ChikkaballapurCrimeDistrictsKarnatakaLatestLeading NewsMain Post

ನನ್ನ ತಲೆ ಕೆಡಿಸಿ, ಡಿವೋರ್ಸ್ ಕೊಡಿಸಿ ಮೋಸ ಮಾಡಿದ್ದಾನೆ- ಚಿಕ್ಕಬಳ್ಳಾಪುರದಲ್ಲಿ `ಪವಿತ್ರಾ ಮ್ಯಾರೇಜ್ ಸ್ಟೋರಿ’

- ಗಂಡನ ಮನೆ ಮುಂದೆ ಮೊದಲ ಪತ್ನಿ ಧರಣಿ

Advertisements

– ಪತ್ನಿಗೆ ವಿಚ್ಛೇದನ ನೀಡಿ ಮರು ಮದುವೆಯಾಗಿದ್ದ ಸಹೋದ್ಯೋಗಿ
– ಅಂರ್ತಜಾತಿ ಅಂತ ಈಗ ವಿವಾಹಿತೆಗೆ ಕೈಕೊಟ್ಟು ಸ್ವಜಾತಿಯವಳ ಕೈ ಹಿಡಿದ

ಚಿಕ್ಕಬಳ್ಳಾಪುರ: ಮತ್ತೊಬ್ಬರೊಂದಿಗೆ ಮದುವೆಯಾಗಿದ್ದರೂ ನನ್ನ ತಲೆಕೆಡಿಸಿ ಅವರಿಗೆ ಡಿವೋರ್ಸ್ ಕೊಡಿಸಿದ್ದ, ನಂತರ ತಾನು ಕಾನೂನು ಪ್ರಕಾರ ರಿಜಿಸ್ಟರ್ ಮ್ಯಾರೇಜ್ ಆಗಿ ಈಗ ನನಗೆ ಮೋಸ ಮಾಡಿದ್ದಾನೆ ಎಂದು ನೊಂದ ಮಹಿಳೆ ಗಂಡನ ಮನೆ ಎದುರೇ ಧರಣಿ ಕುಳಿತಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಸಾದೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗೌರಿಬಿದನೂರು ತಾಲೂಕಿನ ಶಂಭೂಕನಗರದ ನಿವಾಸಿ ಪವಿತ್ರಾ ಎಂಬಾಕೆಯೇ ಧರಣಿ ಕುಳಿತ ಮಹಿಳೆ. ಇದೇ ಸಾದೇನಹಳ್ಳಿ ಗ್ರಾಮದ ಜಯಮ್ಮ ನಾರಾಯಣಸ್ವಾಮಿಯ ಮಗ ಮಂಜುನಾಥ್ ವಂಚನೆ ಮಾಡಿರುವಾತ ಎಂದು ಹೇಳಲಾಗಿದೆ.

ಪವಿತ್ರಾ ಮ್ಯಾರೇಜ್ ಸ್ಟೋರಿ ಹಿನ್ನೆಲೆ: ಸದ್ಯ ಗಂಡನ ಮನೆಯ ಮುಂದೆ ಧರಣಿ ಕುಳಿತು ನ್ಯಾಯಕ್ಕಾಗಿ ಆಗ್ರಹ ಮಾಡ್ತಿರೋ ಪವಿತ್ರಾ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ದಾದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇದೇ ಜಿಲ್ಲಾಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಹೋದ್ಯೊಗಿ ಮಂಜುನಾಥ್ ಅವರೊಂದಿಗೆ ವಿವಾಹವಾಗಿದ್ದರು.

ಮೊದಲು ಪವಿತ್ರಾ ಬೇರೊಬ್ಬರನ್ನ ಮದುವೆಯಾಗಿದ್ದರು. ಆಕೆಯ ತಲೆ ಕೆಡಿಸಿದ ಮಂಜುನಾಥ್ ಮದುವೆಯಾದ ಒಂದು ತಿಂಗಳಿಗೇ ಗಂಡನಿಗೆ ಡಿವೋರ್ಸ್ ಕೊಡುವಂತೆ ಮಾಡಿದ್ದನು. ನಂತರ ಲಿವ್ ಇನ್ ರಿಲೇಷನ್‌ನಲ್ಲಿದ್ದ ಮಂಜುನಾಥ್ -ಪವಿತ್ರಾ 2021ರ ಜೂನ್ 21ರಂದ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದರೆ ಪವಿತ್ರಾ ಅಂತರ್ಜಾತಿ ಎಂಬ ಕಾರಣಕ್ಕೆ ಮನೆಯವರು ಒಪ್ಪಿಕೊಂಡಿರಲಿಲ್ಲ. ಆದರೆ ಮಂಜುನಾಥ್ ಇಬ್ಬರನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಸ್ವಜಾತಿಯ ಯುವತಿಯನ್ನು ಸಹ ವರಿಸಿದ್ದನು.

ಕೆಲದಿನಗಳವರೆಗೆ ಸಂಸಾರ ಚೆನ್ನಾಗಿಯೇ ಇತ್ತು. ನಂತರ ಮಂಜುನಾಥ್ ನಮ್ಮ ಮನೆಗೆ ಬರೋದನ್ನೇ ನಿಲ್ಲಿಸಿದ್ದಾನೆ ಎಂದು ಪವಿತ್ರಾ ಆರೋಪಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮಂಜುನಾಥ್ ನಾವಿಬ್ಬರು ಪ್ರೀತಿಸಿದ್ದು ನಿಜ. ಆದರೆ ನನಗೆ ಬ್ಲಾಕ್‌ಮೇಲ್ ಮಾಡಿ ಬಲವಂತವಾಗಿ ಪವಿತ್ರಾ ಕಡೆಯವರು ರಿಜಿಸ್ಟರ್ ಮದುವೆ ಮಾಡಿಸಿದ್ರು. ಇದರಲ್ಲಿ ನನ್ನದೇನೂ ತಪ್ಪಿಲ್ಲ. ಕಾನೂನು ಕ್ರಮ ಏನಿದೆ ಅದು ಆಗಲಿ ಎಂದು ಹೇಳಿದ್ದಾನೆ.

Live Tv

Leave a Reply

Your email address will not be published.

Back to top button