ಇಡ್ಲಿ, ದೋಸೆಯೊಂದಿಗೆ ಬೇಕೇ ಬೇಕು ಚಟ್ನಿ. ದಕ್ಷಿಣ ಭಾರತದಲ್ಲಿ ಊಟದಲ್ಲೂ ಸೈಡ್ ಡಿಶ್ ಆಗಿ ತಯಾರಿಸಲಾಗುವ ಚಟ್ನಿಯನ್ನು ರುಚಿರುಚಿಯಾಗಿ ವಿವಿಧ ಪದಾರ್ಥಗಳಿಂದ ಮಾಡಲಾಗುತ್ತದೆ. ಇಂದು ನಾವು ಊಟದೊಂದಿಗೆ ನಾಲಿಗೆ ಚಪ್ಪರಿಸಲು ರುಚಿಕರವಾದ ಬೆಳ್ಳುಳ್ಳಿ ಚಟ್ನಿ (Garlic Chutney) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ನೀವೂ ಒಮ್ಮೆ ಮನೆಯಲ್ಲಿ ಇದನ್ನು ಟ್ರೈ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಒಗ್ಗರಣೆಗೆ:
ತುಪ್ಪ – ಕಾಲು ಕಪ್
ಸಾಸಿವೆ – 1 ಟೀಸ್ಪೂನ್
ಉದ್ದಿನ ಬೇಳೆ – 1 ಟೀಸ್ಪೂನ್
ಹಿಂಗ್ – ಚಿಟಿಕೆ
ಹೆಚ್ಚಿದ ಬೆಳ್ಳುಳ್ಳಿ – ಮುಕ್ಕಾಲು ಕಪ್
ಪೇಸ್ಟ್ ತಯಾರಿಸಲು:
Advertisement
Advertisement
ತುರಿದ ತೆಂಗಿನಕಾಯಿ – ಕಾಲು ಕಪ್
ಸಾಸಿವೆ – ಒಂದೂವರೆ ಟೀಸ್ಪೂನ್
ಹೆಚ್ಚಿದ ಟೊಮೆಟೊ – 1
ಒಣ ಕೆಂಪು ಮೆಣಸಿನಕಾಯಿ – 4
ಇತರ ಪದಾರ್ಥಗಳು:
ಹುಣಸೆಹಣ್ಣಿನ ಸಾರ – 1 ಕಪ್
ಅರಿಶಿನ – ಕಾಲು ಟೀಸ್ಪೂನ್
ಉಪ್ಪು – ಮುಕ್ಕಾಲು ಟೀಸ್ಪೂನ್
ಬೆಲ್ಲ – ಅರ್ಧ ಟೀಸ್ಪೂನ್ ಇದನ್ನೂ ಓದಿ: ಆರೋಗ್ಯಕರ ಮೊಳಕೆ ಬರಿಸಿದ ಹೆಸರುಕಾಳಿನ ಪಲ್ಯ
Advertisement
ಮಾಡುವ ವಿಧಾನ:
* ಮೊದಲಿಗೆ, ಪ್ಯಾನ್‌ನಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಸಾಸಿವೆ, ಉದ್ದಿನ ಬೇಳೆ ಮತ್ತು ಹಿಂಗ್ ಹಾಕಿ.
* ಮುಕ್ಕಾಲು ಕಪ್ ಬೆಳ್ಳುಳ್ಳಿ ಸೇರಿಸಿ ಕಡಿಮೆ ಉರಿಯಲ್ಲಿ ಹುರಿಯಿರಿ.
* ಬೆಳ್ಳುಳ್ಳಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಪಕ್ಕಕ್ಕೆ ಇರಿಸಿ.
* ಈಗ ಮಿಕ್ಸರ್ ಜಾರ್‌ಗೆ ತೆಂಗಿನ ತುರಿ, ಸಾಸಿವೆ, ಟೊಮೆಟೊ ಮತ್ತು ಒಣ ಕೆಂಪು ಮೆಣಸಿನಕಾಯಿ ಹಾಕಿ, ಅಗತ್ಯವಿದ್ದರೆ ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಪಕ್ಕಕ್ಕೆ ಇರಿಸಿ.
* ಈಗ ಒಂದು ದೊಡ್ಡ ಕಡಾಯಿಯಲ್ಲಿ ಹುಣಸೆಹಣ್ಣಿನ ಸಾರ, ಅರಿಶಿನ, ಉಪ್ಪು ಮತ್ತು ಬೆಲ್ಲ ಹಾಕಿ, 5 ನಿಮಿಷ ಕುದಿಸಿ.
* ತಯಾರಿಸಿಟ್ಟ ಪೇಸ್ಟ್ ಅನ್ನು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.
* ಇದೀಗ ಹುರಿದ ಬೆಳ್ಳುಳ್ಳಿ ಸೇರಿಸಿ, ಮಿಕ್ಸ್ ಮಾಡಿ.
* 7 ನಿಮಿಷಗಳ ಕಾಲ ಅಥವಾ ಎಣ್ಣೆ ಬೇರ್ಪಡುವವರೆಗೆ ಕಡಿಮೆ ಉರಿಯಲ್ಲಿ ಫ್ರೈ ಮಾಡಿ.
* ಇದೀಗ ರುಚಿಕರವಾದ ಬೆಳ್ಳುಳ್ಳಿ ಚಟ್ನಿ ತಯಾರಾಗಿದ್ದು, ಅನ್ನದೊಂದಿಗೆ ಬಡಿಸಿ. ಇದನ್ನೂ ಓದಿ: ಹೀಗೆ ಮಾಡಿ ಆರೋಗ್ಯಕರ ಹೆಸರು ಬೇಳೆ ದೋಸೆ