ಭೋಪಾಲ್: ಇನ್ಸ್‌ಪೆಕ್ಟರ್ ತನ್ನ ಸಹೋದ್ಯೋಗಿಯಾಗಿದ್ದ ಮಹಿಳಾ ಸಹಾಯಕ ಸಬ್-ಇನ್ಸ್‌ಪೆಕ್ಟರ್ ಮೇಲೆ ಗುಂಡು ಹಾರಿಸಿ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಇಂದೋರ್ ಪೊಲೀಸ್ ನಿಯಂತ್ರಣ ಕೊಠಡಿಯ ಆವರಣದಲ್ಲಿ ಈ ಘಟನೆ ನಡೆದಿದ್ದು, ಸ್ಥಳದಲ್ಲಿಯೇ ಇನ್ಸ್‌ಪೆಕ್ಟರ್ ಸಾವನ್ನಪ್ಪಿದ್ದಾರೆ. ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Advertisement
Advertisement
ಮೃತ ಇನ್ಸ್‌ಪೆಕ್ಟರ್‌ನನ್ನು ಹಕಮ್ ಸಿಂಗ್ ಪವಾರ್ ಎಂದು ಗುರುತಿಸಲಾಗಿದೆ. ಗುಂಡು ತಗುಲಿದ ಶಬ್ಧ ಕೇಳಿ ಬಂದ ಇತರ ಪೊಲೀಸರು ಇಬ್ಬರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಹಕಮ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದು, ಮಹಿಳೆಗೆ ಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಗಲ್ಫ್ ರಾಷ್ಟ್ರಗಳು ಪ್ರವಾದಿ ವಿವಾದದಲ್ಲಿ ಭಾರತದ ನಿಲುವನ್ನು ಅರ್ಥಮಾಡಿಕೊಂಡಿವೆ: ವಿದೇಶಾಂಗ ಕಾರ್ಯದರ್ಶಿ
Advertisement
ನಡೆದಿದ್ದೇನು?
ಹಕಮ್ ಸಿಂಗ್ ಪವಾರ್ ಮತ್ತು ಮಹಿಳಾ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಇಬ್ಬರು ಪ್ರೀತಿ ಮಾಡುತ್ತಿದ್ದರು. ಆದರೆ ಹಕಮ್ ಸಿಂಗ್ ಅವರನ್ನು ಮಧ್ಯಪ್ರದೇಶದ ರಾಜಧಾನಿ ಭೋಪಾಲ್‍ನ ಶ್ಯಾಮಲಾ ಹಿಲ್ಸ್ ಪೊಲೀಸ್ ಠಾಣೆಗೆ ಪೋಸ್ಟ್ ಮಾಡಲಾಗಿತ್ತು. ಮಹಿಳಾ ಸಹಾಯಕ ಸಬ್ ಇನ್ಸ್‍ಪೆಕ್ಟರ್‌ರನ್ನು ಇಂದೋರ್ ನಿಯಂತ್ರಣ ಕೊಠಡಿಗೆ ಪೋಸ್ಟ್ ಮಾಡಲಾಗಿತ್ತು.
Advertisement
ಇದೇ ವಿಚಾರಕ್ಕೆ ಭಿನ್ನಾಭಿಪ್ರಾಯ ಬಂದು ಈ ಘಟನೆ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ತೋರುತ್ತಿದೆ. ಆದರೆ ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಇಂದೋರ್ ಪೊಲೀಸ್ ಕಮಿಷನರ್ ಹರಿನಾರಾಯಣಚಾರಿ ಮಿಶ್ರಾ ಹೇಳಿದ್ದಾರೆ.