ನವದೆಹಲಿ: ರಾಷ್ಟ್ರೀಯ ಕಾಂಗ್ರೆಸ್ನ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ (Sonia Gandhi) ಅವರು ತಮ್ಮ ಹೊಸ ಆತ್ಮಕಥ ‘Belonging: A Journey of Love’ ಕೃತಿಯಲ್ಲಿ ತಮ್ಮ ವೈಯಕ್ತಿಕ ಹಾಗೂ ರಾಜಕೀಯ ಜೀವನದ ಹಲವು ಅನುಭವಗಳನ್ನ ಹಂಚಿಕೊಂಡಿದ್ದಾರೆ. ಈ ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ತಮ್ಮ ಸಂಬಂಧ ಹಾಗೂ ವರ್ಷಗಳಲ್ಲಿ ನಡೆದ ಸೀಮಿತ ಮಾತುಕತೆಗಳ ಬಗ್ಗೆಯೂ ಉಲ್ಲೇಖಿಸಿದ್ದಾರೆ.
A long time ago Rajiv and I realised that there was no point in trying to keep up with all that had been written about us. But, as I say in the book, there came a time when I felt that I should tell my own story.
Read my interview: https://t.co/0tcL1k61D9
— Sonia Gandhi (@SoniaGandhi) November 7, 2026
ಹಾರ್ಪರ್ಕಾಲಿನ್ಸ್ ಇಂಡಿಯಾ ಪ್ರಕಟಿಸಿರುವ ಈ ಆತ್ಮಕಥನ ಮಂಗಳವಾರ (ಇಂದು) ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಪುಸ್ತಕದಲ್ಲಿ ನನಗೆ ಪ್ರಧಾನಿ ಮೋದಿ (Narendra Modi) ಅವರೊಂದಿಗೆ ಯಾವುದೇ ವೈಯಕ್ತಿಕ ಸಂಪರ್ಕ ಇಲ್ಲ. ಏನೇ ಇದ್ದರೂ ಅಧಿಕೃತ ಅಥವಾ ಅರೆ ಅಧಿಕೃತ ಕಾರ್ಯಕ್ರಮಗಳಲ್ಲಿ ಭೇಟಿಯಾದಾಗ ಔಪಚಾರಿಕ ನಮಸ್ಕಾರಕ್ಕೆ ಮಾತ್ರ ಸೀಮಿತ. ಇಬ್ಬರೂ ವಿಭಿನ್ನ ಸೈದ್ಧಾಂತಿಕ ಹಿನ್ನೆಲೆಯಿಂದ ಬಂದವರು, ಭಾರತದ ಕುರಿತು ತಮ್ಮದೇ ಆದ ಭಿನ್ನ ದೃಷ್ಟಿಕೋನಗಳನ್ನ ಹೊಂದಿದ್ದೇವೆ ಎಂದು ಪುಸ್ತಕದಲ್ಲಿ ಉಲ್ಲೇಖಿಸಿರುವಾಗಿ ತಿಳಿದುಬಂದಿದೆ.
ಆಸ್ಪತ್ರೆಯಿಂದ ಮನೆಗೆ ಮರಳಿದ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ತಮ್ಮ ಆರೋಗ್ಯ ವಿಚಾರಿಸಿದ ಕೆಲವು ಸಣ್ಣಪುಟ್ಟ ಮಾತುಕತೆಗಳನ್ನೂ ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.
ಮೋದಿ ರಾಜಕೀಯ ಬೆಳವಣಿಗೆ ಮೆಚ್ಚಿಕೊಂಡ ಸೋನಿಯಾ
ಇನ್ನೂ ಪ್ರಧಾನಿ ನರೇಂದ್ರ ಮೋದಿ ಅವರ ರಾಜಕೀಯ ಪಯಣದ ಬಗ್ಗೆಯೂ ಸೋನಿಯಾ ಗಾಂಧಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಸಾಮಾನ್ಯ ಹಾಗೂ ಹಿಂದುಳಿದ ಹಿನ್ನೆಲೆಯಿಂದ ಬಂದಿದ್ದರೂ, ಆರ್ಎಸ್ಎಸ್ನಲ್ಲಿ ತಮ್ಮದೇ ಪ್ರಯತ್ನದಿಂದ ಅಧಿಕಾರದ ಹಂತಕ್ಕೇರಿದವರು ಮೋದಿ ಎಂದು ಅವರು ಬರೆದಿದ್ದಾರೆ.
ಮೋದಿಯವರ ರಾಜಕೀಯ ಜೀವನದ ಹಾದಿ ತಮ್ಮ ರಾಜಕೀಯ ಪಯಣಕ್ಕಿಂತ ಸಂಪೂರ್ಣ ಭಿನ್ನವಾಗಿತ್ತು. ಇಬ್ಬರ ವೈಯಕ್ತಿಕ ಅನುಭವಗಳು ಹಾಗೂ ರಾಜಕೀಯ ಹಿನ್ನೆಲೆಗಳು ವಿಭಿನ್ನ. ನರೇಂದ್ರ ಮೋದಿ ಅವರು ಹಿಂದುಳಿದ ಹಿನ್ನೆಲೆಯಿಂದ ಬಂದಿದ್ದರೂ, ಆರ್ಎಸ್ಎಸ್ನಲ್ಲಿ ತಮ್ಮದೇ ಪ್ರಯತ್ನದಿಂದ ಅಧಿಕಾರದ ಹಂತಕ್ಕೇರಿದರು ಎಂದು ಸೋನಿಯಾ ಗಾಂಧಿ ತಮ್ಮ ಆತ್ಮಕಥನದಲ್ಲಿ ಉಲ್ಲೇಖಿಸಿದ್ದಾರೆ.
ಸೀಮಿತ ಮಾತುಕತೆಗಳ ಮೆಲುಕು
ನರೇಂದ್ರ ಮೋದಿ ಅವರು 12 ವರ್ಷಗಳಿಗೂ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರೂ, ಅವರೊಂದಿಗಿನ ತಮ್ಮ ಮಾತುಕತೆಗಳು ಬಹುತೇಕ ಔಪಚಾರಿಕವಾಗಿಯೇ ಉಳಿದಿವೆ. ಸಂಸತ್ ಅಧಿವೇಶನ ಮುಗಿದ ಬಳಿಕ ಲೋಕಸಭಾಧ್ಯಕ್ಷರ ಕೊಠಡಿಯಲ್ಲಿ ನಡೆಯುವ ಸಭೆ ಸೇರಿದಂತೆ ಕೆಲವು ಅರೆ-ಅಧಿಕೃತ ಕಾರ್ಯಕ್ರಮಗಳಲ್ಲಿ ಇಬ್ಬರೂ ಭೇಟಿಯಾಗುತ್ತಿದ್ದರು. ಇಂತಹ ಸಂದರ್ಭಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಒಟ್ಟಿಗೆ ಸೇರುವುದು ಸಂಪ್ರದಾಯವಾಗಿದೆ. ಜೊತೆಗೆ ಆಸ್ಪತ್ರೆಯಿಂದ ಮರಳಿದ ಬಳಿಕ ಪ್ರಧಾನಿ ಮೋದಿ ಅವರು ತಮ್ಮ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದ ಸಂದರ್ಭವನ್ನೂ ಸೋನಿಯಾ ಗಾಂಧಿ ನೆನಪಿಸಿಕೊಂಡಿದ್ದಾರೆ.
ಆಗ ಮೋದಿ ಅವರು, ʻಟೀಕ್ ಹೈ ಆಪ್?ʼ (ನೀವು ಆರೋಗ್ಯವಾಗಿದ್ದೀರಾ?) ಎಂದು ಕೇಳುತ್ತಿದ್ದರು. ಅದಕ್ಕೆ ತಾವು, ʻಜೀ, ಅಬ್ ಮೈಂ ಟೀಕ್ ಹೂಂ, ಶುಕ್ರಿಯಾʼ (ಹೌದು, ಈಗ ಆರೋಗ್ಯವಾಗಿದ್ದೇನೆ, ಧನ್ಯವಾದಗಳು) ಎಂದು ಉತ್ತರಿಸುತ್ತದೆ. ಇಂತಹ ಕೆಲವೇ ಮಾತುಕತೆಗಳನ್ನು ಹೊರತುಪಡಿಸಿದರೆ, ನಮ್ಮ ನಡುವೆ ಎಂದಿಗೂ ನೈಜ ಸಂಭಾಷಣೆ ನಡೆದಿಲ್ಲ. ಆದರೆ ವರ್ಷಗಳಲ್ಲಿ ಪರಸ್ಪರ ಜನ್ಮದಿನ ಹಾಗೂ ಹೊಸ ವರ್ಷದ ಶುಭಾಶಯಗಳನ್ನ ಔಪಚಾರಿಕವಾಗಿ ವಿನಿಮಯ ಮಾಡಿಕೊಂಡಿದ್ದೇವೆ ಎಂದು ಸೀಮಿತ ಮಾತುಕತೆಗಳ ಬಗ್ಗೆ ಪುಸ್ತಕದಲ್ಲಿ ಮೆಲುಕು ಹಾಕಿದ್ದಾರೆ.


