-ಗೃಹಲಕ್ಷ್ಮಿ ವಿಚಾರದಲ್ಲೂ ಸರ್ಕಾರದಿಂದ ಮಹಿಳೆಯರಿಗೆ ಅಪಮಾನ
ಬೆಂಗಳೂರು: ಸರ್ಕಾರ ರೈತರನ್ನು ಭಿಕ್ಷುಕರು ಅನ್ಕೊಂಡಿದೆಯಾ? ಅವರಿಗೆ ರೈತರಿಗೆ ಸ್ವಾಭಿಮಾನ ಇಲ್ವಾ..? ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ (Chalavadi Narayanaswamy) ಅವರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ
ಮಾಧ್ಯಮದವರೊಂದಿಗೆ ಬರ ಪರಿಹಾರ ವಿಚಾರದಲ್ಲಿ ಸಣ್ಣ ರೈತರಿಗೆ ತಾರತಮ್ಯ ಆರೋಪ ವಿಚಾರವಾಗಿ ಮಾತನಾಡಿ, ಸರ್ಕಾರ ಈ ರೀತಿಯಾಗಿ ಕಳಪೆ ಪರಿಹಾರ ಕೊಡುತ್ತೆ ಅಂತ ನಾವು ನಿರೀಕ್ಷೆ ಮಾಡಿರಲಿಲ್ಲ. 85 ರೂ. ಗುಂಟೆಗೆ ಅಂದ್ರೆ 3400 ರೂ. ಬರುತ್ತೆ. ಎಕರೆಗೆ 2500 ರೂ ನಿಗದಿ ಆಗಿದೆ. ಸಣ್ಣ ಜಮೀನಿರೋ ರೈತರಿಗೆ 400-500 ರೂ. ಬರುತ್ತೆ. ಸರ್ಕಾರ ರೈತರಿಗೆ (Farmers) ಅಪಹಾಸ್ಯ ಮಾಡ್ತಿದೆ. ಸರ್ಕಾರ ರೈತರನ್ನು ಭಿಕ್ಷುಕರು ಅನ್ಕೊಂಡಿದೆಯಾ? ರೈತರಿಗೆ ಸ್ವಾಭಿಮಾನ ಇಲ್ವಾ? ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಪ್ರಧಾನಿ ಆಗೋದು ರಾಹುಲ್, ಪ್ರಿಯಾಂಕಾಗೆ ಇಷ್ಟವಿರಲಿಲ್ಲ – 2004ರಲ್ಲೇ ಹುದ್ದೆ ಬೇಡವೆಂದಿದ್ದೆ: ಸೋನಿಯಾ ಗಾಂಧಿ
ಇದೇ ವೇಳೆ ಗೃಹಲಕ್ಷ್ಮಿ ಬಗ್ಗೆ ಮಾತನಾಡಿ, ಗ್ಯಾರಂಟಿ ವಿಚಾರದಲ್ಲೂ ಸರ್ಕಾರ ಮಹಿಳೆಯರಿಗೆ ಅಪಮಾನ ಮಾಡ್ತಿದೆ. ಗ್ಯಾರಂಟಿಗಳ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಎಲ್ಲರಿಗೂ ಉಚಿತ ಅಂತ ಹೇಳಿ ದೂಂಡಾವರ್ತಿ ಮಾಡ್ತಿದೆ. ಚುನಾವಣೆ ಗೆಲ್ಲಬೇಕಿತ್ತು, ಅಮ್ಮ, ಅಪ್ಪಾ ಅಂತ ಅಧಿಕಾರಕ್ಕೆ ಬಂದ್ರು. ಚುನಾವಣೆ ಮುಗಿದ ಮೇಲೆ ಏನ್ ಮಾಡ್ಕೋತೀರಾ ಮಾಡ್ಕೊಳ್ಳಿ ಅನ್ನೋ ಧೋರಣೆ. ಇದು ದಗಾಕೋರ ಸರ್ಕಾರ. ಇದೇ ರೀತಿ ಈಗ ರೈತರನ್ನೂ ಸರ್ಕಾರ ಅಪಮಾನ ಮಾಡ್ತಿದೆ. ರೈತರ ವಿಚಾರದಲ್ಲಿ ಸರ್ಕಾರದ ನಡೆ ಖಂಡನೀಯ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸ್ಟಿಂಗ್ ಬಗ್ಗೆ ಮಾತಾಡಿದ್ರೆ ಕೇಸ್ ಹಾಕ್ತಾರೆ:
ಕೃಪಾ ಆಳ್ವಾ ವಿಚಾರಣೆ ವಿಚಾರವಾಗಿ, ಯಾರು ಸ್ಟಿಂಗ್ ಮಾಡಿದ್ರು ಅನ್ನೋ ಮೂಲ ಗೊತ್ತಾಗಬೇಕು. ಸಿದ್ದರಾಮಯ್ಯ ವಿರುದ್ಧ ಯಾರು ಸಂಚು ಮಾಡಿದ್ರು ಅನ್ನೋ ದಿಕ್ಕಿನಲ್ಲೇ ತನಿಖೆ ಸಾಗಬೇಕು. ಸ್ವಿಂಗ್ ವಿಚಾರದಲ್ಲಿ ಸರ್ಕಾರದ ನಡೆ ಸರಿ ಇಲ್ಲ. ಸ್ಟಿಂಗ್ ಬಗ್ಗೆ ಮಾತಾಡಿದ್ರೆ ಕೇಸ್ ಹಾಕ್ತಾರೆ. ಯಾರು ಸ್ಟಿಂಗ್ ಮಾಡಿದ್ರೋ ಅವರನ್ನು ಬಿಟ್ ಬಿಡ್ತಿರಿ, ಇದ್ಯಾವ ನ್ಯಾಯ? ಎಂದು ಆಗ್ರಹಿಸಿದ್ದಾರೆ.ಇದನ್ನೂ ಓದಿ: 3ನೇ ಏಕದಿನ ಪಂದ್ಯದಲ್ಲಿ ಗೆದ್ದ ʻಮಳೆʼ – ಭಾರತ ಸರಣಿ ಗೆಲುವಿಗೆ ಇನ್ನೊಂದೇ ಹೆಜ್ಜೆ!
ಯೂತ್ ಕಾಂಗ್ರೆಸ್ನವರಿಗೆ ಸರ್ಕಾರವೇ ಪ್ರಚೋದನೆ ಕೊಡ್ತಿದೆ:
ಎನ್ಎಸ್ಯುಐ ಕಾರ್ಯಕರ್ತರು ಛಲವಾದಿ ನಿವಾಸಕ್ಕೆ ಬಂದು ಸಂವಿಧಾನ ಪುಸ್ತಕ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಜಟಾಪಟಿ ಅಂತ್ಯ ಕಾಣಬೇಕು ಅಂದ್ರೆ ಸರ್ಕಾರ ತೀರ್ಮಾನ ಮಾಡಬೇಕು. ಎನ್ಎಸ್ಯುಐ, ಯೂತ್ ಕಾಂಗ್ರೆಸ್ನವರಿಗೆ ಸರ್ಕಾರವೇ ಪ್ರಚೋದನೆ ಕೊಡ್ತಿದೆ. ಯೂತ್ ಕಾಂಗ್ರೆಸ್ನ ಮಂಜುನಾಥ್ ತಾವು ರೌಡಿ ಅಂತ ಒಪ್ಕೊಂಡಿದ್ದಾರೆ. ನಿಮ್ಮ ಬೆದರಿಕೆಗೆಲ್ಲ ಹೆದರಲ್ಲ. ನನಗ ಸಂವಿಧಾನ ಪುಸ್ತಕ ಕೊಡಲು ಬರ್ತಾರಂತೆ, ಇಷ್ಟೊಂದು ಬದಲಾವಣೆ ಬಂತಾ ಅವರಲ್ಲಿ? ಅವರು ಸಂವಿಧಾನ ಪುಸ್ತಕ ಕೊಟ್ರೆ ತಗೊಳ್ಳಲ್ಲ, ನನ್ನ ಬಳಿಯೇ ಇದೆ ಪುಸ್ತಕ. ಯಾರೇ ಬಂದ್ರೂ ನಾನು ಭೇಟಿ ಆಗ್ತೇನೆ ಎಂದಿದ್ದಾರೆ.ಇದನ್ನೂ ಓದಿ: ಅಂಗವಿಕಲನಂತೆ ನಟಿಸಿ ಭಿಕ್ಷಾಟನೆ – ಯುವಕನಿಗೆ ಸಾರ್ವಜನಿಕರಿಂದ ಬಿತ್ತು ಗೂಸಾ
