ಲಾಡರ್ಹಿಲ್: 2016ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ (Team india) ವಿರುದ್ಧ ಟಿ20 ಸರಣಿ ಗೆದ್ದಿದ್ದ ವೆಸ್ಟ್ ಇಂಡೀಸ್ (West Indies) ಬರೋಬ್ಬರಿ 7 ವರ್ಷಗಳ ಬಳಿಕ ಟಿ20 ಸರಣಿಯಲ್ಲಿ ಭಾರತವನ್ನ ಸೋಲಿಸಿದೆ. ಆದ್ರೆ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಈ ಸೋಲನ್ನ ಸಮರ್ಥನೆ ಮಾಡಿಕೊಂಡಿದ್ದು, ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ.
Advertisement
ವಿಂಡೀಸ್ ವಿರುದ್ಧ ನಡೆದ T20 ಸರಣಿಯ ಅಂತಿಮ ಪಂದ್ಯದಲ್ಲಿ ಸೋತ ಬಳಿಕ ಪೋಸ್ಟ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಪಾಂಡ್ಯ, ಪಂದ್ಯ ಆರಂಭವಾದ 10 ಓವರ್‌ಗಳ ನಂತರ ರನ್ ಗಳಿಸುವ ವೇಗ ಕಳೆದುಕೊಂಡಿದ್ದೆವು. ನಾನು ಕ್ರೀಸ್‌ಗೆ ಇಳಿದ ಮೇಲೂ ಪರಿಸ್ಥಿತಿಯ ಲಾಭ ಪಡೆಯಲು ಆಗಲಿಲ್ಲ. ಒಟ್ಟಿನಲ್ಲಿ ಈ ಸಿರೀಸ್‌ನಲ್ಲಿ ನಾವು ಪರಿಸ್ಥಿತಿಯ ಲಾಭ ಪಡೆದುಕೊಳ್ಳುವಲ್ಲಿ ವಿಫಲವಾದೆವು. ಹೆಚ್ಚು ವಿವರಿಸುವ ಅಗತ್ಯವಿಲ್ಲ. ಆದ್ರೆ ಮುಂದೆ ಇನ್ನಷ್ಟು ಉತ್ತಮವಾಗಿ ಆಡಲು ಪ್ರಯತ್ನಿಸುತ್ತೇವೆ. ನಮ್ಮ ಹುಡುಗರು ನಮ್ಮ ಗುಂಪಿನಲ್ಲೇ ಇದ್ದಾರೆ. ನಮಗೆ ಲೆಕ್ಕಾಚಾರ ಮಾಡಲು ಸಾಕಷ್ಟು ಸಮಯವಿದೆ. ಕೆಲವೊಮ್ಮೆ ಸೋಲುವುದು ಕೂಡ ಒಳ್ಳೆಯದೇ ಎಂದು ಸಮರ್ಥಿಸಿಕೊಂಡಿದ್ದಾರೆ.
Advertisement
Advertisement
ಇನ್ನೂ ಸ್ಲೋ ಟ್ರ್ಯಾಕ್‌ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ನಿರ್ಧಾರ ಸಮರ್ಥಿಸಿಕೊಂಡ ಪಾಂಡ್ಯ, ಈ ಆಟಗಳು ನಾವು ಕಲಿಯಬೇಕಾದ ಆಟಗಳಾಗಿವೆ. ನಾವು ಒಂದು ಗುಂಪಿನಂತೆ ಪ್ರದರ್ಶನ ನೀಡಿದ್ದೇವೆ. ಯಾವಾಗ ಬೇಕಾದರೂ ಕಠಿಣ ಮಾರ್ಗವನ್ನ ತೆಗೆದುಕೊಳ್ಳುತ್ತೇವೆ. ಒಂದು ಸರಣಿಯ ಸೋಲು ಮ್ಯಾಟರ್ ಆಗಲ್ಲ. ಆದ್ರೆ ಮುಂದಿನ ಗುರಿ ಅದರ ಕಡೆಗೆ ಇರಬೇಕಾದ ಬದ್ಧತೆ ಮುಖ್ಯವಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 7 ವರ್ಷಗಳ ಬಳಿಕ ಭಾರತದ ವಿರುದ್ಧ T20 ಸರಣಿ ಜಯ – ಹೊಸ ದಾಖಲೆ ಬರೆದ ವಿಂಡೀಸ್
Advertisement
ಮುಂದಿನ ದಿನಗಳಲ್ಲಿ ವಿಶ್ವಕಪ್ (WorldCup 2023) ಟೂರ್ನಿ ಬರುತ್ತಿದೆ. ಆದ್ದರಿಂದ ಸೋಲುವುದು ಒಳ್ಳೆಯದು. ಅದರಿಂದ ನಾವು ಬಹಳಷ್ಟು ಕಲಿಯುತ್ತೇವೆ. ಸೋಲು ಗೆಲುವಿನ ಪ್ರಕ್ರಿಯೆಯ ಒಂದು ಭಾಗವಾಗಿದೆ. ಹಾಗಾಗಿ ನಾನು ಹೆಚ್ಚು ಯೋಚನೆ ಮಾಡುವುದಿಲ್ಲ. ನನ್ನ ಮನಸ್ಸು ಏನು ಹೇಳುತ್ತದೆಯೋ ಅದನ್ನುಅನುಸರಿಸುತ್ತೇನೆ ಎಂದು ಪಾಂಡ್ಯ ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ನಾಟೌಟ್ ಅನ್ನು ಔಟ್ ಅಂತಾ ಬಿಟ್ಟುಕೊಟ್ರಾ? – DRS ತೆಗೆದುಕೊಳ್ಳದೇ ವಿಂಡೀಸ್ ವಿರುದ್ಧ ಮಕ್ಕರ್ ಆದ ಗಿಲ್
ಈ ವರ್ಷಾರಂಭದಿಂದ ಪಾಂಡ್ಯ ಟಿ20 ನಾಯಕತ್ವವನ್ನು ಯಶಸ್ವಿಯಾಗಿ ಪೂರೈಸುತ್ತಾ ಬಂದಿದ್ದರು. ವರ್ಷಾರಂಭದಲ್ಲಿ ನಡೆದ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಗೆದ್ದು ಯಶಸ್ವಿ ನಾಯಕ ಎನಿಸಿಕೊಂಡಿದ್ದರು. ಅಲ್ಲದೇ ವಿಂಡೀಸ್ ವಿರುದ್ಧ ರೋಹಿತ್ ಶರ್ಮಾ (Rohit Sharma) ಹಾಗೂ ಕೊಹ್ಲಿ (Virat Kohli) ಅನುಪಸ್ಥಿತಿಯಲ್ಲಿ ಏಕದಿನ ತಂಡವನ್ನ ಮುನ್ನಡೆಸಿ ಸೈ ಎನಿಸಿಕೊಂಡಿದ್ದರು. ಇದೀಗ ಟಿ20 ಸರಣಿ ಸೋತು ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ. ಅಲ್ಲದೇ ಸೋಲನ್ನೂ ಸಮರ್ಥಿಸಿಕೊಂಡಿರುವ ಪಾಂಡ್ಯ ಅವರ ನಡೆಯನ್ನ ಅಭಿಮಾನಿಗಳು ಹಿಗ್ಗಾ ಮುಗ್ಗ ಟ್ರೋಲ್ ಮಾಡಿದ್ದಾರೆ.
5 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಲಷ್ಟೇ ಸಾಧ್ಯವಾಯಿತು. 166 ರನ್‌ಗಳ ಗುರಿ ಪಡೆದ ವಿಂಡೀಸ್ 18 ಓವರ್‌ಗಳಲ್ಲೇ ಕೇವಲ 2 ವಿಕೆಟ್ ನಷ್ಟಕ್ಕೆ 171 ರನ್ ಚಚ್ಚಿ ಜಯ ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 3-2 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿ ಕೈವಶ ಮಾಡಿಕೊಂಡಿತು.
Web Stories