ಚಿಕ್ಕಮಗಳೂರು: ಇಲ್ಲಿನ (Chikkamagaluru) ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಗಲಾಟೆ ಮಾಡಿ, ಮಹಿಳಾ ಜೈಲರ್ ಮತ್ತು ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ್ದಾರೆ.
ಜೈಲಿನ ಬ್ಯಾರಕ್ 1 ರಲ್ಲಿ ನ.9ರ ರಾತ್ರಿ ಊಟದ ಸಮಯದಲ್ಲಿ ವಿಚಾರಣಾಧೀನ ಕೈದಿಗಳಾದ ಅಹ್ಮದ್ ಖಾನ್, ಅಸ್ಪಾನ್ ಇರ್ಷಾದ್ ಅಹ್ಮದ್, ಹರ್ಶಿತ್ ಮತ್ತು ಅವಿನಾಶ್ ದೊಂಡ್ರೇ ನಡುವೆ ಗಲಾಟೆಯಾಗಿದೆ. ಈ ಬಗ್ಗೆ ವಿಚಾರಿಸಲು ಹೋದ ಜೈಲರ್ ಹಾಗೂ ಸಿಬ್ಬಂದಿ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದು, ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಜೈಲು ಅಧೀಕ್ಷಕಿ ದೀಪಾ ಅವರು ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚಿಕ್ಕಮಗಳೂರು | ಅಡಿಕೆ ತೋಟದಲ್ಲಿ ಇಬ್ಬರ ಶವ ಪತ್ತೆ – ಪೊಲೀಸರಿಂದ ತನಿಖೆ ಚುರುಕು
ಈ ಆರೋಪಿಗಳು ದರೋಡೆ, ಕೊಲೆ ಯತ್ನ, ಪೋಕ್ಸೋ ಪ್ರಕರಣಗಳ (POCSO Case) ಅಡಿಯಲ್ಲಿ ಜೈಲು ಸೇರಿದ್ದರು. ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: 7 ಜನರ ಭೀಕರ ಹತ್ಯೆಗೆ ಮಗಳ ಸಾಥ್ – ಅಪ್ರಾಪ್ತೆಯಾಗಿದ್ದವಳಿಗೆ ಈಗ 18 ವರ್ಷ
