ಬಳ್ಳಾರಿ: ರಸ್ತೆಬದಿಯಲ್ಲಿ ಸಾಗುತ್ತಿದ್ದ ಕುರಿ ಹಿಂಡಿನ ಮೇಲೆ ಸಿಮೆಂಟ್ ತುಂಬಿದ್ದ ಲಾರಿ ಹರಿದ ಪರಿಣಾಮ 80ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಬಳ್ಳಾರಿ(Ballari) ತಾಲೂಕಿನ ಕಾರೆಕಲ್ ಗ್ರಾಮದ ಬಳಿ ನಡೆದಿದೆ.
ಕುರಿಗಾಯಿ ಸಿಂದವಾಳ ವೀರಭದ್ರಪ್ಪ ಅವರಿಗೆ ಸೇರಿದ ಕುರಿಗಳು ಮೃತಪಟ್ಟಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಸಿಂದವಾಳ ವೀರಭದ್ರಪ್ಪ ಅವರು ಎಂದಿನಂತೆ ಕುರಿಗಳನ್ನು ಮೇಯಿಸಲು ರಸ್ತೆಬದಿಯಲ್ಲಿ ಹಿಂಡಿನೊಂದಿಗೆ ತೆರಳುತ್ತಿದ್ದರು. ಈ ವೇಳೆ ತೆಲಂಗಾಣದಿಂದ ಬಳ್ಳಾರಿ ಕಡೆಗೆ ಬರುತ್ತಿದ್ದ ಸಿಮೆಂಟ್ ಲಾರಿ ಏಕಾಏಕಿ ಕುರಿಗಳ ಮೇಲೆ ಹರಿದಿದೆ. ಪರಿಣಾಮ ಕುರಿಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದು ಸಾವನ್ನಪ್ಪಿವೆ.ಇದನ್ನೂ ಓದಿ: ಗಾಜನೂರಿನಲ್ಲಿ ಡಾ. ರಾಜ್ ಸಂಬಂಧಿ ಮನೆ ಮೇಲೆ ಸ್ಫೋಟ ಕೇಸ್ – ಐವರು ಯುವಕರು ವಶಕ್ಕೆ
ಕುರಿ ಸಾಕಾಣಿಕೆಯನ್ನೇ ಜೀವನಾಧಾರವಾಗಿಸಿಕೊಂಡಿದ್ದ ವೀರಭದ್ರಪ್ಪ ಅವರು ಒಂದೇ ಅಪಘಾತದಲ್ಲಿ 80ಕ್ಕೂ ಹೆಚ್ಚು ಕುರಿಗಳನ್ನು ಕಳೆದುಕೊಂಡಿದ್ದಾರೆ. ಜೀವನಕ್ಕೆ ಆಸರೆಯಾಗಿದ್ದ ಕುರಿಗಳ ಸಾವಿನಿಂದ ಕುರಿಗಾಯಿ ಕಂಗಾಲಾಗಿದ್ದು, ಕಣ್ಣೀರು ಹಾಕುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಪ್ರೀತಿಸಿ ಮದುವೆಯಾದ ನವವಿವಾಹಿತೆ ಆತ್ಮಹತ್ಯೆ – ವರದಕ್ಷಿಣೆ ಕಿರುಕುಳ ಆರೋಪ
