ಭೋಪಾಲ್: ಪ್ರಿಯಕರನೊಬ್ಬ ಕಾರಿನಲ್ಲಿ ಸೆಕ್ಸ್ ಮಾಡಲು ನಿರಾಕರಿಸಿದ್ದಕ್ಕೆ ಕೋಪಗೊಂಡ ಪ್ರೇಯಸಿ ಆತನ ಮರ್ಮಾಂಗವನ್ನು ಕತ್ತರಿಸಿರುವ ಘಟನೆ ಮಧ್ಯಪ್ರದೇಶದ ಅನುಪಪುರ್ ನಲ್ಲಿ ನಡೆದಿದೆ.
ಅಜಯ್ ಪ್ರಿಯತಮೆಯಿಂದ ಹಲ್ಲೆಗೊಳಗಾದವನು. ಸುಮಾರು 12-14 ವರ್ಷಗಳಿಂದ ಇಬ್ಬರೂ ಅಕ್ರಮ ಸಂಬಂಧದಲ್ಲಿದ್ದು, ಇಬ್ಬರಿಗೂ ಬೇರೆಯವರ ಜೊತೆ ಮದುವೆಯಾಗಿದೆ. ಹಾಗಾಗಿ ಇಬ್ಬರು ಕದ್ದುಮುಚ್ಚಿ ಭೇಟಿಯಾಗುತ್ತಿದ್ದರು ಎಂದು ತಿಳಿದು ಬಂದಿದೆ.
Advertisement
Advertisement
ಪ್ರಿಯತಮೆ ಮತ್ತು ಅಜಯ್ ಇಬ್ಬರು ಕದ್ದುಮುಚ್ಚಿ ಕಾರಿನಲ್ಲಿ ಹೋಗಿದ್ದಾರೆ. ಈ ವೇಳೆ ಮಾರ್ಗ ಮಧ್ಯೆ ಪ್ರಿಯತಮೆ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸುವಂತೆ ಹೇಳಿದ್ದಾಳೆ. ಕಾರು ನಿಲ್ಲಿಸಿದ ಬಳಿಕ ತನ್ನ ಗೆಳೆಯನ ಬಳಿ ಹೋಗಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾಳೆ.
Advertisement
ಲೈಂಗಿಕ ಕ್ರಿಯೆಗೆ ಅಜಯ್ ಒಪ್ಪದ್ದಕ್ಕೆ ಕೋಪಗೊಂಡ ಪ್ರೇಯಸಿ ಹರಿತವಾದ ಚಾಕುವಿನಿಂದ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಸದ್ಯಕ್ಕೆ ಪ್ರೇಮಿ ಅಜಯ್ ನನ್ನು ಕೋಟ್ಮಾ ಕೊಲಿಯರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ನಾನು ನನ್ನ ಸ್ನೇಹಿತೆ ಕಾರಿನಲ್ಲಿ ಹೋಗುತ್ತಿದ್ದೆವು. ಸ್ವಲ್ಪ ಸಮಯದ ಬಳಿಕ ಆಕೆ ಕಾರು ನಿಲ್ಲಿಸು ಎಂದು ಕೇಳಿದಳು. ನಾನು ಕಾರನ್ನು ನಿಲ್ಲಿಸಿದೆ. ಈ ವೇಳೆ ಆಕೆ ನನ್ನ ಬಳಿ ಬಂದು ಬಟ್ಟೆ ಬಿಚ್ಚುತ್ತಾ ಸೆಕ್ಸ್ ಮಾಡುವಂತೆ ಒತ್ತಾಯಿಸಿದಳು. ನಾನು ನಿರಾಕರಿಸಿದ್ದಕ್ಕೆ ಕೋಪಗೊಂಡ ಆಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಅಜಯ್ ಹೇಳಿಕೆ ಕೊಟ್ಟಿದ್ದಾನೆ.
ಸದ್ಯಕ್ಕೆ ಪೊಲೀಸರು ಅಜಯ್ ದೂರಿನ ಮೇಲೆ ಆರೋಪಿ ಪ್ರೇಯಸಿಯನ್ನು ಬಂಧಿಸಿದ್ದಾರೆ. ಪ್ರೇಮಿ ಜೊತೆ ಕಾರು ಹತ್ತುವಾಗಲೇ ಚಾಕುವನ್ನು ಬ್ಯಾಗಿನಲ್ಲಿ ತಂದಿದ್ದಳು ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv