ಮೈಸೂರು: ನನ್ನ ಬೆಂಬಲದಿಂದಲೇ ಕುಮಾರಸ್ವಾಮಿ(H D Kumaraswamy) ಎರಡು ಬಾರಿ ಮುಖ್ಯಮಂತ್ರಿ ಆಗಿದ್ದು ಎಂದು ಶಾಸಕ ಜಿ.ಟಿ.ದೇವೇಗೌಡ (G T Devegowda) ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ(Mysuru) ಮಾತನಾಡಿದ ಅವರು, ನನಗೆ ಮೊಬೈಲ್ ಸರಿಯಾಗಿ ಬಳಸಲು ಬರುವುದಿಲ್ಲ. ಇನ್‌ಸ್ಟಾಗ್ರಾಂ(Instagram) ನೋಡುವುದಿಲ್ಲ. ಎಸ್‌ಎಂಎಸ್ ಓದಲು ಕೂಡ ಬರುವುದಿಲ್ಲ. ನನ್ನ ಪಿಎಗಳು ಕರೆಗಳನ್ನು ಮಾಡಿಕೊಡುತ್ತಾರೆ. ನಾನು ಟಿವಿಯನ್ನೂ ನೋಡಿಲ್ಲ. ಆದ್ದರಿಂದ ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು.
ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿ. ಜನರು ಅಭಿವೃದ್ಧಿಗಾಗಿ ನನ್ನ ಜೊತೆ ಇದ್ದಾರೆ. 2028ರ ಚುನಾವಣೆಯಲ್ಲೂ ಸ್ಪರ್ಧೆ ಮಾಡಿ, ನಿಮ್ಮ ಜೊತೆ ಇರುತ್ತೇವೆ ಎಂದು ಜನರು ಹೇಳುತ್ತಿದ್ದಾರೆ. ಅಭಿವೃದ್ಧಿ ಬಿಟ್ಟರೆ ಬೇರೆ ರಾಜಕಾರಣ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿ, ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾರೆ. ಈಗ ಕೇಂದ್ರ ಸಚಿವರಾಗಿದ್ದಾರೆ. ಅವರಿಗೆ ಸಾಕಷ್ಟು ಅನುಭವ ಇದೆ. ಪಕ್ಷವನ್ನು ಉಳಿಸುವ ಶಕ್ತಿ ಅವರಲ್ಲಿದೆ. ನನಗೂ ಸಚಿವನಾಗಿ ಕೆಲಸ ಮಾಡಲು ಅವರು ಸಹಾಯ ಮಾಡಿದ್ದಾರೆ. ‘ಕುಮಾರ ಪರ್ವ’ ಯಶಸ್ವಿಯಾಗಿದ್ದು ಚಾಮುಂಡೇಶ್ವರಿ ಕ್ಷೇತ್ರದ ಜನರಿಂದ ಮಾತ್ರ. ಬೇರೆ ಯಾವುದೇ ಕ್ಷೇತ್ರದಲ್ಲಿ ಇಂತಹ ಸಮಾವೇಶ ನಡೆದಿಲ್ಲ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿರುವ ಕುರಿತು ಕೇಳಿದ ಪ್ರಶ್ನೆಗೆ, ನಾನು ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿಲ್ಲ. ಚಾಮುಂಡಿ ಬೆಟ್ಟದಲ್ಲಿ ಮಾತನಾಡಿದ ನಂತರ ಕಾಂಗ್ರೆಸ್‌ಗೆ ಹೋಗುತ್ತಾರೆ ಎಂದು ಕೆಲವರು ಹೇಳಿದರು. ಆದರೆ ನಾನು ಕಾಂಗ್ರೆಸ್‌ಗೆ ಹೋಗಿದ್ದೀನಾ ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಕ್ರೈಮ್ ಪಾರ್ಟ್ನರ್ ಜೊತೆ ಕುಳಿತು ಖುಷಿ ಖುಷಿಯಾಗಿ ಕ್ರಿಕೆಟ್ ಮ್ಯಾಚ್ ವೀಕ್ಷಿಸಿದ್ದ ಸಿಯಾ – ವಿಡಿಯೋ ವೈರಲ್
ತಮ್ಮ ಪುತ್ರ ಹರೀಶ್ ಗೌಡ ಅವರೊಂದಿಗೆ ಇರುವ ಭಿನ್ನಾಭಿಪ್ರಾಯದ ಬಗ್ಗೆ ಮಾತನಾಡಿದ ಅವರು, ಯಾವ ಕುಟುಂಬದಲ್ಲಿ ಜಗಳ ಇರುವುದಿಲ್ಲ ಹೇಳಿ? ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಅಪ್ಪ-ಮಗ ಮತ್ತೆ ಒಂದಾಗುತ್ತೇವೆ. ಒಂದಾಗುವುದಿಲ್ಲ ಎಂದುಕೊಳ್ಳುವವರು ಮೂರ್ಖರು ಎಂದು ಟಾಂಗ್ ಕೊಟ್ಟರು.
ಇದೇ ವೇಳೆ, ಇತರೆ ಶಾಸಕರಿಗೆ ನೀಡಿದಂತೆ ನನ್ನ ಕ್ಷೇತ್ರಕ್ಕೂ ಸಿಎಂ 25 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ ಎಂದು ಜಿಟಿಡಿ ಮಾಹಿತಿ ನೀಡಿದರು.ಇದನ್ನೂ ಓದಿ: ಆಪಲ್ ಉತ್ಪನ್ನಗಳ ಬೆಲೆ ಭಾರೀ ಏರಿಕೆ – ಹಿಂದೆ ಎಷ್ಟಿತ್ತು? ಈಗ ಎಷ್ಟಾಗಿದೆ?
