ಬಿಗ್ಬಾಸ್ (Bigg Boss) ಮನೆಯಲ್ಲಿ ಸ್ಪರ್ಧಿಗಳ ಕಂಗಳಿಂದು ಹಸಿಯಾಗಿದೆ. ಇದು ಯಾವುದೇ ಜಗಳದಿಂದಲೂ ಅಲ್ಲ, ಕಿತ್ತಾಟದಿಂದಲೂ ಅಲ್ಲ. ಸ್ಪರ್ಧಿಗಳಿಗೆ ಮನೆಯವರಿಂದ ಪತ್ರಗಳು ಬಂದಿದ್ದು, ಭಾವುಕರಾಗಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಸದಾ ಕೇಳಿಬರುತ್ತಿದ್ದ ಗದ್ದಲ, ಕಿರುಚಾಟ, ಜಗಳಗಳಿಗೆ ಕ್ಷಣಕಾಲ ತೆರೆಬಿದ್ದಿದೆ. ಬದಲಾಗಿ ಇಡೀ ಮನೆ ಸ್ಪರ್ಧಿಗಳ ಕಣ್ಣೀರಿಗೆ ಸಾಕ್ಷಿಯಾಗಿದೆ. ವಾಹಿನಿ ಪ್ರೋಮೋವೊಂದನ್ನು ರಿಲೀಸ್ ಮಾಡಿದ್ದು, ಎಲ್ಲರೂ ಪ್ರೀತಿಪಾತ್ರರ ನೆನೆದು ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ‘ರಾಮಾಯಣ’ ಅಬ್ಬರ; ಮುಂಗಡ ಬುಕಿಂಗ್ನಲ್ಲೇ 73 ಕೋಟಿ ಗಳಿಕೆ
Post ಬಂತು post
ಬಿಗ್ ಬಾಸ್ | ಸೋಮ – ಶುಕ್ರ ರಾತ್ರಿ 9:30 | ಶನಿ – ಭಾನು ರಾತ್ರಿ 9:00
ಫುಲ್ಸ್ಟಾಪ್ ಇಲ್ಲದೇ 24X7 ನಾನ್ ಸ್ಟಾಪ್ ಮನರಂಜನೆ #JioHotstarನಲ್ಲಿ – https://t.co/96hibtGUwq
#BBK13 #ColorsKannada #ಕಲರ್ಫುಲ್ಕತೆ #colorfulstory #KichchaSudeepa #CKBBKPromo https://t.co/oROSiUxGkW
— Colors Kannada (@ColorsKannada) November 3, 2026
ಬಿಗ್ಬಾಸ್ ಮನೆಯ ಗಾರ್ಡನ್ ಏರಿಯಾದಲ್ಲಿ ಒಂದು ಕೆಂಪು ಅಂಚೆ ಪೆಟ್ಟಿಗೆ ಹಾಗೂ ಅದರ ಕೀಲಿ ಕೈ ಇಡಲಾಗಿದೆ. ಅದರಲ್ಲಿ ಸ್ಪರ್ಧಿಗಳ ಮನೆಯವರು ಕಳುಹಿಸಿದ ಲೇಟರ್ಗಳನ್ನು ಇರಿಸಲಾಗಿತ್ತು. ಬಿಗ್ಬಾಸ್ ನಿಮ್ಮವರ ಪ್ರೀತಿಯ ಪತ್ರಗಳನ್ನು ಪಡೆಯಿರಿ ಎಂದು ತಿಳಿಸಿರುತ್ತಾರೆ. ಅದರಂತೆ ಓಡೋಡಿ ಬಂದು ಸ್ಪರ್ಧಿಗಳು ತಮ್ಮ ಪತ್ರ ಪಡೆದುಕೊಂಡಿದ್ದಾರೆ. ಆದರೆ ಬಿಗ್ಬಾಸ್ ಒಂದು ಟ್ವಿಸ್ಟ್ ಕೊಟ್ಟಿದ್ದಾರೆ.
ಪತ್ರದಲ್ಲಿ ಮೊದಲ ಒಂದೆರೆಡು ಪದಗಳು ಮಾತ್ರ ಕಾಣಿಸುತ್ತಿದ್ದು, ಮುಂದಿನ ಅಕ್ಷರಗಳು ಕಾಣಿಸುತ್ತಿಲ್ಲ. ಇದನ್ನು ಕಂಡು ಸ್ಪರ್ಧಿಗಳು ಒಂದು ಕ್ಷಣ ಶಾಕ್ ಆಗಿದ್ದಾರೆ. ಆಗ ಬಿಗ್ಬಾಸ್ ಒಂದು ಷರತ್ತನ್ನು ಮುಂದಿಟ್ಟಿದ್ದು, ನೀಡುವ ಸವಾಲುಗಳನ್ನು ಗೆದ್ದರಷ್ಟೇ ನಿಮಗೆ ಬಂದಿರುವ ಪತ್ರವನ್ನು ಪಡೆಯಲು ಸಾಧ್ಯ ಎಂದಿಟ್ಟಿದ್ದಾರೆ.ಇದನ್ನೂ ಓದಿ: ಬಚ್ಚನ್ ಮನೆ ಮೇಲೆ ಬಾಂಬ್ ಬೆದರಿಕೆ – ಬುಲೆಟ್ಪ್ರೂಫ್ ಗ್ಲಾಸ್ ಭದ್ರತೆಯಲ್ಲಿ ಫ್ಯಾನ್ಸ್ ಮೀಟಾದ ಬಿಗ್ ಬಿ
