಧಾಂಜಲಿ ಸಲ್ಲಿಸಲು ಹೋಗಿದ್ದರು. ಟಿಎಂಸಿಯ ಕಾರ್ಯಕರ್ತರು ಅವರ ಮೇಲೆ ದಾಳಿ ಮಾಡಿದ್ದು, ಅವರ ಮೇಲೆ ಗುಂಡು ಹಾರಿಸಿದರು. ಇಟ್ಟಿಗೆಗಳನ್ನು ಎಸೆದು ದಾಳಿ ಮಾಡಲು ಪ್ರಯತ್ನಿಸಿದ್ದಾರೆ. ನಾನು ಅಲ್ಲಿಗೆ ಹೋದಾಗ ನನ್ನ ಮೇಲೂ ದಾಳಿ ಮಾಡಿದರು. ನನ್ನ ಕಾರಿನ ಮೇಲೆಯೂ ದಾಳಿ ಮಾಡಿದ್ದಾರೆ ಎಂದು ವಿವರಿಸಿದರು. ಇದನ್ನೂ ಓದಿ: ಜಿಲ್ಲೆಗೊಂದು ಮಠ ಮಾಡಲಿ ಮೂರನೇ ಪಂಚಮಸಾಲಿ ಪೀಠಕ್ಕೆ ನಮ್ಮ ಬೆಂಬಲ: ವಚನಾನಂದ ಸ್ವಾಮೀಜಿ

ಶನಿವಾರ ರಾತ್ರಿ, ಪಾನಿಹಟಿ ಪ್ರದೇಶದ ಬಿಟಿ ರಸ್ತೆಯಲ್ಲಿರುವ ಟಿಎಂಸಿ ಪಕ್ಷದ ಕಚೇರಿಯ ಮೇಲೆ ಬಿಜೆಪಿ ಕಾರ್ಯಕರ್ತರು ಬಾಂಬ್‍ಗಳನ್ನು ಎಸೆದು ದಾಳಿ ಮಾಡಿದ್ದಾರೆ. ಈ ಹಿನ್ನೆಲೆ ಅವರು ಬಿಜೆಪಿ ಮೇಲೆ ದಾಳಿ ಮಾಡಿಸಿದ್ದಾರೆ. ಎರಡೂ ಘಟನೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಇನ್ನೂ ಯಾರನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದರು.

Leave a Reply

Your email address will not be published.

Back to top button