ಬೆಂಗಳೂರು: ನಕಲಿ ಔಷಧಿ ಜಾಲದಲ್ಲಿ (Fake Medicine) ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ಸಿಲುಕಿವೆ. ಸ್ವತಃ ಆರೋಗ್ಯ ಸಚಿವರೇ ಆತಂಕಕಾರಿ ವಿಚಾರವನ್ನ ಬಿಚ್ಚಿಟ್ಟಿದ್ದಾರೆ. ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು, ಮೆಡಿಕಲ್ ಸ್ಟೋರ್‌ಗಳಿಗೆ ಔಷಧಿ ಸಪ್ಲೈ ಆಗಿವೆ ಎಂದು ಸಚಿವ ಯು.ಟಿ.ಖಾದರ್ (U.T.Khader) ತಿಳಿಸಿದ್ದಾರೆ. ಶೀಘ್ರದಲ್ಲೇ ಅವುಗಳ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಜೊತೆಗೆ ಫೈಜರ್ ಕಂಪನಿ ವಿರುದ್ಧ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ನಕಲಿ ಔಷಧಿ ಜಾಲ ಬಗೆದಷ್ಟು ಬಯಲಾಗುತ್ತಿದೆ. ನಕಲಿ ಔಷಧಿ ಜಾಲದಲ್ಲಿ ತೊಡಗಿದ್ದ 24 ಔಷಧ ಸಂಸ್ಥೆಗಳ ವಿರುದ್ಧ ಕ್ರಮ ಆಗಿದೆ. ಈಗ ಇದು ಸ್ಯಾಂಪಲ್ ಅಷ್ಟೇ. ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ತೊಡಗಿವೆ ಎನ್ನುವುದು ಬಯಲಾಗಿದೆ. ಎಸ್‌ಐಟಿ ತನಿಖೆ ಆಗುತ್ತಿದ್ದು, ಶೀಘ್ರದಲ್ಲೇ ಲಿಸ್ಟ್ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ ಸಚಿವರು. ಇದನ್ನೂ ಓದಿ: ನಕಲಿ ಔಷಧಿಗಳ ಜಾಲ ನಿಯಂತ್ರಣಕ್ಕೆ ಮಾರ್ಗಸೂಚಿ ಪ್ರಕಟ
ಫೈಜರ್ ಕಂಪನಿ ವಿರುದ್ಧ ಕ್ರಮ ವಹಿಸುವುದಕ್ಕೆ ಸರ್ಕಾರ ಮುಂದಾಗಿದೆ. ಈಗಾಗಲೇ ಫೈಜರ್ ಕಂಪನಿಯ ಲೆಸನ್ಸ್ ಅಮಾನತು ಮಾಡಲಾಗಿದೆ. ಫೈಜರ್ ಕಂಪನಿಯ ಔಷಧಿಯೇ ನಕಲಿ ಅಂತಾ ಸಚಿವರು ತಿಳಿಸಿದ್ದರು. ಆದರೆ ವಿಚಾರಣೆಗೆ ಫೈಜರ್ ಕಂಪನಿ ಅವರು ಸಹಕಾರ ನೀಡಿರಲಿಲ್ಲ. ಈಗ ಮತ್ತೆ ಖಡಕ್ ನಿರ್ಧಾರಕ್ಕೆ ಮುಂದಾಗಿದೆ. ಯಾವೆಲ್ಲ ಆಸ್ಪಗಳಿಗೆ ಔಷಧಿ ಸಪ್ಲೈ ಆಗಿದೆಯೋ ಅಲ್ಲಿಂದ ಔಷಧಿಗಳ ವಿತ್ ಡ್ರಾ ಮಾಡಿಕೊಳ್ಳಲು ಮುಂದಾಗಿದೆ. ಜೊತೆಗೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಇರುವ ಖಾಸಗಿ ಮೆಡಿಕಲ್ ಸ್ಟೋರ್‌ಗಳನ್ನು ಕೂಡ ಚೆಕ್ ಮಾಡಲು ಮುಂದಾಗಿದ್ದಾರೆ.

