ಮುಂಬೈ: ಭಾವಿ ಪತಿ ಕೇತನ್ ಅಗರ್ವಾಲ್ (Chetan Chaudhary) ಅವರನ್ನು ಹತ್ಯೆಗೈದು ಬಂಧನಕ್ಕೊಳಗಾಗಿರುವ ಸಿಯಾ ಗೋಯಲ್ (Siya Goyal) ಹಾಗೂ ಆಕೆಯ ಗೆಳೆಯ ಚೇತನ್ ಚೌಧರಿ ಇಬ್ಬರು ಜೊತೆಯಲ್ಲಿ ಕುಳಿತು ಕ್ರಿಕೆಟ್ ಮ್ಯಾಚ್ ವೀಕ್ಷಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಟೀಂ ಇಂಡಿಯಾದ ಜೆರ್ಸಿ ಧರಿಸಿದ್ದಾರೆ. ಮ್ಯಾಚ್ ನೋಡಿ, ಚಪ್ಪಾಳೆ ತಟ್ಟುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಇದು ಯಾವಾಗ ನಡೆದ ಕ್ರಿಕೆಟ್ ಪಂದ್ಯ ಎಂಬ ಬಗ್ಗೆ ಇನ್ನೂ ತಿಳಿದು ಬಂದಿಲ್ಲ. ಇದನ್ನೂ ಓದಿ: ಇಷ್ಟ ಇಲ್ಲ ಎಂದಿದ್ದರೆ ಮದುವೆಯನ್ನೇ ನಿಲ್ಲಿಸುತ್ತಿದ್ದೆವು: ಪೊಲೀಸರೆದುರು ಸಿಯಾ ಸಹೋದರನ ಮಾತು

ವಿಚಾರಣೆ ವೇಳೆ, ಕೇತನ್‌ನನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಮದುವೆ ರದ್ದುಗೊಳಿಸುವುದಕ್ಕಿಂತ ಆತನನ್ನು ಕೊಲೆ ಮಾಡುವುದು ಸುಲಭವಾಗಿತ್ತು ಎಂದು ಪೊಲೀಸರ ಮುಂದೆ ಸಿಯಾ ಒಪ್ಪಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ.
ಇದರ ನಡುವೆ ಸಿಯಾ ಮತ್ತು ಕೇತನ್ ಕುಟುಂಬಸ್ಥರು ಚೇತನ್ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಸಿಯಾ, ಕೇತನ್‌ನನ್ನು ಮದುವೆಯಾಗುವುದಿಲ್ಲ ಎಂದಿದ್ದರೆ ನಾವು ಮದುವೆಯನ್ನು ರದ್ದುಗೊಳಿಸುತ್ತಿದ್ದೆವು ಎಂದು ಎರಡೂ ಕುಟುಂಬಗಳು ಹೇಳಿಕೊಂಡಿವೆ.
ಜೂನ್ 18 ರಂದು ಲೋಹಗಡ (Lohagad Fort) ಕೋಟೆಯ ಎತ್ತರದ ಪ್ರದೇಶದಿಂದ ಕೇತನ್ ಅಗರ್ವಾಲ್ ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಅವಳ ಪ್ರಿಯಕರ ಚೇತನ್ ಚೌಧರಿ (22) ತಳ್ಳಿ ಕೊಲೆಗೈದಿದ್ದರು. ಈ ಹತ್ಯೆಯಲ್ಲಿ ಸಿಯಾ ಮತ್ತು ಚೇತನ್ ಇಬ್ಬರ ಪಾತ್ರ ದೃಢಪಟ್ಟಿದೆ. ಸಂಬಂಧಿಕರು ಮತ್ತು ಸ್ನೇಹಿತರನ್ನು ಹೆಚ್ಚಿನ ವಿಚಾರಣೆಗೆ ಕರೆಸಲಾಗುವುದು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ (ಲೋನಾವಾಲ ವಿಭಾಗ) ಗಜಾನನ್ ಟೋನ್ಪೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನನ್ನ ಮಗಳು ತಪ್ಪು ಮಾಡಿದ್ರೆ ಅದೇ ಕೋಟೆಯಿಂದ ತಳ್ಳಿ ಬಿಡಿ – ಸಿಯಾ ಪೋಷಕರ ಆಕ್ರೋಶ
