Connect with us

ಬಿಗ್‍ಬಾಸ್ ಚಿಕನ್ ನೀಡೋದ್ಯಾಕೆ ಅಂತ ಹೇಳಿದ್ರು ಮಂಜು

ಬಿಗ್‍ಬಾಸ್ ಚಿಕನ್ ನೀಡೋದ್ಯಾಕೆ ಅಂತ ಹೇಳಿದ್ರು ಮಂಜು

– ಮಂಜುಗೆ ಚಿಕನ್ ಫ್ರೈ, ಡ್ರೈ ಪಾಠ

ಎಂಟನೇ ಆವೃತ್ತಿಯ ಬಿಗ್‍ಬಾಸ್ ನಲ್ಲಿ ವೀಕ್ಷಕರನ್ನ ಹೆಚ್ಚು ಸೆಳೆಯುತ್ತಿರೋದು ಹಾಸ್ಯ ಕಲಾವಿದ ಪಾವಗಡ ಮಂಜು. ತಮ್ಮ ತರಲೆ ಮಾತುಗಳು, ಹಳ್ಳಿ ಸೊಗಡಿನ ಭಾಷೆ, ಪ್ರೇಮ ಕಥೆ ಹೀಗೆ ಪಾವಗಡ ಮಂಜು ಈ ಬಾರಿ ಬಿಗ್ ಮನೆಯ ಸೆಂಟರ್ ಆಫ್ ಅಟ್ರ್ಯಾಕ್ಷನ್. ಮೊದಲ ವಾರದಿಂದಲೇ ಬಿಗ್ ಮಂದಿಯನ್ನ ರಂಜಿಸುತ್ತಿರುವ ಮಂಜು ಮಾತುಗಳು ಪ್ರಶಾಂತ್ ಸಂಬರಗಿ ಸೇರಿದಂತೆ ಕೆಲವರಿಗೆ ಕಿರಿಕಿರಿ ಮಾಡಿದ್ದುಂಟು. ಇದನ್ನ ಸ್ವತಃ ಸಂಬರಗಿಯವರೇ ಹೇಳಿದ್ರು. ವಾಹಿನಿ ಇಂದಿನ ಸಂಚಿಕೆಯ ಪ್ರೋಮೋ ರಿಲೀಸ್ ಮಾಡಿದ್ದು, ಅದರಲ್ಲಿ ಬಿಗ್‍ಬಾಸ್ ಚಿಕನ್ ನೀಡೋದ್ಯಾಕೆ ಅಂತ ಮಂಜು ತಮ್ಮ ಧಾಟಿಯಲ್ಲಿ ಹೇಳಿದ್ದು ಸದ್ದು ಮಾಡ್ತಿದೆ.

ಮೂರನೇ ವಾರ ಲಕ್ಷುರಿ ಪಾಯಿಂಟ್ ನಲ್ಲಿ ಚಿಕನ್ ಪಡೆದುಕೊಂಡಿದ್ದಾರೆ. ಕಿಚನ್ ನಲ್ಲಿ ಚಂದ್ರಕಲಾ ಮೋಹನ್, ಗೀತಾ, ದಿವ್ಯಾ ಮತ್ತು ರಾಜೀವ್ ಅಡುಗೆ ಮಾಡುತ್ತಿದ್ರೆ, ಹಾಲ್ ನಲ್ಲಿ ಕುಳಿತಿದ್ದ ಶುಭಾ, ವೈಷ್ಣವಿ ಮತ್ತು ಮಂಜು ಹರಠೆ ಹೊಡೆಯುತ್ತಿದ್ರು. ಈ ವೇಳೆ ಚಿಕನ್ ಫ್ರೈ ಮತ್ತು ಡ್ರೈಗಿರೋ ವ್ಯತ್ಯಾಸವನ್ನ ಮಂಜುಗೆ ಹೇಳಿಕೊಡುತ್ತಿದ್ದರು.

ಬಿಗ್‍ಬಾಸ್ ಲಕ್ಷುರಿ ಬಜೆಟ್ ಪಾಯಿಂಟ್ ನಲ್ಲಿ ಒಂಚೂರು ಚಿಕನ್ ಜಾಸ್ತಿ ಕಳಿಸಬಹುದಿತ್ತು. ಇಷ್ಟು ಜನಕ್ಕೆ ಮೂರರಿಂದ ನಾಲ್ಕು ಕೆಜಿ ಕಳಿಸಬಹುದಿತ್ತು ಅಲ್ವಾ ಅಂದ್ರು. ಮತ್ತೆ ಯಾಕೆ ಅಷ್ಟು ಚಿಕನ್ ಕಳಿಸಲ್ಲಾ ಅನ್ನೋದನ್ನ ಸ್ವತಃ ಮಂಜು ಹೇಳಿದ್ರು. ಜಾಸ್ತಿ ಕಳಿಸಿದ್ರೆ ತಿಂದು ದಪ್ಪ ಆಗ್ತಾರೆ. ಶಕ್ತಿ ಬರೋದಕ್ಕೆ ಪ್ರೊಟಿನ್ ಕಳುಹಿಸಿದ್ದಾರೆ. ಮನೆಯಲ್ಲಿದ್ದ ನಾವು ಚಿಕನ್ ಇದೆ ಅನ್ನೋದನ್ನ ಮರೀತಾರೆ ಅಂತ ರುಚಿಗೆ ಕಳಿಸ್ತಾರೆ ಎಂದು ಹೇಳಿದ್ರು.

ಮೊದಲ ವಾರ ಟಿಕ್‍ಟಾಕ್ ಧನುಶ್ರೀ ಮತ್ತು ಎರಡನೇ ವಾರ ನಿರ್ಮಲಾ ಚೆನ್ನಪ್ಪ ಮನೆಯಿಂದ ಹೊರ ಬಂದಿದ್ದಾರೆ. ಸೋಮವಾರ ಟಾಸ್ಕ್ ಗೆದ್ದಿದ್ದ ಮಹಿಳಾ ಸದಸ್ಯರಿಗೆ ಬಿಗ್‍ಬಾಸ್ ಪಿಜ್ಜಾ ಕಳುಹಿಸಿದ್ದರು. ಬಹು ದಿನಗಳ ನಂತ್ರ ಪಿಜ್ಜಾ ನೋಡಿದ ಮಹಿಳಾ ಸ್ಪರ್ಧಿಗಳು ತಿಂದು ಎಂಜಾಯ್ ಮಾಡಿದ್ದರು.

Advertisement
Advertisement