ಬೆಂಗಳೂರು: ತಂದೆಯೊಂದಿಗೆ ಸೇರಿ ಒಂದೇ ಕುಟುಂಬದ 7 ಮಂದಿಯನ್ನು ಕ್ರೂರವಾಗಿ ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಬಂಧಿತಳಾಗಿದ್ದ ಮಗಳು ಇದೀಗ 18ನೇ ವಯಸ್ಸಿಗೆ ಕಾಲಿಟ್ಟಿದ್ದಾಳೆ. ಎಫ್ಐಆರ್ (Bengaluru 7 Murder) ದಾಖಲಾದಾಗ ಅಪ್ರಾಪ್ತೆಯಾಗಿದ್ದ ಈಕೆಯನ್ನು ಪೊಲೀಸರು ಬಾಲಮಂದಿರದಲ್ಲಿ ಇರಿಸಿ ವಿಚಾರಣೆ ನಡೆಸುತ್ತಿದ್ದರು.
ಹೀನಸ್ ಕ್ರೈಮ್ ಪ್ರಕರಣಗಳಲ್ಲಿ 16 ವರ್ಷ ತುಂಬಿದವರನ್ನು ಅಪ್ರಾಪ್ತರೆಂದೇ ಪರಿಗಣಿಸಬಹುದೆಂಬ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಆದರೆ, ಯುವತಿಯನ್ನು ಅಪ್ರಾಪ್ತೆ ಎಂದು ಪರಿಗಣಿಸದಂತೆ ಪೊಲೀಸರು ಈಗ ಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದ್ದಾರೆ. ಈ ಕುರಿತು ಫಾಸ್ಟ್ ಟ್ರಾಕ್ ಕೋರ್ಟ್ ಹಾಗೂ ಗೃಹ ಇಲಾಖೆಗೆ ಮನವಿ ಸಲ್ಲಿಸಲು ಪ್ಲ್ಯಾನ್ ಮಾಡಲಾಗಿದೆ.ಇದನ್ನೂ ಓದಿ: RSS ನಲ್ಲಿ ತಮ್ಮದೇ ಪ್ರಯತ್ನದಿಂದ ಅಧಿಕಾರಕ್ಕೇರಿದ್ರು – ಪ್ರಧಾನಿ ಮೋದಿ ರಾಜಕೀಯ ಬೆಳವಣಿಗೆ ಮೆಚ್ಚಿಕೊಂಡ ಸೋನಿಯಾ ಗಾಂಧಿ
ತಾಯಿ, ಮಾವಂದಿರು ಸೇರಿದಂತೆ ಏಳು ಜನರ ಬರ್ಬರ ಹತ್ಯೆಯಲ್ಲಿ ತಂದೆಗೆ ಸಾಥ್ ನೀಡಿದ್ದ ಈ ಯುವತಿಯ ವಿರುದ್ಧ ಕಾನೂನು ಕ್ರಮ ತೀವ್ರಗೊಳ್ಳುವ ಸಾಧ್ಯತೆಯಿದ್ದು, ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.ಇದನ್ನೂ ಓದಿ: ಬಳ್ಳಾರಿ | ಕುರಿ ಹಿಂಡಿನ ಮೇಲೆ ಲಾರಿ ಹರಿದು 80ಕ್ಕೂ ಹೆಚ್ಚು ಕುರಿಗಳು ಸಾವು
